ಟೀಂ ಇಂಡಿಯಾ ಕಂಡ ಶ್ರೇಷ್ಠ ಎಡಗೈ ವೇಗಿ ಜಹೀರ್: ಸಚಿನ್
ಬೆಂಗಳೂರು, ಅ.15: ಭಾರತ ಕಂಡ ಅತ್ಯಂತ ಶ್ರೇಷ್ಠ ಎಡಗೈ ವೇಗಿ ಜಹೀರ್ ಖಾನ್ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಗಳಿದೆ. ಜಹೀರ್ ಖಾನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿಸಿಸಿಐ ಪ್ರತಿಕಾ ಹೇಳಿಕೆ ಪ್ರಕಟಿಸಿದೆ.
ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರು ಗುರುವಾರ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತ ಉಪ ಖಂಡ ಕಂಡ ಶ್ರೇಷ್ಠ ಬೌಲರ್ ಗಳ ಸಾಲಿಗೆ ಜಹೀರ್ ಖಾನ್ ಸೇರುತ್ತಾರೆ. 92 ಟೆಸ್ಟ್ ಪಂದ್ಯ ಹಾಗೂ 200 ಏಕದಿನ ಕ್ರಿಕೆಟ್ ಆಡಿ, ಅನೇಕ ಬಾರಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಅನುರಾಗ್ ಠಾಕೂರ್ ಹೇಳಿದ್ದಾರೆ.[ಕ್ರಿಕೆಟ್ : ನಿವೃತ್ತಿ ಘೋಷಿಸಿದರೂ ಜಹೀರ್ ಆಡ್ತಾರಂತೆ!]
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರೂ ಇಂಡಿಯನ್ ಪ್ರಿಮಿಯರ್ ಲೀಗ್ ನ ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಲಿದ್ದಾರೆ. ನಿವೃತ್ತಿಯ ನಂತರದ ಅವರ ಜೀವನಕ್ಕೆ ಶುಭ ಕೋರುತ್ತೇನೆ' ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿತ್ತು. ಸಚಿನ್ ತೆಂಡೂಲ್ಕರ್ ಸೇರಿದಂತೆ ಜಹೀರ್ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಶ್ರೇಷ್ಠ ಎಡಗೈ ಬೌಲರ್ ಜಹೀರ್ ಖಾನ್
92 ಪಂದ್ಯಗಳಲ್ಲಿ ಜಹೀರ್ 311 ವಿಕೆಟ್ ಪಡೆದಿದ್ದಾರೆ. ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪೈಕಿ ಅನಿಲ್ ಕುಂಬ್ಳೆ(619), ಕಪಿಲ್ ದೇವ್(434) ಹರ್ಬಜನ್ ಸಿಂಗ್(417) ನಂತರದ ನಾಲ್ಕನೇ ಸ್ಥಾನದಲ್ಲಿ ಜಹೀರ್ ಇದ್ದಾರೆ.
ಕೂಲ್ ಬೌಲರ್ ಜಹೀರ್ ಎಂದ ಸಚಿನ್
ನಾನು ಕಂಡ ಕೂಲ್ ಬೌಲರ್ ಜಹೀರ್ ಖಾನ್ ಎಂದ ಸಚಿನ್ ಅವರು ಜಹೀರ್ ಅವರು ತುಂಬಾ ಜಾಣ್ಮೆಯಿಂದ ಬೌಲಿಂಗ್ ಮಾಡುತ್ತಿದ್ದರು.
ಐಪಿಎಲ್ 9ರಲ್ಲಿ ಮತ್ತೆ ಸಿಗೋಣ ಎಂದ ಜಹೀರ್
ಐಪಿಎಲ್ 9ರಲ್ಲಿ ಮತ್ತೆ ಸಿಗೋಣ ಎಂದ ಜಹೀರ್ ಅವರ ನಿವೃತ್ತಿ ಘೋಷಣಾ ಪತ್ರ.
ರಾಜೀವ್ ಶುಕ್ಲಾರಿಂದ ಟ್ವೀಟ್
ರಾಜೀವ್ ಶುಕ್ಲಾರಿಂದ ಮೊದಲ ಬಾರಿಗೆ ಜಹೀರ್ ಅವರ ನಿವೃತ್ತಿ ಬಗ್ಗೆ ಟ್ವೀಟ್.
ವಿಶ್ಲೇಷಕ ರಾಮಚಂದ್ರನ್ ಅವರಿಂದ ಟ್ವೀಟ್
ಕ್ರಿಕೆಟ್ ವಿಶ್ಲೇಷಕ, ಮೈಸೂರು ನಿವಾಸಿ ರಾಮಚಂದ್ರನ್ ಅವರಿಂದ ಟ್ವೀಟ್.
ಜಹೀರ್ ಖಾನ್ ಅವರ ವೃತ್ತಿ ಬದುಕಿನ ಅಂಕಿ ಅಂಶ
ಜಹೀರ್ ಖಾನ್ ಅವರ ವೃತ್ತಿ ಬದುಕಿನ ಅಂಕಿ ಅಂಶವನ್ನು ಟ್ವೀಟ್ ಮಾಡಿದ ಅಭಿಮಾನಿಗಳು.
ಜಹೀರ್ ಖಾನ್ ಹಾಕುತ್ತಿದ್ದ ಯಾರ್ಕರ್ ಗಳು ಸೂಪರ್
ಜಹೀರ್ ಖಾನ್ ಹಾಕುತ್ತಿದ್ದ ಯಾರ್ಕರ್ ಗಳು ಸೂಪರ್ ಎಂದು ಟ್ವೀಟ್.
ನಾಲ್ಕನೇ ಶ್ರೇಷ್ಠ ಬೌಲರ್ ಜಹೀರ್
ನಾಲ್ಕನೇ ಶ್ರೇಷ್ಠ ಬೌಲರ್ ಜಹೀರ್ ಅವರಿಗೆ ಶುಭವಾಗಲಿ, ಅವರ ಮುಂದಿನ ಬದುಕು ಹಸನಾಗಿರಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications