ಐಪಿಎಲ್ 2020: ವಿದೇಶಿ ಬೋರ್ಡ್‌ಗಳ ಜೊತೆ ಬಿಸಿಸಿಐ ನಿರಂತರ ಸಂಪರ್ಕ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಪಿಎಲ್ ಸದ್ಯ ಮುಂದೂಡಿಕೆಯಾಗಿದೆ. ಈ ಮಧ್ಯೆ ಏಪ್ರಿಲ್ 14ರ ವರೆಗೆ ಇಡೀ ಭಾರತವೇ ಲಾಕ್‌ಡೌನ್ ಆಗಿದ್ದು ಐಪಿಎಲ್ ನಡೆಯುವುದೇ ಅನುಮಾನವೆನಿಸಿದೆ. ಐಪಿಎಲ್ ಕುರಿತಾಗಿ ಎಲ್ಲಾ ಚಟುವಟಿಕೆಗಳೂ ಸ್ಥಬ್ಧವಾಗಿದೆ.
ಈ ಮಧ್ಯೆ ಬಿಸಿಸಿಐ ಮೂಲಕಗಳಿಂದಲೇ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ಆಂತರಿಕವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಐಪಿಎಲ್ ಬಗ್ಗೆ ಬಿಸಿಸಿಐ ಕೈಕಟ್ಟಿಕುಳಿತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆಗೆ ಬಿಸಿಸಿಐ ನಿರಂತರ ಸಂಪರ್ಕದಲ್ಲಿ ಇದೆ ಎಂದು ಮಾಹಿತಿ ಹೊರಬಿದ್ದಿದೆ.
ಬಿಸಿಸಿಐ ಐಪಿಎಲ್ ಆಯೋಜಿಸುವ ಬಗ್ಗೆ ಇನ್ನು ಒಂದು ಅವಕಾಶವನ್ನು ಹೊಂದಿದೆ. ಅದು ವಿಶ್ವಕಪ್‌ಅನ್ನು ಐಸಿಸಿ ಮುಂದೂಡಿದರೆ ಆ ಸಂದರ್ಭದಲ್ಲಿ ಐಪಿಎಲ್ ನಡೆಸುವುದು. ಇದೇ ಹಿನ್ನೆಲೆಯಲ್ಲಿ ಬಿಸಿಸಿಐ ವಿದೇಶಿ ಮಂಡಳಿಗಳ ಜೊತೆಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗ್ತಿದೆ.
ಐಪಿಎಲ್ ನಡೆಯಬೇಕಾದರೆ ವಿದೇಶಿ ಆಟಗಾರರು ಬಹಳ ಮಹತ್ವ. ವಿದೇಶಿ ಆಟಗಾರರಿಲ್ಲದೆ ಈ ಟೂರ್ನಿ ಇಷ್ಟೊಂದು ರೋಚಕತೆಯನ್ನು ಗಳಿಸಿಕೊಳ್ಳು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಒಂದು ವೇಲೆ ಐಪಿಎಲ್ ನಡೆಸುವ ಅವಕಾಶ ದೊರೆತಲ್ಲಿ ವಿದೇಶಿ ಆಟಗಾರರನ್ನು ಐಪಿಎಲ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬಿಸಿಸಿಐ ಈ ಕಾರ್ಯತಂತ್ರವನ್ನು ನಡೆಸುತ್ತಿದೆ.
ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗಳ ಜೊತೆಗೆ ಬಿಸಿಸಿಐ ನಿರಂತರ ವಾಗಿ ಸಂಪರ್ಕದಲ್ಲಿದೆ. ಮತ್ತು ಕೊರೊನಾ ವೈರಸ್ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಈ ಮಂಡಳಿಗಳ ಜೊತೆಗೆ ಬಿಸಿಸಿಐ ಸಂಪರ್ಕದಲ್ಲಿದ್ದು ಮಾಹಿತಿಗಳ ವಿನಿಮಯ ನಡೆಯುತ್ತಿದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ದೊರೆತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications