ಐಪಿಎಲ್: ವೇಳಾಪಟ್ಟಿ ವಿಳಂಬಕ್ಕೆ ಕಾರಣ ಬಹಿರಂಗ: ಮಾಸ್ಟರ್‌ಪ್ಲ್ಯಾನ್ ಮಾಡಿಕೊಂಡ ಬಿಸಿಸಿಐ

ಐಪಿಎಲ್ ಆರಂಭಕ್ಕೆ ಇನ್ನು ಕೇವಲ 20 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದ್ದರೂ ಬಿಸಿಸಿಐ ಇನ್ನೂ ಕೂಡ ಪಂದ್ಯದ ವೇಳಾಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಅದಕ್ಕೆ ಕಾರಣವೇನೆಂಬುದು ಈಗ ಬಹಿರಂಗವಾಗಿದೆ. ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಟೂರ್ನಿಗೆ ಸಮಸ್ಯೆಗಳು ಹಲವಾರಿವೆ.
ಕೊರೋನಾ ವೈರಸ್‌ನ ಕಾರಣಕ್ಕಾಗಿ ದುಬೈ ಮತ್ತು ಅಬುದಾಬಿ ಎರಡು ನಗರಗಳಲ್ಲೂ ಪ್ರತ್ಯೇಕ ನೀತಿ ಸಂಹಿತೆ ಹೊಂದಿದೆ. ಅದರಲ್ಲೂ ಎರಡು ನಗರಗಳ ಮಧ್ಯೆ ಪ್ರಯಾಣ ನಿರ್ಬಂಧಗಳು ಕೂಡ ಇದೆ. ಅಬುದಾಬಿಯನ್ನು ಪ್ರವೇಶಿಸಬೇಕಾದರೆ ಪ್ರತಿಯೊಬ್ಬರೂ ಪ್ರತ್ಯೇಕ ಕೋವಿಡ್-19 ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯನ್ನು ಪಡೆದುಕೊಳ್ಳಬೇಕಿದೆ. ಹಾಗಿದ್ದಾಗ ಮಾತ್ರವೇ ಗಡಿಯನ್ನು ದಾಟುವ ಅವಕಾಶವಿದೆ.

ಪ್ರತಿ ಪಂದ್ಯಕ್ಕೂ ಪಾಲನೆ ಕಠಿಣ
ಈ ಕಠಿಣ ನಿಬಂಧನೆಗಳು ಪಂದ್ಯಗಳು ನಡೆಯುವ ದಿನ ಪಾಲಿಸುವುದು ತಂಡಗಳ ಪಾಲಿಗೆ ತುಂಬಾ ಕಠಿಣವಾಗಿದೆ. ಈ ಕಾರಣದಿಂದಾಗಿ ಬಿಸಿಸಿಐ ಇನ್ನೂ ಕೂಡ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ ಎಂಬ ಮಾಹಿತಿಗಳು ಈಗ ದೊರಕಿದೆ.

ಎರಡು ವಿಭಾಗದಲ್ಲಿ ನಡೆಸುವ ಚಿಂತನೆ
'ಇನ್‌ಸೈಡ್ ಸ್ಪೋರ್ಟ್' ವೆಬ್‌ಸೈಟ್ ವರದಿಯ ಪ್ರಕಾರ ಈ ನಿಯಮಗಳ ಕಾರಣದಿಂದಾಗಿ ಬಿಸಿಸಿಐ ಈ ಬಾರಿಯ ಐಪಿಎಲ್ ಅನ್ನು ಎರಡು ಹಂತದಲ್ಲಿ ನಡೆಸಲು ಬಿಸಿಸಿಐ ಚಿಂತೆ ನಡೆಸಿದೆ. ಇದರಿಂದಾಗಿ ಎರಡು ನಗರಗಳ ನಡುವೆ ಪ್ರಯಾಣ ಭಾರೀ ಕಡಿತವಾಗಲಿದೆ.

ಮೊದಲ ಹಂತ ಶಾರ್ಜಾ ಹಾಗೂ ದುಬೈನಲ್ಲಿ
ಈ ಬಾರಿಯ ಐಪಿಎಲ್ ಶಾರ್ಜಾ, ದುಬೈ ಹಾಗೂ ಅಬುದಾಬಿಯಲ್ಲಿ ನಡೆಯಲಿದೆ. ಇಲ್ಲಿ ಶಾರ್ಜಾ ಹಾಗೂ ದುಬೈ ನಡುವಿನ ಪ್ರಯಾಣಕ್ಕೆ ಯಾವುದೇ ನಿಬಂಧನೆಗಳು ಇಲ್ಲ. ಹೀಗಾಗಿ ಬಿಸಿಸಿಐ ಮೊದಲ ಹಂತದ ಸಂಪೂರ್ಣ ಪಂದ್ಯಗಳನ್ನು ದುಬೈ ಹಾಗೂ ಶಾರ್ಜಾದಲ್ಲಿ ನಡೆಸುವ ಸಾಧ್ಯತೆಯಿದೆ.

ಎರಡನೇ ಹಂತ ಅಬುದಾಬಿಯಲ್ಲಿ
ಬಳಿಕ ಎರಡನೇ ಭಾಗದ ಪಂದ್ಯಾಟಗಳನ್ನು ದುಬೈನಿಂದ 130 ಕಿ.ಮೀ ದೂರದಲ್ಲಿರುವ ಅಬುದಾಬಿಯಲ್ಲಿ ನಡೆಸುವ ಚಿಂತನೆಯಿದೆ. ಇದಾದ ಬಳಿಕ ಫ್ಲೇ ಆಫ್ ಪಂದ್ಯಗಳು ಹಾಗೂ ಫೈನಲ್ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು ಇದಕ್ಕೆ ತೇರ್ಗಡೆಯಾದ ತಂಡಗಳು ದುಬೈಗೆ ಪ್ರಯಾಣಿಸಬೇಕಾಗುತ್ತದೆ.

ಅಂತಿಮ ನಿರ್ಧಾರಕ್ಕೆ ಬಾರದ ಬಿಸಿಸಿಐ
ಬಿಸಿಸಿಐ ಈ ಬಗ್ಗೆ ಇನ್ನೂ ತನ್ನ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಮುಂದಿನ 48 ಗಂಟೆಗಳಲ್ಲಿ ಬಿಸಿಸಿಐ ಈ ಬಗ್ಗೆ ತನ್ನ ನಿಲುವನ್ನು ತೆಗೆದುಕೊಂಡು ಟೂರ್ನಿಯ ವೇಳಾಪಟ್ಟಯನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಯುಎಇ ಸರ್ಕಾರದ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹಾಗೂ ಹೇಮಂಗ್ ಅಮಿನ್ ಅಂತಿಮ ನಿರ್ದಾರವನನ್ಉ ತೆಗೆದುಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications