For Quick Alerts
ALLOW NOTIFICATIONS  
For Daily Alerts
 

ಆಯ್ಕೆ ಸಮಿತಿಯ ಮುಖ್ಯಸ್ಥರ ಹುಡುಕಾಟದಲ್ಲಿ ಇದೆಯಾ ಬಿಸಿಸಿಐ?

ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಹಿರಿಯ ಹಾಗೂ ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್‌ ಅಶ್ವಿನ್‌ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದಶಕಗಳ ಟೀಮ್ ಇಂಡಿಯಾಕ್ಕೆ ಆಸರೆಯಾಗಿದ್ದ ತ್ರಿಮೂರ್ತಿಗಳ ಹಠಾತ್ ನಿರ್ಗಮನ್‌ ತಂಡಕ್ಕೆ ತುಂಬಲಾಗದ ನಷ್ಟವಾಗಿದೆ. ಇನ್ನು ಇದೇ ವೇಳೆ ಶುಭಮನ್‌ ಗಿಲ್‌ ತನ್ನ ನಾಯಕತ್ವದ ಹೊಸ ಅಧ್ಯಾಯವನ್ನು ಇಂಗ್ಲೆಂಡ್‌ನಲ್ಲಿ ಆರಂಭಿಸಲಿದ್ದಾರೆ.

ಟೀಮ್ ಇಂಡಿಯಾ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿರುವಲ್ಲಿ ತಂಡದ ನಿರ್ವಹಣೆ ಹಾಗೂ ಆಯ್ಕೆ ಸಮಿತಿಯ ಪಾತ್ರ ದೊಡ್ಡದರು. ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಮುಖ್ಯಸ್ಥರಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರ ನಿಜಕ್ಕೂ ಅಭಿಮಾನಿಗಳಿಗೆ ಕೊಂಚ ನೆಮ್ಮದಿಯನ್ನು ತಂದಿರಲಿದೆ.

BCCI Likely to Extend Ajit Agarkar s Tenure as Chief Selector - What s Next for Team India

ಅಜಿತ್ ಅಗರ್ಕರ್‌ ಬಿಸಿಸಿಐ ಮುಖ್ಯ ಆಯ್ಕೆ ಸಮಿತಿಯಲ್ಲಿ ಉಳಿಯಬಹುದು ಎಂದು ಕ್ರಿಕ್ ಬ್ಲಾಗರ್‌ ವರದಿ ಮಾಡಿದೆ. ಆದರೆ ಇದಕ್ಕೆ ಅನುಮೋದನೆ ನೀಡಲು ಮಂಡಳಿ ತನ್ನ ಪ್ರಕ್ರಿಯೆಯ ಅನುಸರಿಸುತ್ತದೆ. ಅಜಿತ್‌ ಅಗರ್ಕರ್‌ ಅಧಿಕಾರವಧಿಯಲ್ಲಿ ಉತ್ತಮ ಆಟಗಾರರ ಆಯ್ಕೆ ಆಗಿದೆ ಎಂಬುದ ಎಲ್ಲರ ಅಭಿಮತವಾಗಿದೆ. ಮುಖ್ಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ ಜುಲೈ 2023ರಲ್ಲಿ ತಮ್ಮ ಅಧಿಕಾರವನ್ನು ವಹಿಸಿಕೊಂಡರು. ಇವರ ಅಧಿಕಾರವಧಿಯಲ್ಲಿ ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಅಬ್ಬರಿಸಿದೆ.

ಉತ್ತಮ ಕೊಡುಗೆ

ಅಜಿತ್ ಅಗರ್ಕರ್‌ ಅವರ ಮುಂದಾಳತ್ವದಲ್ಲಿ ಕಟ್ಟಲಾದ ಟೀಮ್ ಇಂಡಿಯಾ, ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ಆದರೆ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತು. ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ರೋಹಿತ್ ಶರ್ಮಾ ಪಡೆ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟ್ರೋಫಿಗೆ ಎರಡನೇ ಬಾರಿ ಮುತ್ತಿಟ್ಟಿತು. ಇನ್ನು ಪಾಕ್‌ ಆಯೋಜಿತ ಚಾಂಪಿಯನ್ಸ್‌ ಟ್ರೋಫಿಯಲ್ಲೂ ತಂಡ ಸ್ಥಿರ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

BCCI Likely to Extend Ajit Agarkar s Tenure as Chief Selector - What s Next for Team India

ಅಜಿತ್ ಅಗರ್ಕರ್‌ ಹಾಗೂ ತಂಡದ ನಿರ್ವಹಣೆಯ ನಡುವೆ ಕೊಂಚ ಭಿನ್ನಾಭಿಪ್ರಾಯಗಳು ಇದ್ದವು ಎಂಬುದು ವರದಿಯಾಗಿದೆ. ನಾಯಕ ರೋಹಿತ್ ಶರ್ಮಾ, ಸೂಪರ್ ಸ್ಟಾರ್ ವಿರಾಟ್‌ ಕೊಹ್ಲಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವಲ್ಲಿ ಅಜಿತ್ ಪಾತ್ರ ಇದೆ ಎಂದು ಹೇಳಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿ ಅಜಿತ್ ಅಗರ್ಕರ್ ಕಾರ್ಯ ಮಂಡಳಿಗೆ ತೃಪ್ತಿ ನೀಡಿದ್ದು, ಅವರ ಅಧಿಕಾರವನ್ನು ಮುಂದುವರೆಸುವ ಸಾಧ್ಯತೆ ಇದೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಾಯಿಗೆ ಹೃದಯಾಘಾತವಾಗಿದ್ದರಿಂದ ಅವರು ಇಂಗ್ಲೆಂಡ್‌ ಪ್ರವಾಸದಿಂದ ಭಾರತಕ್ಕೆ ಮರಳಿದ್ದಾರೆ. ಸದ್ಯ ಗಂಭೀರ್ ತಾಯಿಯ ಆರೋಗ್ಯ ಚೇತರಿಸಿಕೊಂಡಿದ್ದರಿಂದ ಕೋಚ್‌, ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಜೂನ್ 20 ರಿಂದ ಟೆಸ್ಟ್‌ ಪಂದ್ಯಗಳು ನಡೆಯಲಿವೆ.

Story first published: Monday, June 16, 2025, 23:34 [IST]
Other articles published on Jun 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+