Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರ ಐಪಿಎಲ್‌ ಎಲ್ಲಿ? ಭಾರತದಲ್ಲ ಇಲ್ಲ, ಮತ್ತೆ ಯುಎಇಯಲ್ಲ?!

BCCI is also considering hosting IPL in UAE if the situation in India doesnt improve

ನವದೆಹಲಿ: 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ತಯಾರಿ ನಡೆಸುತ್ತಿದೆ. ಫೆಬ್ರವರಿಯಲ್ಲಿ ಐಪಿಎಲ್ 2021ರ ಮಿನಿ ಹರಾಜು ನಡೆಯುವ ಸಾಧ್ಯತೆಯಿದ್ದರೆ, ಏಪ್ರಿಲ್ ಮತ್ತು ಮೇಯಲ್ಲಿ ಭಾರತದ ಅದ್ದೂರಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಿದ್ದರಿಂದ 13ನೇ ಆವೃತ್ತಿಯ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದಿತ್ತು. ಹಾಗಾದರೆ 2021ರ ಐಪಿಎಲ್‌ ಎಲ್ಲಿ ನಡೆಯಲಿದೆ? ಭಾರತದಲ್ಲಾ ಇಲ್ಲ, ಮತ್ತೆ ಯುಎಇಯಲ್ಲಾ? ಯಾಕೆಂದರೆ ಭಾರತದಲ್ಲಿ ಈಗಲೂ ಕೊರೊನಾ ಪ್ರಕರಣಗಳು ತಗ್ಗಿಲ್ಲ.

ಬಲ್ಲ ಮಾಹಿತಿಗಳ ಪ್ರಕಾರ, ಬಿಸಿಸಿಐ 14ನೇ ಆವೃತ್ತಿ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ಯೋಚಿಸುತ್ತಿದೆ. ಯಾವುದಕ್ಕೂ ಇನ್ನೊಂದು ತಿಂಗಳು ಕಾದು ಕೊರೊನಾ ಪ್ರಕರಣಗಳ ಸ್ಥಿತಿಗತಿಗಳನ್ನು ಗಮನಿಸಲಿದೆ. ಆ ಬಳಿಕ ಐಪಿಎಲ್ ಅನ್ನು ಭಾರತಲ್ಲಿ ನಡೆಸೋದಾ ಇಲ್ಲ ಯುಎಇಯಲ್ಲ ಎಂದು ನಿರ್ಧರಿಸಲಿದೆ.

'ಐಪಿಎಲ್ ವೇಳಾಪಟ್ಟಿಯನ್ನು ನಿರ್ಧರಿಸುವುದಕ್ಕೂ ಮುನ್ನ ಭಾರತದಲ್ಲಿ ಕೋವಿಡ್-19 ಪರಿಸ್ಥಿತಿಗಳು ಹೇಗಿರಲಿದೆ ಎಂದು ಬಿಸಿಸಿಐ ಇನ್ನೊಂದು ತಿಂಗಳು ಕಾದು ನೋಡಲಿದೆ. ಎಲ್ಲರಿಗೂ ಟೂರ್ನಿ ಭಾರತದಲ್ಲಿ ನಡೆಯೋದು ಇಷ್ಟ. ಆದರೆ ನಾವು ಈ ಬಗ್ಗೆ ಅಂತಿಮ ನಿರ್ಧಾರ ತಾಳಲು ಇನ್ನೂ ಕೊಂಚ ಸಮಯ ಕಾದು ನೋಡಬೇಕಿದೆ,' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

Story first published: Friday, January 8, 2021, 20:19 [IST]
Other articles published on Jan 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+