ಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿ

ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಬಿಸಿಸಿಐ ಐಪಿಎಲ್ ಆಯೋಜನೆಗೆ ಚುರುಕಾಗಿ ಕೆಲಸ ನಿರ್ವಹಿಸುತ್ತಿದೆ. ವಿಶ್ವ ಕ್ರಿಕೆಟ್‌ನ ಶ್ರೀಮಂತ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನ್ನು ಇದೇ ವರ್ಷದಲ್ಲಿ ನಡೆಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಹೌದು, ಸೆಪ್ಟೆಂಬರ್ ಅಂತ್ಯದಿಂದ ಆರಂಭವಾಗಿ ನವೆಂಬರ್‌ನಲ್ಲಿ ಅಂತ್ಯಗೊಳ್ಳುವಂತೆ ಐಪಿಎಲ್ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಯೋಜನೆ ರೂಪಿಸಿದೆ. ದಿನಾಂಕ ಮಾತ್ರವಲ್ಲದೆ ಪಂದ್ಯಗಳ ತಾತ್ಕಾಲಿಕ ವೇಳಾಪಟ್ಟಿಯನ್ನೂ ಬಿಸಿಸಿಐ ಸಿದ್ದಪಡಿಸಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 26 - ನವೆಂಬರ್ 8
ಐಪಿಎಲ್ ಆಯೋಜನೆಯ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಬಿಸಿಸಿಐ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದೆ. ಎಲ್ಲಾ ಫ್ರಾಂಚೈಸಿಗಳು, ಮಾಧ್ಯಮ ಪಾಲುದಾರರು ಮತ್ತು ಐಪಿಎಲ್‌ನ ಇತರ ಪಾಲುದಾರರೊಂದಿಗೆ ಚರ್ಚೆಯನ್ನು ನಡೆಸಲಾಗಿದೆ. ಈ ಮಾತುಕತೆಯ ಬಳಿಕ ಐಪಿಎಲ್ ಅನ್ನು ಸೆಪ್ಟೆಂಬರ್ 26 ರಿಂದ ನವೆಂಬರ್ 8 ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ

40 ದಿನಗಳಲ್ಲಿ ನಡೆಯಲಿದೆ 60 ಪಂದ್ಯ
ಒಟ್ಟಾರೆ 60 ಪಂದ್ಯಗಳನ್ನು 44 ದಿನಗಳಲ್ಲಿ ಮುಗಿಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇನ್ನು ಈ ಬಾರಿ ಹೋಮ್ ಗ್ರೌಂಡ್ ಮ್ಯಾಚ್ ಗಳಿರುವುದಿಲ್ಲ. ಬದಲಾಗಿ ಒಟ್ಟು 5 ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಂಡು ಇಡೀ ಟೂರ್ನಿಯನ್ನು ನಡೆಸಲಿದೆ.

ವಿಶ್ವಕಪ್ ಬಗ್ಗೆ ಐಸಿಸಿ ನಿರ್ಧಾರ ವಿಳಂಬ
ಈ ತಾತ್ಕಾಲಿಕ ದಿನಾಂಕಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಅನ್ನು ಮುಂದೂಡುವುದರ ಮೇಲೆ ಅವಲಂಭಿತವಾಗಿದೆ. ಟಿ20 ವಿಶ್ವಕಪ್ ಆಯೋಜನೆಗೆ ಸಂಬಂಧಿಸಿದಂತೆ ಎರಡು ಬಾರಿ ಐಸಿಸಿ ಸಭೆ ಸೇರಿದರೂ ನಿರ್ಧಾರವನ್ನು ತೆಗೆದುಕೊಳ್ಳಲು ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಜೂನ್ 10 ರಂದು ನಡೆದ ಸಭೆಯಲ್ಲಿ ಜುಲೈ ತಿಂಗಳಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ.

ಆಯೋಜನಾ ಸ್ಥಳದ ಬಗ್ಗೆ ಕುತೂಹಲ
ಬಿಸಿಸಿಐ ದಿನಾಂಕವನ್ನು ನಿರ್ಧಾರ ಮಾಡಿದ್ದರು ಐಪಿಎಲ್ ನಡೆಸುವ ಸ್ಥಳ ಯಾವುದು ಎಂಬುದು ಇನ್ನೂ ಕುತೂಹಲ ಉಳಿದುಕೊಂಡಿದೆ. ಐಪಿಎಲ್ ನಡೆಯುವ ಆ ಐದು ಕ್ರೀಡಾಂಗಣಗಳು ಭಾರತದ ಕ್ರೀಡಾಂಗಣವೇ ಆಗಿರಲಿದೆಯೋ ಅಥವಾ ವಿದೇಶದಲ್ಲಿ ಆಯೋಜನೆಯಾಗಲಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಯುಎಇ ಕ್ರಿಕೆಟ್ ಸಂಸ್ಥೆ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಹಿಂದೆ ತಮ್ಮ ದೇಶದಲ್ಲಿ ಕ್ರಿಕೆಟ್ ಆಯೋಜಿಸುವಂತೆ ಮಾನವಿ ಮಾಡಿಕೊಂಡಿತ್ತು. ಈ ಎರಡು ಅವಕಾಶಗಳನ್ನು ಕೂಡ ಬಿಸಿಸಿಐ ತೆರೆದಿಟ್ಟುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications