ಕೊರೊನಾ ಆತಂಕದ ಮಧ್ಯೆಯೂ ಮುಂಬೈನಲ್ಲೇ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಜ್ಜು

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನಿಯಂತ್ರಣ ಮೀರಿ ಹಬ್ಬುತ್ತಿದೆ. ಆದರೆ ಕೊರೊನಾ ವೈರಸ್‌ನ ಅಗಾಧ ಪ್ರಮಾಣದ ಏರಿಕೆಯ ಹೊರತಾಗಿಯೂ ಮುಂಬೈನಲ್ಲಿ ನಿಗದಿಯಾಗಿರುವ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡಲು ಬಿಸಿಸಿಐ ಉತ್ಸುಕವಾಗಿದೆ. ಏಪ್ರಿಲ್ 10-25ರ ಅವಧಿಯಲ್ಲಿ 19 ಪಂದ್ಯಗಳು ಮುಂಬೈನಲ್ಲಿ ಆಯೋಜನೆಯಾಗಲಿದೆ.ಹೊಸ ಬಯೋಬಬಲ್ ವಾತಾವರಣವನ್ನು ಪರ್ಯಾಯ ಸ್ಥಳದಲ್ಲಿ ಕಿರು ಅವಧಿಯಲ್ಲಿ ರೂಪಿಸುವುದು ಅಸಾಧ್ಯ ಎಂದು ಬಿಸಿಸಿಐ ಹೇಳಿದೆ.

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಕ್ಷರ್ ಪಟೇಲ್, ವಾಂಖೆಡೆ ಸ್ಟೇಡಿಯಂನ 10 ಮೈದಾನದ ಸಿಬ್ಬಂದಿಗಳು, 6 ಇವೆಂಟ್ ಮ್ಯಾನೇಜರ್‌ಗಳು, ಕೊರೊನಾ ವೈರಸ್‌ಗೆ ತುತ್ತಾಗಿರುವುದು ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜನೆಗೆ ಆತಂಕ ಮೂಡಲು ಕಾರಣವಾಗಿದೆ.

ಆರ್‌ಸಿಬಿಯ 'ಐಪಿಎಲ್‌ ಕಪ್‌'ನ ಬರ ನೀಗಿಸ್ತಾರಾ ಮ್ಯಾಕ್ಸ್‌ವೆಲ್, ಜೇಮಿಸನ್?

ಕೊರೊನಾ ವೈರಸ್‌ನಿಂದಾಗಿ ಐಪಿಎಲ್ ಆಯೋಜನೆ ಮೇಲೆ ಸಾಕಷ್ಟು ಪರಿಣಾಮಗಳು ಬೀರುವ ಸಾಧ್ಯತೆಯಿರುವ ಸಂದರ್ಭದಲ್ಲಿ ಬಳಸಿಕೊಳ್ಳಲು ಎರಡು ತಾಣಗಳನ್ನು ಬಿಸಿಸಿಐ ಪರ್ಯಾಯವಾಗಿ ಸಿದ್ಧವಾಗಿಟ್ಟುಕೊಂಡಿದೆ. ಹೈದರಾಬಾದ್ ಹಾಗೂ ಇಂದೋರ್ ಮೈದಾನಗಳು ಐಪಿಎಲ್‌ಗೆ ಪರ್ಯಾಯ ತಾಣಗಳಾಗಿದೆ. ಆದರೆ ಮುಂಬೈನಲ್ಲಿ ಪಂದ್ಯಗಳು ನಿಗದಿಯಂತೆಯೇ ಆಯೋಜನೆಯಾಗುವ ಬಗ್ಗೆ ಬಿಸಿಸಿಐ ಭರವಸೆಯನ್ನು ಹೊಂದಿದೆ.

"ಹೌದು, ಹೈದರಾಬಾದ್ ಪರ್ಯಾಯ ತಾಣಗಳಲ್ಲಿ ಒಂದು. ಆದರೆ ಎಲ್ಲಾ ರೀತಿಯ ಪ್ರಾಯೋಗಿಕ ಕಾರಣಗಳಿಂದಾಗಿ ಮುಂಬೈನಲ್ಲಿನ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಚಿಂತನೆಗಳನ್ನು ನಡೆಸಿಲ್ಲ. ತುಂಬಾ ಸಣ್ಣ ಅವಧಿಯಲ್ಲಿ ಮತ್ತೊಂದು ಬಯೋಬಬಲ್‌ಅನ್ನು ಸಿದ್ಧಪಡಿಸುವುದು ತುಂಬಾ ಕಷ್ಟದ ಕೆಲಸ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಶನಿವಾರ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಐಪಿಎಲ್: ಟ್ವಿಟರ್ ವಿರುದ್ಧ ಆರ್‌ಸಿಬಿ ಅಸಮಾಧಾನ, ಏನಿದು ವಿವಾದ!?

ವಾಂಖೆಡೆ ಕ್ರೀಡಾಂಗಣದಲ್ಲಿ ಕೊರೊನಾ ವೈರಸ್‌ ಆಯೋಜಕರನ್ನು ಚಿಂತೆಗೀಡು ಮಾಡಿದೆ. ಶುಕ್ರವಾರ ಸಂಜೆ 8 ಇದ್ದ ಪ್ರಕರಣಗಳ ಸಂಖ್ಯೆ ಈಗ 10ಕ್ಕೆ ಏರಿಕೆಯಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, April 4, 2021, 11:09 [IST]
Other articles published on Apr 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X