Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೊಸ ಫ್ರಾಂಚೈಸಿ: ಡಿಸೆಂಬರ್‌ನಲ್ಲಿ ಬಿಸಿಸಿಐ ಸಭೆ ನಡೆಯುವ ನಿರೀಕ್ಷೆ

BCCI likely to call for Annual General Meeting in December

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ 2021ರ ಆವೃತ್ತಿಗೆ ನೂತನ ಫ್ರಾಂಚೈಸಿ ಸೇರಿಸುವ ವಿಚಾರಕ್ಕೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಸಭೆ ಕರೆಯುವ ನಿರೀಕ್ಷೆಯಿದೆ.

ಬಿಸಿಸಿಐ ಸಂವಿಧಾನದಂತೆ ಹೊಸ ಐಪಿಎಲ್ ಫ್ರಾಂಚೈಸಿಯಂತವಕ್ಕೆ ಟೆಂಡರ್ ಕರೆಯಲು ವಾರ್ಷಿಕ ಸಭೆಯ ಅಗತ್ಯವಿರುತ್ತದೆ. ಹೀಗಾಗಿ ದೀಪಾವಳಿ ಬಳಿಕ ಈ ಸಮಸ್ಯೆಯನ್ನು ಬಗೆಹರಿಸಲು ಬಿಸಿಸಿಐ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ಷಿಕ ಸಭೆ ನಡೆಸುವ ಮುನ್ನ 21 ದಿನಗಳ ನೋಟಿಸ್ ನೀಡಬೇಕಾಗಿರುತ್ತದೆ. ಕೊರೊನಾ ಸಮಯವಾದ್ದರಿಂದ ಈಗ ಬಹುತೇಕ ಕಾರ್ಯಕ್ರಮ, ಸಭೆಗಳು ವರ್ಚುಯಲ್ ಆಗಿರುವುದರಿಂದ ದೈಹಿಕ ಉಪಸ್ಥಿತಿಯ ಅಗತ್ಯವಿಲ್ಲವಾದ್ದರಿಂದ ಸಭೆ ನಡೆಸಲು ತೊಂದರೆಯೇನಿಲ್ಲ.

2021ರ ವೇಳೆಗೆ 8ಕ್ಕೆ ಬದಲು 9 ಐಪಿಎಲ್ ಫ್ರಾಂಚೈಸಿಗಳನ್ನು ತರಲು ಬಿಸಿಸಿಐ ಉತ್ಸುಕವಾಗಿದೆ. 2023ರ ವೇಳೆಗೆ ಒಟ್ಟಾರೆ 10 ಫ್ರಾಂಚೈಸಿಗಳನ್ನು ಕಣಕ್ಕಿಳಿಸುವ ಆಲೋಚನೆ ಬಿಸಿಸಿಐ ತಲೆಯಲ್ಲಿದೆ ಎಂದು ಮೂಲವೊಂದು ಈ ಹಿಂದೆ ತಿಳಿಸಿತ್ತು.

Story first published: Saturday, November 14, 2020, 11:22 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+