Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಮೆಗಾ ಆಕ್ಷನ್ ಹಿನ್ನೆಲೆ: ದೇಶಿಯ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆ

BCCI likely to set dates for Syed Mushtaq Ali Trophy before IPL auction

13ನೇ ಆವೃತ್ತಿಯ ಐಪಿಎಲ್ ಯಶಸ್ಸಿನ ಬಳಿಕ ಮತ್ತೊಂದು ಐಪಿಎಲ್ ಆಯೋಜನೆಗೆ ಬಿಸಿಸಿಐ ಚಿತ್ತ ನೆಟ್ಟಿದೆ. ಆದರೆ ಅದಕ್ಕು ಮುನ್ನ ಮಹಾಹರಾಜು ಈ ಬಾರಿ ನಡೆಯಲಿದೆ. ಆ ಹಿನ್ನೆಲೆಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಈ ಮಹಾ ಹರಾಜು ನಡೆಯುವ ಮುನ್ನವೇ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಯೋಚಿಸಿದೆ. ಹೀಗಾಗಿ ಈ ಬಾರಿಯ ರಣಜಿಗೂ ಮುನ್ನವೇ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ನಡೆಯಲಿದೆ. ಆ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿನ ಪ್ರತಿಭೆಗಳ ಹುಡುಕಾಟಕ್ಕೆ ಬಿಸಿಸಿಐ ವೇದಿಕೆ ಸೃಷ್ಟಿಸಿಕೊಳ್ಳಲು ತೀರ್ಮಾನಿಸಿದೆ.

ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಯುವ ಪ್ರತಿಭೆಗಳನ್ನು ಪತ್ತೆಹಚ್ಚಲು ಇರುವ ಏಕೈಕ ವೇದಿಕೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಾಗಿದೆ. ದೇಶದ ಎಲ್ಲಾ ರಾಜ್ಯಗಳ ಕ್ರಿಕೆಟ್ ತಂಡಗಳಲ್ಲಿ ಯುವ ಆಟಗಾರರು ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಐಪಿಎಲ್ ಹರಾಜಿಗೂ ಮುನ್ನ ಈ ಟೂರ್ನಿ ಆಯೋಜಿಸಿಕೊಂಡು ಪ್ರತಿಭಾನ್ವೇಶಣೆ ನಡೆಲಿದೆ.

ಇನ್ನು ಮತ್ತೊಂದೆಡೆ ಕೊರನಾ ವೈರಸ್‌ನ ಕಾರಣದಿಂದಾಗಿ ಈ ಬಾರಿ ದೇಶೀಯ ಕ್ರಿಕೆಟ್‌ಗೆ ಇನ್ನೂ ಚಾಲನೆ ದೊರೆತಿಲ್ಲ. ಯಾವಾಗ ದೇಶೀಯ ಕ್ರಿಕೆಟ್ ಆರಂಭವಾಗಲಿದೆ ಎಂಬ ಬಗ್ಗೆಯೂ ಸ್ಪಷ್ಟತೆಗಳಿಲ್ಲ. ಆದರೆ ಬಿಸಿಸಿಐನ ಈ ನಿರ್ಧಾರದ ಕಾರಣದಿಂದಾಗಿ ಶೀಘ್ರವಾಗಿಯೇ ಈ ದೇಶೀಯ ಕ್ರಿಕೆಟ್‌ಗೂ ಚಾಲೆನೆ ದೊರೆಯುವುದು ಪಕ್ಕಾ ಆಗಿದೆ.

ಮುಂದಿನ ವರ್ಷದಲ್ಲಿ ಎಲ್ಲಾ ದೇಶೀಯ ಕ್ರಿಕೆಟ್‌ಗೆ ಚಾಲನೆ ದೊರೆಯಲಿದೆ. ಜನವರಿತಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆಯೋಜನೆಯಾಗುವ ಸಾಧ್ಯತೆಯಿದೆ. ವರ್ಷವೂ ರಣಜಿ ಮೂಲಕ ಆರಂಭವಾಗುತ್ತಿದ್ದ ದೇಶೀಯ ಕ್ರಿಕೆಟ್ ಈ ಬಾರಿ ಚುಟುಕು ಕ್ರಿಕೆಟ್ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಬಿಸಿಸಿಐ ಎಲ್ಲಾ ರಾಜ್ಯಗಳಿಗೂ ಮಾಹಿತಿಯನ್ನು ರವಾನಿಸಲಿದ್ದು ಬಯೋಬಬಲ್ ನಿರ್ಮಾಣಕ್ಕೆ ಸೂಚಿಸಲಿದೆ

Story first published: Tuesday, November 17, 2020, 9:00 [IST]
Other articles published on Nov 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+