ಆಸ್ಟ್ರೇಲಿಯಾ ಪ್ರವಾಸ ಸರಣಿಗೆ ರೋಹಿತ್ ಶರ್ಮಾ ಸೇರ್ಪಡೆ ಸಾಧ್ಯತೆ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಕಳುಹಿಸಿಕೊಡಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಯೋಚಿಸುತ್ತಿದೆ ಎಂದು ವರದಿಯೊಂದು ಹೇಳಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟವಾದಾಗ ಅದರಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಇರಲಿಲ್ಲ. ಶರ್ಮಾ ತಂಡದಲ್ಲಿ ಇಲ್ಲದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡಾಗಿತ್ತು. ಹೀಗಾಗಿ ಭಾರತದ ಪ್ರಮುಖ ಆಟಗಾರ ರೋಹಿತ್ ಅವರನ್ನು ಕಳುಹಿಸಲು ಬಿಸಿಸಿಐ ಮುಂದಾಗಿದ ಎನ್ನಲಾಗಿದೆ.
ಆಸ್ಟ್ರೇಲಿಯಾ-ಭಾರತ ಪ್ರವಾಸ ಸರಣಿಯಲ್ಲಿ ರೋಹಿತ್ ಭಾಗವಹಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ ಬಿಸಿಸಿಐನಿಂದ ಅಂತಿಮ ಘೋಷಣೆ ಪ್ರಕಟವಾಗಬೇಕಾಗಿದೆಯಷ್ಟೇ. ನವೆಂಬರ್ 11ರಂದು ಭಾರತ ತಂಡ ಆಸ್ಟ್ರೆಲಿಯಾ ಪ್ರವಾಸಕ್ಕಾಗಿ ದುಬೈ ತೊರೆಯುವಾಗ ಶರ್ಮಾ ಕೂಡ ತಂಡದ ಜೊತೆ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
'ಶರ್ಮಾ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವ ಸಂಬಂಧ ಶೀಘ್ರ ನಿರ್ಧಾರ ಪ್ರಕಟವಾಗಲಿದೆ. ಶರ್ಮಾ ಭಾರತ ತಂಡದ ಜೊತೆಗಿದ್ದು ಫಿಸಿಯೋ ನಿತಿನ್ ಪಟೇಲ್ ಮತ್ತು ಟ್ರೇನರ್ ನಿಕ್ ವೆಬ್ ಜೊತೆ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ವರ್ಕ್ ಮಾಡಲಿದ್ದಾರೆ. ಈ ವಿಚಾರ ಏನಾಗುತ್ತೆ ಕಾದು ನೋಡೋಣ,' ಎಂದು ಬಿಸಿಸಿಐ ಮೂಲ ಹೇಳಿರುವುದಾಗಿ ಇನ್‌ಸೈಡ್‌ಸ್ಪೋರ್ಟ್ಸ್ ವರದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications