ಮಹತ್ವದ ಸಭೆಗೆ ಐಪಿಎಲ್ ಎಲ್ಲಾ ಫ್ರಾಂಚೈಸಿಗಳ ಆಹ್ವಾನಿಸಿದ ಬಿಸಿಸಿಐ

ಬೆಂಗಳೂರು, ಮಾರ್ಚ್ 13: ಆತಂಕಕ್ಕೀಡು ಮಾಡಿರುವ ಕೊರೊನಾ ವೈರಸ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಸಬೇಕೋ ಬೇಡವೋ ಎಂಬ ನಿರ್ಧಾರ ತಾಳುವ ಬಗ್ಗೆ ಬಿಸಿಸಿಐಯು ಮಹತ್ವದ ಸಭೆಯಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಆಹ್ವಾನವನ್ನಿತ್ತಿದೆ. ಶನಿವಾರ (ಮಾರ್ಚ್ 14) ಈ ಬಗ್ಗೆ ಬಿಸಿಸಿಐಯು ಪ್ರಮುಖ ನಿರ್ಧಾರ ಪ್ರಕಟಿಸಲಿದೆ.
ಕೊರೊನಾ ವೈರಸ್ ಸೋಂಕಿನ ಕಾರಣ ಐಪಿಎಲ್ ಪಂದ್ಯಗಳನ್ನು ನಡೆಸದಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನವ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಆದರೆ ಅತೀ ಶೀಘ್ರದಲ್ಲಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಟೂರ್ನಿಯ ಬಗ್ಗೆ ಇನ್ನಷ್ಟೇ ನಿರ್ಧಾರ ಪ್ರಕಟವಾಗಬೇಕಿದೆ.
ಶನಿವಾರ ಸಭೆ ನಡೆಸಲಿರುವ ಬಿಸಿಸಿಐ, ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಸದ್ಯಕ್ಕೆ ಬಿಸಿಸಿಐ ಮುಂದಿರುವ ಆಯ್ಕೆಗಳು ಎರಡೇ. ಒಂದು, ಐಪಿಎಲ್ ಟೂರ್ನಿಯನ್ನು ಮುಂದೂಡಿವುದು. ಇನ್ನೊಂದು, ಪ್ರೇಕ್ಷಕರೇ ಇಲ್ಲದ ಮೈದಾನದಲ್ಲಿ ಪಂದ್ಯಗಳನ್ನು ನಡೆಸೋದು.
ಐಪಿಎಲ್‌ಗೆ ಕೊರೊನಾ ಭೀತಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಮೂಲವೊಂದು, 'ಹೌದು, ಈ ಬಗ್ಗೆ ನಿರ್ಧಾರ ತಾಳಲು ನಾವು ಎಲ್ಲಾ ಫ್ರಾಂಚೈಸಿಗಳಿಗೆ ಆಹ್ವಾನವಿತ್ತಿದ್ದೇವೆ. ವಿದೇಶಿ ಆಟಗಾರರು ಸದ್ಯ ಆಡುತ್ತಿಲ್ಲ ಅನ್ನೋದು ನಿಜವೆ. ಆದರೆ ಮಾರ್ಚ್ 14ರ ಸಭೆಯ ಬಳಿಕ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತೇವೆ,' ಎಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications