Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ನಡೆಸುವ ಬಗ್ಗೆ ಈಗ ಯೋಚನೆ ಮಾಡುತ್ತಿಲ್ಲ: ಬಿಸಿಸಿಐ ಖಜಾಂಚಿ

Bcci Is Not Thinking Of Staging Ipl Now, Says Treasurer Arun Dhumal

ಕೊರೊನಾ ವೈರಸ್ ಕಾರಣದಿಂದಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಬ್ದವಾಗಿದೆ. ಸದ್ಯಕ್ಕೆ ಕ್ರಿಕೆಟ್ ಸೇರಿದಂತೆ ಯಾವ ಕ್ರೀಡಾಕೂಟಗಳೂ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಬಗ್ಗೆ ಬಿಸಿಸಿಐ ಖಜಾಂಚಿಯಾಗಿರುವ ಅರುಣ್ ಧುಮಲ್ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ ಆರಂಭದ ಕುರಿತಾದ ಚರ್ಚೆಗಳಿಗೂ ಅವರು ಉತ್ತರವನ್ನು ನೀಡಿದ್ದಾರೆ.

ಇದೇ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ನಡೆಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು ಇದಕ್ಕೆ ಬಿಸಿಸಿಐ ಖಜಾಂಚಿಯಾಗಿರುವ ಅರುಣ್ ಧುಮಲ್ ಪ್ರತಿಕ್ರಿಯೆ ನೀಡಿದ್ದಾರೆ. ಅಂತಹ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಕೊರೊನಾ ವೈರಸ್ ಮುಕ್ತಾಯವಾಗುವವರೆಗೆ ಈ ಯಾವ ನಿರ್ಧಾರವನ್ನು ಕೂಡ ಬಿಸಿಸಿಐ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ ನಡೆಸುವ ಬಗ್ಗೆಯೇಯೂ ಯಾವ ಚಿಂತನೆಗಳನ್ನೂ ಬಿಸಿಸಿಐ ನಡೆಸುತ್ತಿಲ್ಲ. ಕೊರೊನಾ ವೈರಸ್ ಅಂತ್ಯದ ಬಳಿಕವೇ ಈ ಬಗ್ಗೆ ಚರ್ಚೆಯನ್ನು ಮಾಡಲಾಗುತ್ತದೆ. ಸ್ತಬ್ಧವಾಗಿರುವ ಕ್ರಿಕೆಟ್ ಮರು ಆರಂಭಗೊಳ್ಳುವ ಬಗ್ಗೆ ನಿರ್ಧಾರವನ್ನು ಆ ಬಳಿಕವೇ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಕ್ರಿಕೆಟ್ ಇನ್ನು ಆರಂಭಗೊಳ್ಳಬಹುದು ಎಂಬುದು ಖಚಿತವಾದ ಬಳಿಕವೇ ಕ್ರೀಡಾಕೂಟಗಳನ್ನು ನಡೆಸುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಯೋಜನೆ ಬಗ್ಗೆ ಲಾಕ್‌ಡೌನ್‌ಗೆ ಮುನ್ನ ಚರ್ಚೆ ನಡೆಸಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಎಲ್ಲವೂ ಸರಿಯಾದ ಬಳಿಕ ಈ ಬಗ್ಗೆ ಚಿಂತಿಸಲಾಗುತ್ತದೆ ಎಂದು ಅರುಣ್ ಧುಮಲ್ ಹೇಳಿದ್ದಾರೆ.

ವಿಶ್ವವೇ ಈಗ ಕೊರೊನಾ ವೈರಸ್‌ನಿಂದಾಗಿ ನರಳುತ್ತಿದೆ. ಇಂತಾ ಸಂದರ್ಭದಲ್ಲಿ ಐಪಿಎಲ್ ನಡೆಸುವ ಬಗ್ಗೆ ಆಲೋಚನೆಯನ್ನು ನಡೆಸುವ ಸ್ಥಿತಿಯಲ್ಲಿ ಬಸಿಸಿಐ ಇಲ್ಲ. ಈವರೆಗೂ ಯಾವುದೇ ಯೋಜನೆಗಳನ್ನೂ ಹಾಕಿಕೊಂಡಿಲ್ಲ ಎಂದು ಅರುಣ್ ದುಮಲ್ ಹೇಳಿಕೆಯನ್ನು ನೀಡಿದ್ದಾರೆ.

Story first published: Friday, May 8, 2020, 14:13 [IST]
Other articles published on May 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+