ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಮ್ಮೆ ಆಯ್ಕೆ ಸಮಿತಿಗೆ ಅರ್ಜಿಗಳನ್ನು ಆಹ್ವನಿಸಿದೆ. ನಾಲ್ಕು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಇದ್ದ ಮಾನದಂಡಗಳಲ್ಲಿ ಯಾವವೂ ಬದಲಾಗಿಲ್ಲ. ಆಯ್ಕೆ ಸಮಿತಿಗೆ ಅರ್ಜಿಯನ್ನು ಸಲ್ಲಿಸಲು ಸೆ.10ರ ಸಂಜೆ 5ರ ವರೆಗೆ ಕಾಲಾವಕಾಶ ನೀಡಲಾಗಿದೆ.
ಪುರುಷರ ಹಾಗೂ ಮಹಿಳಾ ಆಯ್ಕೆ ಸಮಿತಿಗೆ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಬಿಸಿಸಿಐ ಮಾನನದಂಡಗಳನ್ನು ಸೂಚಿಸಿದೆ. ಅಲ್ಲದೆ ಈ ಆಯ್ಕೆ ಸಮಿತಿ ಪುರುಷರ ಹಿರಿಯರ ತಂಡದ ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಈ ಹುದ್ದೆಗಾಗಿ ಮಾನದಂಡಗಳನ್ನು ಸೂಚಿಸಲಾಗಿದೆ.

ಕನಿಷ್ಠ 7 ಟೆಸ್ಟ್ ಪಂದ್ಯ, ಅಥವಾ 30 ಪ್ರಥಮ ದರ್ಜೆ ಪಂದ್ಯ, ಅಥವಾ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯ ಆಡಿರಬೇಕು. ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತರಾಗಿರಬೇಕು.
ಒಟ್ಟು 5 ವರ್ಷಗಳ ಕಾಲ ಬಿಸಿಸಿಐನ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರಬಾರದು.
ಮಹಿಳಾ ತಂಡಕ್ಕೆ 4 ರಾಷ್ಟ್ರೀಯ ಆಯ್ಕೆದಾರರನ್ನು ನೇಮಿಸಲು ಅರ್ಜಿಯನ್ನು ಅಹ್ವಾನಿಸಲಾಗಿದೆ. ಈ ವೇಳೆ ಅಭ್ಯರ್ಥಿ ಟೆಸ್ಟ್, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಹಿಳಾ ತಂಡಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ವೇತನ: ಹಿರಿಯರ ಆಯ್ಕೆ ಸಮಿತಿಗೆ ಆಯ್ಕೆ ಆಗುವ ಸದಸ್ಯನಿಗೆ ಸುಮಾರು 90 ಲಕ್ಷ ವಾರ್ಷಿಕ ವೇತನವನ್ನು ನಿರ್ಧರಿಸಲಾಗಿದೆ. ಇನ್ನು ಜೂನಿಯರ್ ಕ್ರಿಕೆಟ್ ಸಮಿತಿಯ ಸದಸ್ಯರಿಗೆ ವಾರ್ಷಿಕ 30 ಲಕ್ಷ ರೂ. ವೇತನ ಪಡೆಯಲಿದ್ದಾರೆ.
ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಮಿತಿಯಲ್ಲಿ ಎಸ್ಎಸ್ ದಾಸ್, ಸುಬ್ರೋಟೊ ಬ್ಯಾನರ್ಜಿ, ಅಜಯ್ ರಾತ್ರ ಮತ್ತು ಎಸ್ ಶರತ್ ಸೇರಿದ್ದಾರೆ. ಈ ಸಮಿತಿ ಇದೇ ಮಂಗಳವಾರ ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ.
ಅಜಿತ್ ಅಗರ್ಕರ್ ಮುಂದಾಳತ್ವದ ಸದಸ್ಯರನ್ನು ಬದಲಾಯಿಸಲಾಗುವುದು. ಕ್ರಿಕ್‌ಬಜ್ ಪ್ರಕಾರ, ಹೊಸ ಸದಸ್ಯರು ದಕ್ಷಿಣ ಮತ್ತು ಮಧ್ಯ ವಲಯಗಳಿಂದ ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ವಲಯದ ಎಸ್ ಶರತ್ ಅವರ ಅಧಿಕಾರಾವಧಿ ಮುಗಿದಿದೆ ಎಂದು ತಿಳಿದುಬಂದಿದೆ. ಪ್ರಗ್ಯಾನ್ ಓಜಾ ಅವರನ್ನು ಬದಲಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.
ಟೀಮ್ ಇಂಡಿಯಾದ ಪರ ಪ್ರಗ್ಯಾನ್ ಓಜಾ 24 ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದರೆ,. ಅಲ್ಲದೆ18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 6 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಇವರು 2013ರಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.