For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಅರ್ಹತೆ, ಜವಾಬ್ದಾರಿ ಹೀಗಿವೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕಾಗಿ ಅರ್ಜಿಗಳನ್ನು ಗುರುವಾರ, ಜೂನ್ 22ರಂದು ಆಹ್ವಾನಿಸಿದೆ.

ಈ ಸೂಚನೆಯನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ ಮತ್ತು ಕ್ರಿಕೆಟ್ ಆಡಳಿತ ಮಂಡಳಿಯು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ ಹಂಚಿಕೊಂಡಿದೆ.

BCCI Invite Applications For Indian Cricket Team Selection Committee Chief Post

ಈ ಅರ್ಜಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದ ಉದ್ಯೋಗ ವಿವರಣೆಯನ್ನು ನೀಡಿದೆ. ಆಯ್ಕೆ ಸಮಿತಿಯಲ್ಲಿ ಕೇವಲ ಒಬ್ಬ ಸದಸ್ಯರ ಅವಶ್ಯಕತೆಯಿದೆ ಎಂದು ಮಂಡಳಿಯು ಸ್ಪಷ್ಟವಾಗಿ ಉಲ್ಲೇಖಿಸಿದೆ. ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಿಗೆ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ.

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ಅರ್ಜಿಗಳನ್ನು ಜೂನ್ 30, 2023ರಂದು ಭಾರತೀಯ ಕಾಲಮಾನ 6 ಗಂಟೆಯ ಒಳಗೆ ಸಲ್ಲಿಸಬೇಕು ಎಂದು ಉಲ್ಲೇಖಿಸಿದೆ.

ಆಯ್ಕೆ ಸಮಿತಿ ಮುಖ್ಯಸ್ಥನ ಪ್ರಮುಖ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಬಿಸಿಸಿಐ ಪಟ್ಟಿ ಮಾಡಿದೆ.

1. ನ್ಯಾಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ಸಾಧ್ಯವಾದಷ್ಟು ಉತ್ತಮ ತಂಡವನ್ನು ಆಯ್ಕೆ ಮಾಡುವುದು.

2. ಹಿರಿಯ ರಾಷ್ಟ್ರೀಯ ತಂಡಕ್ಕೆ ಬಲಿಷ್ಠ ಬೆಂಚ್ ಬಲವನ್ನು ಸಿದ್ಧಪಡಿಸುವುದು.

3. ಅಗತ್ಯವಿದ್ದಾಗ ಮತ್ತು ತಂಡದ ಸಭೆಗಳಿಗೆ ಹಾಜರಾಗುವುದು.

4. ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಲು ಪ್ರಯಾಣ ಬೆಳೆಸುವುದು.

5. ಬಿಸಿಸಿಐನ ಅಪೆಕ್ಸ್ ಕೌನ್ಸಿಲ್‌ಗೆ ತ್ರೈಮಾಸಿಕ ಆಧಾರದ ಮೇಲೆ ಆಯಾ ತಂಡದ ಪ್ರದರ್ಶನಗಳ ಮೌಲ್ಯಮಾಪನ ವರದಿಗಳನ್ನು ತಯಾರಿಸಿ ಒದಗಿಸುವುದು.

6. ಬಿಸಿಸಿಐ ಸೂಚನೆಯಂತೆ ಮತ್ತು ತಂಡದ ಆಯ್ಕೆಯ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವುದು.

7. ಪ್ರತಿ (ಟೆಸ್ಟ್, ಏಕದಿನ, ಟಿ20) ಸ್ವರೂಪದಲ್ಲಿ ತಂಡಕ್ಕೆ ನಾಯಕನನ್ನು ನೇಮಿಸುವ ಜವಾಬ್ದಾರಿ.

8. ಬಿಸಿಸಿಐನ ನಿಯಮಗಳು ಮತ್ತು ನಿಯಂತ್ರಣಕ್ಕೆ ಬದ್ಧರಾಗಿರುವುದು.

ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ: ಆಡಿರಬೇಕು:
ಎ) ಕನಿಷ್ಠ 7 ಟೆಸ್ಟ್ ಪಂದ್ಯಗಳನ್ನು ಆಡಿರಬೇಕು, ಅಥವಾ

ಬಿ) ಕನಿಷ್ಠ 30 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು, ಅಥವಾ

ಸಿ) ಕನಿಷ್ಠ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು.

Story first published: Thursday, June 22, 2023, 22:10 [IST]
Other articles published on Jun 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+