'ಕಾಫೀ ವಿತ್ ಕರಣ್'ನಲ್ಲಿ ಹಾರ್ದಿಕ್ ಅವಾಂತರ: ಬಿಸಿ ಮುಟ್ಟಿಸಲಿದೆ ಬಿಸಿಸಿಐ


ನವದೆಹಲಿ, ಜನವರಿ 9: ಕಾಫೀ ವಿತ್ ಕರಣ್ ಟಿವಿ ಶೋನಲ್ಲಿ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆಯ ವಿವಾದ ತೀವ್ರಗೊಂಡಿದೆ. ಪಾಂಡ್ಯ ಅವರ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಹಾರ್ದಿಕ್‌ಗೆ ಬಿಸಿಸಿಐ ಬಿಸಿ ಮುಟ್ಟಿಸುವ ಸಾಧ್ಯತೆ ಹೆಚ್ಚಿದೆ.
ಜನಪ್ರಿಯ ಟಿವಿ ಶೋನಲ್ಲಿ ಕುಳಿತಿದ್ದಾಗ ಹಾರ್ದಿಕ್ ತಾನೊಬ್ಬ ಕ್ರಿಕೆಟ್ ಆಟಗಾರ, ತನಗೆ ಅಪಾರ ಅಭಿಮಾನಿಗಳಿದ್ದಾರೆ, ತನಗೆ ಸಾಮಾಜಿಕ ಕಳಕಳಿಯೂ ಇದೆ ಎಂಬುದನ್ನು ಮರೆತು ಹೇಗೆಂದರೆ ಹೇಗೋ ಮಾತನಾಡಿದ್ದಾರೆ. ಪಾಂಡ್ಯ ನಡೆಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಪಾಳ ಮೋಕ್ಷ ಮಾಡಿದ್ದಾರೆ.
ಪಾಂಡ್ಯ ವಿವಾದಕ್ಕೆ ಸಿಲುಕಿದ್ದು ಮುಖ್ಯವಾಗಿ ಎರಡು ಕಾರಣಗಳಿಗಾಗಿ. 1 ಮಹಿಳೆಯರ ಕುರಿತು ಕೀಳು ಅಭಿರುಚಿಯ ಹೇಳಿಕೆ, 2. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗೆಗಿನ ತಾತ್ಸಾರದ ಹೇಳಿಕೆ, ಕೊಹ್ಲಿಗೆ ಹೋಲಿಕೆ ಇವು. ಸಚಿನ್ ಕುರಿತ ಹೇಳಿಕೆ ವಿಚಾರದಲ್ಲಿ ಪಾಂಡ್ಯ ಜೊತೆಗೆ ಕೆಎಲ್ ರಾಹುಲ್ ಕೂಡ ಇದ್ದಾರೆ.

ಕೀಳು ಅಭಿರುಚಿ ತೋರಿಕೆ
ಕಾಫೀ ವಿತ್ ಕರಣ ಶೋನಲ್ಲಿ ತಾನು ಮೊದಲು ಸೆಕ್ಸ್‌ನಲ್ಲಿ ಪಾಲ್ಗೊಂಡ ಬಗ್ಗೆ, ಮಹಿಳೆಯ ಬಗೆಗಿನ ತನಗಿರುವ ಕೀಳು ಅಭಿರುಚಿಯ ಬಗ್ಗೆ ಹಾರ್ದಿಕ್ ಹೇಳಿಕೊಂಡಿದ್ದರು. ಸಚಿನ್ ಮತ್ತು ಕೊಹ್ಲಿ ಇವರಲ್ಲಿ ಯಾರು ಉತ್ತಮ ಬ್ಯಾಟ್ಸ್ಮನ್ ಎಂಬ ಕರಣ್ ಜೋಹರ್ ಪ್ರಶ್ನೆಗೆ ಪಾಂಡ್ಯ, ರಾಹುಲ್ ಇಬ್ಬರೂ ವಿರಾಟ್ ಕೊಹ್ಲಿ ಎಂದು ಉತ್ತರಿಸಿದ್ದಾರೆ.

ಹಿರಿಯ ಆಟಗಾರರ ಬಗ್ಗೆ ತಾತ್ಸಾರ
ವಿರಾಟ್ ಕೊಹ್ಲಿ ಈಗ ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದ್ದಾರೆ ನಿಜ. ಆದರೆ ಹಿರಿಯ ಆಟಗಾರ ಸಚಿನ್ ಅವರ ಕೊಡುಗೆಯೂ ದೇಸಿ ಕ್ರಿಕೆಟ್‌ಗೆ ಪ್ರಮುಖವೆ. ಎಲ್ಲದಕ್ಕಿಂತ ಮಿಗಿಲಾಗಿ ಇಬ್ಬರೂ ಯುವ ಆಟಗಾರರಿಗೆ ದೇಶದ ಹಿರಿಯ ಆಟಗಾರರ ಮೇಲಿರುವ ತಾತ್ಸಾರದ ಭಾವನೆ ಬಿಸಿಸಿಐಯನ್ನು ಕೆರಳಿಸಿದೆ.

ಕ್ಷಮೆ ಕೇಳಿದ ಪಾಂಡ್ಯ
ಟಿವಿ ಶೋ ಎಪಿಸೋಡ್ ಪ್ರಸಾರ ಆದ ನಂತರ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಕ್ಷಮೆ ಕೇಳಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ. ಶೋಗೆ ತಕ್ಕಂತೆ ಮಾತನಾಡಿದೆನಷ್ಟೆ. ನನ್ನನ್ನು ಕ್ಷಮಿಸಿ ಎಂದು ಹಾರ್ದಿಕ್ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ಗರಂ
ಕಾರ್ಯಕ್ರಮದ ವೇಳೆ ಪಾಂಡ್ಯ ಬಳಸಿದ ಪದ ಬಳಕೆ, ತೋರಿಕೊಂಡ ಮನೋಭಾವ ಒಬ್ಬ ಭಾರತದ ಕ್ರಿಕೆಟ್ ಆಟಗಾರನ ಮನೋಭಾವಕ್ಕಿಂತ ದೂರವಿತ್ತು. ಈ ಕಾರಣಕ್ಕೆ ಹಾರ್ದಿಕ್‌ಗೆ ಬಿಸಿಸಿಐ ಬಿಸಿ ಮುಟ್ಟಿಸಲಿದೆ ಎನ್ನಲಾಗುತ್ತಿದೆ. ಮಾಹಿತಿಯ ಪ್ರಕಾರ ಬಿಸಿಸಿಐ ಅಧಿಕಾರಿಗಳು ಪಾಂಡ್ಯ ಪಾಲ್ಗೊಂಡ ಎಲ್ಲಾ ಕಾಫೀ ವಿಟ್ ಕರಣ್ ಎಪಿಸೋಡ್‌ಗಳನ್ನು ಗಮನಿಸಿದ್ದಾರೆ, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications