AI ನಾಯಿಯಿಂದ ಕೋರ್ಟ್ ಮೆಟ್ಟಿಲು ಏರಲಿದೆ BCCI: ಕಾರಣವೇನು?
ಐಪಿಎಲ್ 2025 (IPL 2025) ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಈ ವೇಳೆ ಎಲ್ಲ ತಂಡಗಳು ಪ್ಲೇ ಆಫ್ ಮೇಲೆ ಕಣ್ಣು ನೆಟ್ಟಿವೆ. ಈ ಲೀಗ್ ದಿನ ಕಳೆದಂತೆ ಅಭಿಮಾನಿಗಳಿಗೆ ಹತ್ತಿರವಾಗುತ್ತಿದೆ. ಈ ವೇಳೆ ಐಪಿಎಲ್ ಆಯೋಜಕರು ಪ್ರತಿ ಸಾರಿಯಂತೆ ಈ ಬಾರಿಯೂ ಏನಾದ್ರೂ ಹೊಸದನ್ನು ಮಾಡಬೇಕು ಎಂಬ ಆಲೋಚನೆಯಲ್ಲಿ ರೋಬೋಟ್ ನಿರ್ಮಾಣ ಮಾಡಿದೆ. ಈ ರೋಬೋಟ್ ಈಗ ಬಿಸಿಸಿಐಗೆ (BCCI) ಕೋರ್ಟ್ ಕಟಕಟೆಗೆ ತಂದು ನಿಲ್ಲಿಸಿದೆ.
ಅಂದಹಾಗೆ ರೋಬೋಟ್ ಐಪಿಎಲ್ ವೇದಿಕೆಗೆ ಬಂದಾಗಿನಿಂದ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ವೀಕ್ಷಕ ವಿವರಣೆಗಾರರು ಈ ನಾಯಿಗೆ ಮುದ್ದಾದ ಹೆಸರು ಇಡಬೇಕು ಎಂದು ಯೋಚಿಸಿ. ಚರ್ಚಿಸಿದ ಬಳಿಕ ಚಂಪಕ್ ಎಂದು ಹೇಸರಿಸಲಾಗಿದೆ. ಈ ಚಂಪಕ್‌ನ್ನು (Champak) ಟಾಸ್ ಆರಂಭವಾಗುವ ಸಮಯದಲ್ಲಿ, ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದಾಗ ಚಿಲ್ ಗರ್ಲ್ ಜೊತೆಗೆ, ಅಲ್ಲದೆ ಕ್ರಿಕೆಟ್ ಆಟಗಾರರು ಅಭ್ಯಾಸ ಮಾಡುವಾಗ ಈ ನಾಯಿ ಎಲ್ಲರ ಗಮನ ಸೆಳೆದಿತ್ತು. ಈಗ ಈ ಚಂಪಕ್‌ನಿಂದಾಗಿ ಬಿಸಿಸಿಐ ಕೋರ್ಟ್ ಕಟಕಟೆ ಏರುವಂತೆ ಆಗಿದೆ. ಹೈಕೋರ್ಟ್‌ನಿಂದ ಬಿಸಿಸಿಐಗೆ ನೋಟಿಸ್ ಜಾರಿ ಮಾಡಲಾಗಿದೆ. ಹಾಗಿದ್ದರೆ ಏನಿದು ಪ್ರಕರಣ ಎಂಬ ಬಗ್ಗೆ ವರದಿ ಇಲ್ಲಿದೆ.

ಬಿಸಿಸಿಐ ಹಾಗೂ ಐಪಿಎಲ್ (IPL) ಜಂಟಿಯಾಗಿ ಎಐ (AI) ತಂತ್ರಜ್ಞಾನವನ್ನು ಬಳಸಿ ನಾಯಿಯನ್ನು ನಿರ್ಮಿಸಲಾಗಿದೆ. ಈ ರೋಬೋಟ್ ನಾಯಿಯನ್ನು ಏಪ್ರಿಲ್ 20 ರಂದು ಪರಿಚಯಿಸಿತ್ತು. ಈ ರೋಬೋಟ್‌ನ ಹೆಸರಿನಿಂದ ಬಿಸಿಸಿಐ ಕೋರ್ಟ್ ಮೆಟ್ಟಿಲು ಏರಲಿದೆ.
ಏನಿದು ಪ್ರಕರಣ?
ಈ ರೋಬೋಟ್ ನಾಯಿಗೆ ಹೆಸರಿಡುವಾಗಿ ಟ್ರೆಡ್ ಮಾರ್ಕ್ ಉಲ್ಲಂಘನೆ ಆಗಿದೆ ಎಂದು ಆರೋಪಿಸಲಾಗಿದೆ. ಅಂದಹಾಗೆ ಈ ಆರೋಪವನ್ನು ಮಾಡಿದ್ದು, ದೆಹಲಿ ಪ್ರೆಸ್ ಪೇಪರ್ ಪ್ರಕಟಿಸುವ ಚಂಪಕ್ ಕಾಮಿಕ್ ಪ್ರಕಾಶಕರು. ಇದೇ ವೇಳೆ ಪ್ರಕಾಶಕರು ಚಂಪಕ್ ಎನ್ನುವುದು ಪ್ರಸಿದ್ಧ ಬ್ರ್ಯಾಂಡ್ ಆಗಿದ್ದು, ಆ ಬ್ರ್ಯಾಂಡ್ ಘನತೆಗೆ ಧಕ್ಕೆ ತರಲಾಗಿದೆ ಎಂದು ಪ್ರಕಾಶಕರು ಕೋರ್ಟ್‌ನಲ್ಲಿ ತಿಳಿಸಿದ್ದಾರೆ.
ವಾದ, ಪ್ರತಿವಾದ
ಈ ವಿಚಾರಣೆಯನ್ನು ದೆಹಲಿಯ ಹೈಕೋರ್ಟ್ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಮುಂದೆ ನಡೆಯುತ್ತಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9ರಂದು ನಡೆಯಲಿದೆ. ಚಂಪಕ್ ಎನ್ನುವ ಬ್ರ್ಯಾಂಡ್ ತುಂಬ ಹಳೆಯದು. ಈ ಬ್ರ್ಯಾಂಡ್‌ಗೆ ಈಗ ಧಕ್ಕೆ ಬಂದಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ. ನ್ಯಾಯಾಧೀಶರು ಎರಡು ಕಡೆಯ ವಾದ ಪ್ರತಿವಾದವನ್ನು ಆಲಿಸಲಾಗಿದೆ. ಇದೇ ವೇಳೆ ಪ್ರಕಾಶಕರ ಪರ ವಕೀಲರು, ನನ್ನ ಪತ್ರಿಕೆಯ ಹೆಸರನ್ನು ಪ್ರಾಣಿಗಳಿಗೆ ಇಡಲಾಗಿದೆ. ಈಗಾಗಲೇ ಐಪಿಎಲ್ ನಡೆದಿದೆ. ಮೊದಲೇ ಎಐ ರೋಬೋಟ್ ಪರಿಚಯಿಸಲಾಗಿತ್ತು. ಆದರೆ ಅದಕ್ಕೆ ಹೆಸರನ್ನು ಬಳಿಕ ಈಡಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಈ ಎಐ ನಾಯಿಗೆ ಅಭಿಮಾನಿಗಳಿಗೆ ಹೆಸರು ಇಡುವಂತೆ ಸೂಚಿಸಲಾಗಿತ್ತು. ಆ ಬಳಿಕ ಅಭಿಮಾನಿಗಳ ಮತದಾನದ ಮೂಲಕ ಈ ರೋಬೋಟ್ ನಾಯಿಗೆ ಚಂಪಕ್ ಎಂದು ಹೆಸರಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications