2021ರ ಟಿ20 ವಿಶ್ವಕಪ್ ಭಾರತಕ್ಕೆ ಬದಲು ಯುಎಇಗೆ ಸ್ಥಳಾಂತರ?!

ನವದೆಹಲಿ: ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲೂಬಹುದು. ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ತಗ್ಗದಿದ್ದರೆ ಪ್ರತಿಷ್ಠಿತ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುತ್ತದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿದೆ.
ಟಿ20 ವಿಶ್ವಕಪ್ 2021 ಆರಂಭಗೊಳ್ಳಲು ಇನ್ನು ಆರು ತಿಂಗಳುಗಳು ಬಾಕಿಯುಳಿದಿವೆ. ಆದರೆ ಈಗಾಗಲೇ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇಯಿದೆ. ಬರೀ ಶುಕ್ರವಾರ (ಏಪ್ರಿಲ್ 30) ಒಂದೇ ದಿನಕ್ಕೆ ಭಾರತದಲ್ಲಿ 386,452 ಹೊಸ ಪ್ರಕರಣಗಳು ದಾಖಲಾಗಿದ್ದವು.
ಭಾರತದಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದ್ದರೂ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20 ವಿಶ್ವಕಪ್ ಅನ್ನು ಭಾರತದಲ್ಲೇ ನಡೆಸಲು ನಿರ್ಧರಿಸಿದೆ. ಆದರೆ ಭಾರತಕ್ಕೆ ಬದಲಿ ತಾಣವನ್ನು ಭಾರತ ಯೋಚನೆಯಲ್ಲಿಟ್ಟುಕೊಂಡಿರಲಿ ಎಂದು ಐಸಿಸಿ ಸೂಚಿಸಿದೆ.
'ಟಿ20 ವಿಶ್ವಕಪ್ ನಡೆಸಲು ಭಾರತಕ್ಕೆ ಬದಲಿ ತಾಣವನ್ನು ಭಾರತ ಹೆಸರಿಸುವುದಾದರೆ ಅದು ಯುಎಇ,' ಎಂದು ಬಿಸಿಸಿಐ ಪ್ರಧಾನ ವ್ಯವಸ್ಥಾಪಕ ಧೀರಜ್ ಮಲ್ಹೋತ್ರ ಹೇಳಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications