ಅರ್ಜುನ ಪ್ರಶಸ್ತಿಗೆ ಶಿಫಾರಸಾಗಲಿದ್ದಾರೆ ಶಿಖಾ ಪಾಂಡೆ, ದೀಪ್ತಿ ಶರ್ಮಾ

ನವದೆಹಲಿ, ಮೇ 13: ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮಹಿಳೆಯರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸ್ಪರ್ಧಿಸುವಾಗ ಬ್ಲೂ ಜೆರ್ಸಿ ಧರಿಸಿದ್ದ ಶಿಖಾ ಪಾಂಡೆ ಮತ್ತು ದೀಪ್ತೀ ಶರ್ಮಾ ಅವರ ಹೆಸರುಗಳನ್ನು ಬೋರ್ಡ್ ಆಫ್ ಕಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಶೆಫಾಲಿ ವರ್ಮಾ, ಪೂನಂ ಯಾದವ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಇವರಲ್ಲಿ ಶಿಖಾ ಮತ್ತು ದೀಪ್ತಿ ಹೆಸರನ್ನು ಈ ವರ್ಷದ ಅರ್ಜುನಾ ಪ್ರಶಸ್ತಿಗಾಗಿ ಬಿಸಿಸಿಐ ಕ್ರಿಕೆಟ್ ಆಪರೇಶನ್ಸ್ ಟೀಮ್ ಸಲಹೆ ಮಾಡಿದೆ.
'ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ಭಾರತ ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವಲ್ಲಿ ಇಬ್ಬರೂ ನೆರವು ನೀಡಿದ್ದರು. ಹೀಗಾಗಿ ಅವರ ಹೆಸರುಗಳನ್ನು ಅರ್ಜುನಾ ಪ್ರಶಸ್ತಿಗೆ ಸಲಹೆ ಮಾಡಿದ್ದೇವೆ,' ಎಂದು ಬಿಸಿಸಿಐ ಹೇಳಿದೆ.
ಟಿ20 ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯ ಸೋಲದೆ ಫೈನಲ್‌ವರೆಗೂ ಮುನ್ನಡೆದಿದ್ದ ಭಾರತದ ವನಿತಾ ತಂಡ, ಪ್ರಶಸ್ತಿ ಸುತ್ತಿನಲ್ಲೇ ನೀರಸ ಪ್ರದರ್ಶನ ನೀಡಿತ್ತು. ಮೆಲ್ಬರ್ನ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 85 ರನ್‌ನಿಂದ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications