Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುನಿಲ್ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷ

BCCI honours Sunil Gavaskar on 50th anniversary of his iconic Test debut against WI

ನವದೆಹಲಿ: 'ಲಿಟ್ಲ್‌ ಮಾಸ್ಟರ್' ಎಂದು ಕರೆಸಿಕೊಳ್ಳುತ್ತಿದ್ದ ಭಾರತದ ಮಾಜಿ ಬ್ಯಾಟ್ಸ್‌ಮನ್‌, ದಂತಕತೆ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಾರ್ಚ್ 6ಕ್ಕೆ ಭರ್ತಿ 50 ವರ್ಷ ತುಂಬುತ್ತಿದೆ. ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಈ ವಿಶೇಷ ದಿನವನ್ನು ಸ್ಮರಿಸಿಕೊಂಡಿದೆ.

1971ರಲ್ಲಿ ಪೋರ್ಟ್ ಆಫ್‌ ಸ್ಪೇನ್‌ ಕ್ವೀನ್ಸ್ ಪಾರ್ಕ್ ಓವಲ್ ಸ್ಟೇಡಿಯಂನಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಸುನಿಲ್ ಗವಾಸ್ಕರ್ ಪಾದಾರ್ಪಣೆ ಪಂದ್ಯ ಆಡಿದ್ದರು. 5 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಟೀಮ್ ಇಂಡಿಯಾ ಆವತ್ತು ವೆಸ್ಟ್‌ ಇಂಡೀಸ್‌ಗೆ ಪ್ರವಾಸ ಹೋಗಿತ್ತು.

ಅಂದಿನ ಪಂದ್ಯದಲ್ಲಿ ಗವಾಸ್ಕರ್ ಕ್ರಮವಾಗಿ 65, ಅಜೇಯ 67 ರನ್ ಬಾರಿಸಿದ್ದರು. ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಸುಲಭ ಜಯ ಗಳಿಸಿತ್ತಲ್ಲದೆ, 5 ಪಂದ್ಯಗಳ ಈ ಟೆಸ್ಟ್‌ ಸರಣಿಯಲ್ಲಿ 1-0ಯಿಂದ ಗೆದ್ದಿತ್ತು. ಇದರರ್ಥ ಗವಾಸ್ಕರ್ ಪಾದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಉಳಿದೆಲ್ಲ ಪಂದ್ಯಗಳು ಡ್ರಾ ಅನ್ನಿಸಿತ್ತು.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್-4ನೇ ಟೆಸ್ಟ್‌ನಲ್ಲಿ ಗವಾಸ್ಕರ್ ಕಾಮೆಂಟರಿ ನೀಡುತ್ತಿದ್ದರು. ಗವಾಸ್ಕರ್ ಟೆಸ್ಟ್‌ ಪಾದಾರ್ಪಣೆ ಮಾಡಿದ ಇದೇ ವಿಶೇಷ ದಿನದಂದು 4ನೇ ಟೆಸ್ಟ್‌ ಪಂದ್ಯ ಗೆದ್ದು ಭಾರತ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತ್ತು. ಭಾರತ ಪರ 125 ಟೆಸ್ಟ್‌ ಪಂದ್ಯಗಳಲ್ಲಿ 10122 ರನ್, 108 ಏಕದಿನ ಪಂದ್ಯಗಳಲ್ಲಿ 3092 ರನ್ ಬಾರಿಸಿರುವ ಗವಾಸ್ಕರ್‌ಗೆ ಬಿಸಿಸಿಐ ಟ್ವಿಟರ್ ಪೋಸ್ಟ್‌ ಮೂಲಕ ಶುಭಾಶಯಗಳನ್ನು ತಿಳಿಸಿದೆ.

Story first published: Saturday, March 6, 2021, 19:05 [IST]
Other articles published on Mar 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+