IPL 2026: ಐಪಿಎಲ್ 2026 ಆರಂಭ ವಿಳಂಬ ಸಾಧ್ಯತೆ
ಭಾರತದಲ್ಲಿ ಸದ್ಯ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ವಿಶ್ವಕಪ್ ಮುಗಿದ ಬಳಿಕ ಭಾರತದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಐಪಿಎಲ್ ಪಂದ್ಯಗಳನ್ನು ಎರಡು ದಿನ ಮುಂದೂಡುವ ಸಾಧ್ಯತೆ ಇದೆ.
19ನೇ ಆವೃತ್ತಿಯ ಐಪಿಎಲ್‌ಗೆ ತೆರೆ ಮರೆಯ ಕಾರ್ಯಗಳು ನಡೆದಿವೆ. ಈಗಾಗಲೇ ಹಲವು ತಂಡಗಳು ತಮ್ಮ ಅಭ್ಯಾಸ ಶಿಬಿರವನ್ನು ಆರಂಭಿಸಿವೆ. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಐಪಿಎಲ್ ಎರಡು ದಿನ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಈ ಮೊದಲು ಐಪಿಎಲ್ ಪಂದ್ಯಗಳನ್ನು ಮಾರ್ಚ್ 26 ರಂದು ನಡೆಸುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಐಪಿಎಲ್ ಅನ್ನು ಒಂದು ಅಥವಾ ಎರಡು ದಿನ ಮುಂದೂಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನು ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.

ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಐಪಿಎಲ್ ಮಾರ್ಚ್ 28 ರಂದು ನಡೆಸುವ ಸಾಧ್ಯತೆ ಇದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಮಾರ್ಚ್ 28 ಶನಿವಾರವಾಗಿದ್ದು, 29 ಭಾನುವಾರ ವಾಗಿದೆ. ಇದರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದತ್ತ ಬರುವ ನಿರೀಕ್ಷೆ ಇದೆ. ಅಲ್ಲದೆ ಇದು ಅಭಿಮಾನಿಗಳಿಗೆ ಹೆಚ್ಚಿನ ಪ್ರಯೋಜನ ಸಹ ಆಗಲಿದೆ.
ವೇಳಾಪಟ್ಟಿ ಬಿಡುಗಡೆ ಯಾವಾಗ?
ಮುಂಬರುವ ಐಪಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನು ಘೋಷಣೆ ಮಾಡಿಲ್ಲ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಈ ವೇಳಾಪಟ್ಟಿಯನ್ನು ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಮಾರ್ಚ್ 26 ರಂದು ಐಪಿಎಲ್ ಆರಂಭವಾಗುತ್ತದೆ ಎಂದು ಸಹ ಬಿಸಿಸಿಐ ಖಚಿತಪಡಿಸಿದ್ದವು. ಆದರೆ ಬಿಸಿಸಿಐ ಮೂಲಗಳು ಇದನ್ನು ಖಚಿತ ಪಡಿಸಿದ್ದವು. ಇನ್ನು ಐಪಿಎಲ್ ಹರಾಜು ನಡೆದಾಗ ಮಾಲೀಕರು ಇದೇ ದಿನಾಂಕವನ್ನು ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ. ಅಲ್ಲದೆ ಐಪಿಎಲ್ ಫೈನಲ್ ಮೇ 31 ರಂದು ಆಯೋಜಿಸುವ ಬಗ್ಗೆ ತಿಳಿಸಲಾಗಿತ್ತು. ಆದರೆ ಈ ಎಲ್ಲ ದಿನಾಂಕಗಳಲ್ಲಿ ಮಾರ್ಪಾಡಾಗುವ ಸಾಧ್ಯತೆ ಇದೆ.
ವಿಳಂಬ ಏಕೆ?
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂನಲ್ಲಿ ಶೀಘ್ರದಲ್ಲೇ ಚುನಾವಣೆಗಳು ನಡೆಯಲಿವೆ. ಈ ರಾಜ್ಯಗಳ ಚುನಾವಣೆಗಳ ದಿನಾಂಕವನ್ನು ಇನ್ನು ಚುನಾವಣಾ ಆಯೋಗವು ಘೋಷಣೆ ಮಾಡಿಲ್ಲ. ಚುನಾವಣೆಯ ದಿನಾಂಕಗಳನ್ನು ಘೋಷಿಸಿದ ಬಳಿಕವೇ ಐಪಿಎಲ್ ವೇಳಾಪಟ್ಟಿಯನ್ನು ಘೋಷಿಸುವ ಚಿಂತನೆಯನ್ನು ಬಿಸಿಸಿಐ ನಡೆಸಿದೆ ಎಂದು ತಿಳಿದು ಬಂದಿದೆ. ಬಿಸಿಸಿಐ ಈ ಬಾರಿ ವೇಳಾಪಟ್ಟಿಯನ್ನು ಎರಡು ಭಾಗಗಳಲ್ಲಿ ಘೋಷಿಸುವ ಸಾಧ್ಯತೆ ಇದೆ. ಮಾರ್ಚ್ ಮೊದಲ ವಾರದಲ್ಲಿ ಮೊದಲ ವೇಳಾಪಟ್ಟಿ ಘೋಷಣೆ ಆಗುವ ಸಂಭವವಿದೆ. ಚುನಾವಣೆ ದಿನಾಂಕಗಳು ಘೋಷಣೆ ಆದ ಬಳಿಕ ಇನ್ನುಳಿದ ವೇಳಾಪಟ್ಟಿಯನ್ನು ಘೋಷಿಸುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications