For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇನ್ನುಳಿದ ಪಂದ್ಯಗಳ ನಡೆಸಲು ಬಿಸಿಸಿಐ ತರಾತುರಿಯಲ್ಲಿಲ್ಲ

BCCI in no hurry to decide venue for remainder of IPL 2021

ನವದೆಹಲಿ: ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿ ಇಂಗ್ಲೆಂಡ್‌ನಲ್ಲಿ ನಡೆಯಲಿವೆ ಎಂದು ಕೆಲವು ವರದಿಗಳು ಹಾಗೆ ಹೇಳುತ್ತಿವೆ. ಈ ಬಾರಿಯ ಸೀಸನ್‌ನಲ್ಲಿ 29 ಪಂದ್ಯಗಳು ಮುಗಿದಿವೆ. ಇನ್ನು 31 ಪಂದ್ಯಗಳು ಬಾಕಿ ಉಳಿದಿವೆ.

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಮೇ 6ರ ಗುರುವಾರ ಸಭೆ ನಡೆಸಿತ್ತು. ಈ ವೇಳೆ ಯಾವುದೇ ಸಿಇಒಗಳು ಐಪಿಎಲ್ ಇನ್ನುಳಿದ ಪಂದ್ಯಗಳಿಗೆ ಯುಕೆ ತಾಣವಾಗಲಿದೆ ಎಂಬ ವಿಚಾರವನ್ನು ಚರ್ಚಿಸಿಲ್ಲ. ಆದರೆ ಈ ವೇಳೆ ಒಲಿಂಪಿಕ್ಸ್ ಬಗ್ಗೆ ಸ್ವಲ್ಪ ಮಟ್ಟಿನ ಮಾತುಕತೆಗಳಾಗಿದ್ದವು.

ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದೇನೂ ಕಂಡುಬರಲಿಲ್ಲ. ಈ ವಿಚಾರ ನೋಡಿದರೆ ಬಿಸಿಸಿಐ ಐಪಿಎಲ್‌ ಇನ್ನುಳಿದ ಪಂದ್ಯಗಳನ್ನು ನಡೆಸುವ ತರಾತುರಿಯಲ್ಲಿಲ್ಲ ಎಂದೆನಿಸುತ್ತದೆ. ಬಿಸಿಸಿಐ ನಿಧಾನವಾಗಿ ಚರ್ಚಿಸಿ ಈ ಬಗ್ಗೆ ನಿರ್ಧರಿಸುವುದನ್ನು ನಿರೀಕ್ಷಿಸಲಾಗಿದೆ.

ಏಪ್ರಿಲ್ 9ರಿಂದ ಆರಂಭಗೊಂಡಿದ್ದ ಐಪಿಎಲ್ 2021ರ ಟೂರ್ನಿ ಮೇ 30ರ ವರೆಗೆ ನಡೆಯಲಿತ್ತು. ಆದರೆ ಐಪಿಎಲ್ ಬಯೋಬಬಲ್ ಒಳಗೂ ಕೊರೊನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿಸಿಸಿಐ ಐಪಿಎಲ್ ಅನ್ನು ಅಮಾನತುಗೊಳಿಸಿತ್ತು.

Story first published: Saturday, May 8, 2021, 20:25 [IST]
Other articles published on May 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+