ಬಿಸಿಸಿಐ ತನ್ನಲ್ಲಿರುವ ಖಾಲಿ ಇರುವ ಹುದ್ದೆಗಳಿಗೆ ಆಗಾಗ ಅರ್ಜಿಗಳನ್ನು ಆಹ್ವಾನಿಸುತ್ತಲೇ ಇರುತ್ತದೆ. ಈಗ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆ ಖಾಲಿ ಇದ್ದು, ಈ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈಗ ಕರೆದ ಅರ್ಜಿಗಳಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತ "ಎ", ಅಂಡರ್ 23, ಅಂಡರ್ 19, ಅಂಡರ್ 16 ಹಾಗೂ 15 ಸೇರಿದಂತೆ ಹಲವು ವಯೋಮಾನದ ಗುಂಪುಗಳಲ್ಲಿ ಭಾರತದ ಸ್ಪಿನ್ ಬೌಲಿಂಗ್ ಪ್ರತಿಭೆಯನ್ನು ಉತ್ತೇಜಿಸುವುದು ಈ ಕೋಚ್‌ನ ಪಾತ್ರವಾಗಿರುತ್ತದೆ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 10, 2025 ರಂದು ಸಂಜೆ 5 ಗಂಟೆಯವರೆಗೆ ಅವಕಾಶ ಇರುತ್ತದೆ.

ಸ್ಪಿನ್ ಬೌಲಿಂಗ್ ತರಬೇತುದಾರರ ಪ್ರಮುಖ ಜವಾಬ್ದಾರಿಗಳೆಂದರೆ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕ್ರಿಕೆಟ್ ತಂಡಗಳಿಗೆ ತರಬೇತಿ ಅವಧಿಗಳನ್ನು ಯೋಜಿಸುವುದು ಮತ್ತು ಕಾರ್ಯಗತಗೊಳಿಸುವುದಾಗಿದೆ. ಅಲ್ಲದೆ ಅಗತ್ಯವಿದ್ದಾಗ ಆಟಗಾರರಿಗೆ ತಾಂತ್ರಿಕ ತರಬೇತಿ ನೀಸುವುದಾಗಿದೆ. ಈ ಕೋಚ್‌ಗಳು ಇಲ್ಲಿ ಆಟಗಾರರ ಪ್ರದರ್ಶನದ ಮೇಲೆ ಗಮನ ಹರಿಸಬಹುದು.
ಈ ಕೋಚ್‌ಗಳು ಹೊ ಹೊ ಸ್ಪಿನ್ ಬೌಲರ್‌ಗಳನ್ನು ಅನ್ವೇಷಣೆ ಮಾಡುವುದು ಇವರ ಕೆಲಸವಾಗಿರುತ್ತದೆ. ಅಲ್ಲದೆ ತಜ್ಞ ತರಬೇತುದಾರರ ಹುಡುಕುವುದು. ಅಲ್ಲದೆ ಪ್ರತಿಭೆಯ ಅನ್ವೇಷಣೆ ಹಾಗೂ ಅವರನ್ನು ಬೆಳೆಸುವ ಕೆಲಸವನ್ನು ಇವರು ಮಾಡಬೇಕಾಗುತ್ತದೆ.
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕಡ್ಡಾಯವಾಗಿ ಅನುಭವದ ಅವಶ್ಯಕತೆ ಸಹ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿ ಕನಿಷ್ಠ 75 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರಬೇಕು. ಅಲ್ಲದೆ ಅರ್ಜಿ ಸಲ್ಲಿಸುವ ಆಸಕ್ತರು ಹೈ ಪರ್ಫಾಮೆನ್ಸ್ ಸೆಂಟರ್, ಅಂತಾರಾಷ್ಟ್ರೀಯ, ಭಾರತ "ಎ", ಭಾರತ ಅಂಡರ್ 19, ಭಾರತ ಮಹಿಳಾ ತಂಡ, ಐಪಿಎಲ್ ತಂಡಗಳಲ್ಲಿ ಈ ಹಿಂದಿನ ಏಳು ವರ್ಷಗಳಲ್ಲಿ ಕನಿಷ್ಠ ಮೂರು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಅರ್ಜಿದಾರರು ಇದೇ ರೀತಿಯ ದಾಖಲೆಯೊಂದಿಗೆ ಬಿಸಿಸಿಐ ಸಿಒಇ ಲೆವೆಲ್ 3 ಅಥವಾ ಲೆವೆಲ್ 2 ಪರ್ಫಾರ್ಮೆನ್ಸ್ ಕೋಚ್ (ಅಥವಾ ಸಮಾನ) ಆಗಿರಬೇಕು. ಅರ್ಜಿದಾರರು ಉನ್ನತ-ಕಾರ್ಯಕ್ಷಮತೆಯ ಯೋಜನೆ ಮತ್ತು ಮೇಲ್ವಿಚಾರಣೆಯಲ್ಲಿ ಯಶಸ್ವಿ ದಾಖಲೆಯನ್ನು ಹೊಂದಿರಬೇಕು.
- ಆಟಗಾರರಿಗೆ ತರಬೇತಿ ವ್ಯವಸ್ಥೆ
- ಆಟಗಾರರಿಗೆ ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ತಾಂತ್ರಿಕ ತರಬೇತಿಗೆ ಒತ್ತು ನೀಡುವುದು.
- ಆಟಗಾರರ ವೈಯಕ್ತಿಕ ಕ್ಷಮತೆಯ ಮೇಲ್ವಿಚಾರಣೆ
- ಸಿಬ್ಬಂದಿಯ ಆಯ್ಕೆ, ಸಹಾಯಕ ಸಿಬ್ಬಂದಿಯೊಂದಿಗೆ ನಿಕಟ ಸಂಪರ್ಕ, ಆಟಗಾರರ ಪ್ರತಿಭೆ ವೃದ್ಧಿಗೆ ಶ್ರಮಿಸುವುದು.
- ಕೋಚಿಂಗ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸುವುದು
- ಆಟಗಾರರ ಗಾಯಕ್ಕೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡುವುದು.