ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐನಿಂದ ಖಡಕ್ ಸೂಚನೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗಿಯಾಗಲಿದೆ. ಇದಕ್ಕಾಗಿ ಈಗಾಗಲೇ ಭಾರತೀಯ ತಂಡವನ್ನು ಆಯ್ಕೆ ಮಾಡಲಾಗಿದ್ದು ಜೂನ್ 2ರಂದು ಈ ತಂಡ ಇಂಗ್ಲೆಂಡ್‌ಗೆ ವಿಮಾನವೇರಲಿದೆ. ಆದರೆ ಇದಕ್ಕೂ ಮುನ್ನ ಬಿಸಿಸಿಐ ಎಲ್ಲಾ ಆಟಗಾರರಿಗೂ ಸೂಚನೆಯೊಂದನ್ನು ರವಾನಿಸಿದೆ.
ಇಂಗ್ಲೆಂಡ್ ವಿರುದ್ಧದ ಪ್ರವಾಸಕ್ಕೂ ಮುನ್ನ ಮುಂಬೈಗೆ ಆಟಗಾರರು ತೆರಳಿ ಅಲ್ಲಿಂದ ಭಾರತೀಯ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಆದರೆ ಮುಂಬೈಗೆ ತೆರಳುವ ಮುನ್ನ ಆಟಗಾರರೆಲ್ಲರೂ ಐಸೋಲೇಶನ್‌ಗೆ ಒಳಗಾಗುವಂತೆ ಟೀಮ್ ಇಂಡಿಯಾದ ಫಿಸಿಯೋ ಯೋಗೇಶ್ ಫಾರ್ಮರ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
"ಮುಂಬೈಗೆ ಬಂದಿಳಿದ ನಂತರ ಯಾವುದೇ ಆಟಗಾರ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಪತ್ತೆಯಾದರೆ ಆತ ಪ್ರವಾಸಕ್ಕೆ ತೆರಳುವುದು ಅಸಾಧ್ಯ ಎಂದು ಪರಿಗಣಿಸಬೇಕು. ಅಂತಾ ಆಟಗಾರರಿಗೆ ಬಿಸಿಸಿಐ ಚಾರ್ಟರ್ಡ್ ಫ್ಲೈಟ್ ಮೂಲಕ ಪ್ರಯಾಣಿಸುವ ವ್ಯವಸ್ಥೆಯನ್ನು ಮತ್ತೆ ಮಾಡುವುದಿಲ್ಲ" ಎಂದು ಬಿಸಿಸಿಐ ಸೂಚನೆಯನ್ನು ನೀಡಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಈ ಬಾರಿಯ ಐಪಿಎಲ್‌ನ ಬಯೋಬಬಲ್ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ. ಮುಂಬೈಗೆ ತೆರಳುವುದಕ್ಕೂ ಮುನ್ನ ಆಟಗಾರರ ಕುಟುಂಬಸ್ಥರಿಗೂ ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿದೆ.
ಮತ್ತೊಂದೆಡೆ ಬಿಸಿಸಿಐ ಎಲ್ಲಾ ಆಟಗಾರರಿಗೂ ಕೊರೊನಾ ವೈರಸ್ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳುವಂತೆ ಸೂಚನೆಯನ್ನು ನೀಡಿದೆ. ಈ ಆಟಗಾರರಿಗೆ ಎರಡನೇ ಹಂತದ ಲಸಿಕೆಯನ್ನು ಇಂಗ್ಲೆಂಡ್‌ನಲ್ಲಿ ನಿಡುವ ವ್ಯವಸ್ಥೆಯನ್ನು ಬಿಸಿಸಿಐ ಮಾಡಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications