Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಕೇಂದ್ರ ಕಚೇರಿ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್‌?

BCCI likely to shift its office to Bengaluru

ಬೆಂಗಳೂರು, ಫೆಬ್ರವರಿ 06: ಪ್ರಪಂಚದ ಅತಿ ಬಲಿಷ್ಠ ಕ್ರಿಕೆಟ್ ಸಂಸ್ಥೆ ಎಂದು ಹೆಸರಾದ ಭಾರತದ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ಕೇಂದ್ರ ಕಚೇರಿ ಬೆಂಗಳೂರಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರವು ರಾಷ್ಟ್ರೀಯ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ನಿರ್ಮಾಣಕ್ಕಾಗಿ ಬಿಸಿಸಿಐಗೆ ಬೆಂಗಳೂರಿನ ಹೊರವಲಯದಲ್ಲಿ 40 ಎಕರೆ ಭೂಮಿ ಮಂಜೂರು ಮಾಡಿದ್ದು, ಇದೇ ಜಾಗದಲ್ಲಿ ಬಿಸಿಸಿಐ ಕೇಂದ್ರ ಕಚೇರಿಯನ್ನೂ ನಿರ್ಮಿಸುಲು ಬಿಸಿಸಿಐ ಚಿಂತಿಸಿದೆ. ಪ್ರಸ್ತುತ ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐ ನ ಕೇಂದ್ರ ಕಚೇರಿ ಇದೆ.

ಕಚೇರಿಯಲ್ಲಿ ಮುಂಬೈನಿಂದ ಬೆಂಗಳೂರಿಗೆ ವರ್ಗಾಯಿಸುವ ಬಗ್ಗೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಎಲ್ಲ ಸದಸ್ಯರಿಗೆ ಪತ್ರ ಬರೆದಿದ್ದು, ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುವ ಸಂಭವ ಇದೆ.

'ಈಗಿರುವ ಬಿಸಿಸಿಐ ಕಚೇರಿಯಲ್ಲಿ ಆಧುನಿಕ ಸೌಲಭ್ಯಗಳಿಲ್ಲ ಎಂದು ಹಲವರು ದೂರಿದ್ದಾರೆ, ಹಾಗಾಗಿ ಪ್ರಮುಖ ಸಭೆಗಳನ್ನು ಹೋಟೆಲ್‌ಗಳಲ್ಲಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸಿಕ್ಕಿರುವ 40 ಎಕರೆ ಜಾಗದಲ್ಲಿ ಆಧುನಿಕ ಸೌಲಭ್ಯವುಳ್ಳ ಕಚೇರಿ ನಿರ್ಮಿಸಿಕೊಂಡರೆ ಹೊಟೇಲ್‌ನಲ್ಲಿ ಸಭೆಗಳನ್ನು ನಡೆಸುವ ಖರ್ಚು ಉಳಿಸಬಹುದು ಮತ್ತು ಕಚೇರಿಗೆ ಹೊಂದಿಕೊಂಡಂತೆ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಬಾಡಿಗೆ ನೀಡಿದರೆ ಅದರಿಂದಲೂ ಆದಾಯ ಗಳಿಸಬಹುದು' ಎಂದು ಖನ್ನಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Story first published: Tuesday, February 6, 2018, 9:38 [IST]
Other articles published on Feb 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+