ಮುಂದಿನ ಟಿ20 ವಿಶ್ವಕಪ್‌ಗೆ ಈತನೇ ನಾಯಕ !, ಟಿ20 ವಿಶ್ವಕಪ್ ಮುಗಿದ ನಂತರ ತಂಡದಲ್ಲಿ ಹಲವು ಬದಲಾವಣೆ

ನವೆಂಬರ್ 13ರಂದು ಟಿ20 ವಿಶ್ವಕಪ್‌ಗೆ ತೆರ ಬೀಳಲಿದೆ. ಮುಂದಿನ ಟಿ20 ವಿಶ್ವಕಪ್ 2024ಕ್ಕೆ ನಡೆಯಲಿದೆ. ಮುಂದಿನ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈಗಿನಿಂದಲೇ ಬಲಿಷ್ಠ ತಂಡವನ್ನು ಕಟ್ಟಲು ಯೋಜನೆ ರೂಪಿಸಿದೆ.
ಸದ್ಯ ರೋಹಿತ್ ಶರ್ಮಾ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಹಲವು ಟಿ20 ಸರಣಿಗಳನ್ನು ಗೆದ್ದಿದೆ. ಸದ್ಯ ಟಿ20 ವಿಶ್ವಕಪ್ ಗೆಲ್ಲುವತ್ತ ತಂಡ ಯೋಜಿಸುತ್ತಿದೆ. ಆದರೆ, ಮುಂದಿನ ಟಿ20 ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ನಾಯಕರಾಗಿ ಉಳಿಯುವುದು ಅನುಮಾನವಾಗಿದೆ. ಆದ್ದರಿಂದಲೇ, ಹೊಸ ನಾಯಕನನ್ನು ಸಿದ್ಧಗೊಳಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ.
ಬಿಸಿಸಿಐನ ಪರಿವರ್ತನಾ ಯೋಜನೆಯ ಭಾಗವಾಗಿ, ಕೆಎಲ್ ರಾಹುಲ್ ಜೊತೆಗೆ ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ 2023ರ ಏಕದಿನ ವಿಶ್ವಕಪ್ ನಂತರ ಹಲವು ಜವಾಬ್ದಾರಿ ವಹಿಸುವುದು ನಿಶ್ಚಿತವಾಗಿದೆ. ವಿರಾಟ್ ಕೊಹ್ಲಿಯನ್ನು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಕೇಳಲಾಗುತ್ತದೆ ಮತ್ತು ಅವರನ್ನು ದೊಡ್ಡ ಸರಣಿಗಳು ಮತ್ತು ಪಂದ್ಯಾವಳಿಗಳಲ್ಲಿ ಮಾತ್ರ ಟಿ20 ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆ ಇದೆ.

ರೋಹಿತ್ ಶರ್ಮಾ ನಾಯಕತ್ವ ತೆರವಿಗೆ ಯೋಜನೆ
ರೋಹಿತ್ ಶರ್ಮಾಗೆ ಈಗಾಗಲೇ 35 ವರ್ಷ, ವಿರಾಟ್ ಕೊಹ್ಲಿ ವಯಸ್ಸು 34. ಭಾರತೀಯ ಕ್ರಿಕೆಟ್‌ನ ಇಬ್ಬರೂ ದಿಗ್ಗಜರು ಹೆಚ್ಚಿನ ವರ್ಷ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಭಾರತದ ಎಲ್ಲಾ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಇಬ್ಬರೂ ನಿರ್ಣಾಯಕವಾಗಿದ್ದಾರೆ.
"ಭಾರತಕ್ಕೆ ಅವರಿಬ್ಬರು ನಿರ್ಣಾಯಕ ಆಟಗಾರರು ಎಂದು ಗೊತ್ತಿದೆ. ದೊಡ್ಡ ಸರಣಿಗಳು ಮತ್ತು ಐಸಿಸಿ ಪಂದ್ಯಾವಳಿಗಳಿಗಾಗಿ ಅವರನ್ನು ನಿರಂತರವಾಗಿ ಆಡಿಸಬೇಕು ಮತ್ತು ವಿಶ್ರಾಂತಿ ಪಡೆಯಬೇಕು. ಆದರೆ ಒಬ್ಬ ನಾಯಕನನ್ನು ಎಲ್ಲಾ ಕಡೆ ಆಡಿಸಲು ಸಾಧ್ಯವಿಲ್ಲ, ಟಿ20 ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ರಿಷಬ್ ಪಂತ್ ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಾದಾಗ ಹಂತ ಹಂತವಾಗಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ಏಕದಿನ ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕ
2023ರ ಏಕದಿನ ವಿಶ್ವಕಪ್‌ವರೆಗೆ ರೋಹಿತ್ ಶರ್ಮಾ ಭಾರತದ ಎಲ್ಲಾ ಸ್ವರೂಪಗಳಿಗೆ ನಾಯಕರಾಗಿ ಮುಂದುವರಿಯುತ್ತಾರೆ. ಏಕದಿನ ವಿಶ್ವಕಪ್ ನಂತರ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸಲಿದ್ದಾರೆ.
ಆದ್ದರಿಂದ ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ನಾಯಕತ್ವದ ಪಾತ್ರವನ್ನು ಹಂಚಿಕೊಳ್ಳಲಿದ್ದಾರೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ನಂತರ, ಬಿಸಿಸಿಐ ಮತ್ತು ಆಯ್ಕೆದಾರರು ರೋಹಿತ್ ಶರ್ಮಾ ಅವರೊಂದಿಗೆ ನಾಯಕತ್ವದ ಆಯ್ಕೆಗಳನ್ನು ಚರ್ಚಿಸುತ್ತಾರೆ.
ಗಾಯ ಮತ್ತು ಫಿಟ್ನೆಸ್ ಕಾಳಜಿಯ ಕಾರಣ 2024 ರ ವಿಶ್ವಕಪ್‌ಗೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಮುಂದುವರಿಸುವುದು ಕಷ್ಟವಾಗುತ್ತದೆ. ಬದಲಾಗಿ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್‌ಗೆ ಜವಾಬ್ದಾರಿ ವಹಿಸಲಾಗುತ್ತಿದೆ.

ರಿಷಬ್ ಪಂತ್ ಅಥವಾ ಪಾಂಡ್ಯಗೆ ಜವಾಬ್ದಾರಿ
"ಹಾರ್ದಿಕ್ ಮತ್ತು ರಿಷಬ್ ಇಬ್ಬರೂ ನಾಯಕರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಬ್ಬರೂ ಐಪಿಎಲ್‌ನಲ್ಲಿ ನಾಯಕರಾಗಿದ್ದಾರೆ. ಹಾರ್ದಿಕ್ ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಕೆಎಲ್ ರಾಹುಲ್ ಕೂಡ ಇದ್ದಾರೆ ಮತ್ತು ಅವರು ರೋಹಿತ್ ಮತ್ತು ವಿರಾಟ್ ಅವರೊಂದಿಗೆ ಕಲಿಯುತ್ತಿದ್ದಾರೆ. ನಾಯಕತ್ವದ ಬದಲಾವಣೆಯ ಬಗ್ಗೆ ಈ ಎಲ್ಲಾ ಮಾತುಕತೆಗಳನ್ನು 2023 ವಿಶ್ವಕಪ್ ನಂತರ ಮಾಡಲಾಗುತ್ತದೆ" ಎಂದು ಅಧಿಕಾರಿ ಹೇಳಿದರು.
ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಪ್ರಮುಖ ಸರಣಿ, ಪಂದ್ಯಾವಳಿಗಳಲ್ಲಿ ಆಡಿಸಲು ಬಿಸಿಸಿಐ ತೀರ್ಮಾನಿಸಿದೆ. ಆಯ್ಕೆದಾರರು ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ ಪಂದ್ಯಾವಳಿಗಳು ಮತ್ತು ದೊಡ್ಡ ಸರಣಿಗಳಿಗಾಗಿ ಮಾತ್ರ ಅವರು ಟಿ20 ಪಂದ್ಯಗಳನ್ನು ಆಡಲಿದ್ದಾರೆ. ಅದನ್ನು ಹೊರತುಪಡಿಸಿ ಅವರು ಏಕದಿನ ಮತ್ತು ಟೆಸ್ಟ್ ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications