ಐಪಿಎಲ್ 2021: ಹೊಸ ತಂಡದ ಜೊತೆಗೆ ಮುಂದಿನ ಐಪಿಎಲ್‌ನಲ್ಲಿ ಐತಿಹಾಸಿಕ ಬದಲಾವಣೆ?

13ನೇ ಆವೃತ್ತಿಯ ಐಪಿಎಲ್ ಭರ್ಜರಿ ಯಶಸ್ಸಿನಿಂದಿಗೆ ಅಂತ್ಯವಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಮತ್ತೊಂದು ಐಪಿಎಲ್ ನಡೆಸುವತ್ತ ಬಿಸಿಸಿಐ ಚಿತ್ತ ನೆಟ್ಟಿದೆ. ಈ ಮಧ್ಯೆ ಮುಂದಿನ ಐಪಿಎಲ್‌ನಲ್ಲಿ ಕೆಲ ಮಹತ್ವದ ಬದಲಾವಣೆಗಳು ನಡೆಯುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
2021ರ ಐಪಿಎಲ್ ಆವೃತ್ತಿಗೆ ಮತ್ತೊಂದು ತಂಡವನ್ನು ಸೇರ್ಪಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ದೀಪಾವಳಿಯ ಬಳಿಕ ಈ ಬಗ್ಗೆ ಪ್ರಮುಖ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ. ಮುಂಬರುವ ಐಪಿಎಲ್‌ನಲ್ಲಿ ಸೇರಿಕೊಳ್ಳುವ ತಂಡ ಯಾವ ನಗರವನ್ನು ಪ್ರತಿನಿಧಿಸಲಿದೆ ಎಂಬುದರ ಜೊತೆಗೆ ಯಾರು ಮಾಲೀಕರು? ನಾಯಕ ಯಾರು? ಈ ಎಲ್ಲಾ ಪ್ರಶ್ನೆಗಳು ಕೂಡ ಅಭಿಮಾನಿಗಳನ್ನು ಕಾಡುತ್ತಿದೆ.
ಈ ಮಧ್ಯೆ ಮುಂದಿನ ಐಪಿಎಲ್‌ನಲ್ಲಿ ಆಡುವ ಬಳಗದಲ್ಲೂ ಐತಿಹಾಸಿಕ ಬದಲಾವಣೆಯೊಂದನ್ನು ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಕಳೆದ 13 ಆವೃತ್ತಿಯಲ್ಲಿದ್ದ ನಿರ್ಬಂಧವೊಂದನ್ನು ಸಡಿಲಿಸಲು ಬಿಸಿಸಿಐ ಚಿಂತಿಸುತ್ತಿದೆ. ಹಾಗಾದರೆ ಆ ಬದಲಾವಣೆ ಯಾವುದು ಮುಂದೆ ಓದಿ..

ವಿದೇಶಿ ಆಟಗಾರರ ಸಂಖ್ಯೆ ಹೆಚ್ಚಳ
ಐಪಿಎಲ್‌ನಲ್ಲಿ ಈಗ ಆಡುವ ಬಳಗದಲ್ಲಿ ವಿದೇಶಿ ಆಟಗಾರರನ್ನು ಆಡುವ ಬಳಗದಲ್ಲಿ ಸೇರಿಕೊಳ್ಳಲು ಪ್ರಮುಖ ನಿರ್ಬಂಧವಿದೆ. ಆಡುವ 11 ಆಟಗಾರರ ಬಳಗದಲ್ಲಿ ನಾಲ್ಕು ವಿದೇಶಿ ಆಟಗಾರರಿಗೆ ಮಾತ್ರವೇ ತಂಡದಲ್ಲಿ ಕಾಣಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ ಮುಂದಿನ ಬಾರಿ ಇದರಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಐವರು ವಿದೇಶಿಗರಿಗೆ ಅವಕಾಶ
ಆಡುವ ಬಳಗದಲ್ಲಿ ಈಗ ಇರುವ ನಾಲ್ಕು ಆಟಗಾರರ ಬದಲಿಗೆ ಮತ್ತೋರ್ವ ವಿದೇಶಿ ಆಟಗಾರನನ್ನು ಸೇರಿಸಿಕೊಳ್ಳುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಆಡುವ ಬಳಗವನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕೆಂಬುದು ಇದರ ಹಿಂದಿರುವ ಉದ್ದೇಶವಾಗಿದೆ. ಇದು ಪ್ರಾಂಚೈಸಿಗಳಿಗೆ ಸಾಕಷ್ಟು ಅನುಕೂಲಗಳನ್ನು ಒದಗಿಸಲಿದೆ.

ಮತ್ತೊಂದು ತಂಡದ ಸೇರ್ಪಡೆ
ಐಪಿಎಲ್‌ನಲ್ಲಿ ಮತ್ತೊಂದು ತಂಡ ಸೇರಿಕೊಳ್ಳುತ್ತಿದೆ. ಹೀಗಾಗಿ ಆಟಗಾರರು ಮತ್ತಷ್ಟು ಹಂಚಿಹೋಗಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಅಧಿಕಾರಿಗಳು ಈ ಸಲಹೆಯನ್ನು ನೀಡಿದ್ದಾರೆ. "ಈ ಬದಲಾವಣೆ ಆದರೆ ಐಪಿಎಲ್ ತಂಡಗಳ ಕ್ವಾಲಿಟಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈ ನಿರ್ಬಂಧದ ಕಾರಣದಿಂದ ಬೆಂಚ್ ಕಾಯುತ್ತಿರುವ ಕೆಲ ವಿದೇಶಿ ಆಟಗಾರರಿಗೆ ಅವಕಾಶ ದೊರೆಯಲಿದೆ. ಇದು ತಂಮಡದಲ್ಲಿ ಮತ್ತಷ್ಟು ಸಮತೊಲನ ತರಲು ಸಾದ್ಯವಾಗಲಿದೆ" ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇನ್ನಷ್ಟೇ ಚರ್ಚೆಯನ್ನು ನಡೆಸಿ ತಿರ್ಮಾನವನ್ನು ತೆಗೆದುಕೊಳ್ಳಬೇಕಿದೆ.

ಗುಣಮಟ್ಟದ ಬಗ್ಗೆ ಫ್ರಾಂಚೈಸಿಗಳ ಚಿಂತೆ
ಫ್ರಾಂಚೈಸಿಗಳು ಕೂಡ ಆಡುವ ಬಳಗದಲ್ಲಿ ನಾಲ್ಕು ವಿದೇಶಿ ಆಟಗಾರರ ನಿರ್ಬಂಧದಿಂದಾಗಿ ಗುಣಮಟ್ಟದ ಬಗ್ಗೆ ಚಿಂತೆಯನ್ನು ಹೊಂದಿದೆ. ಸ್ಕ್ವಾಡ್‌ನಲ್ಲಿ ಉತ್ತಮ ಆಟಗಾರರನ್ನು ಹೊಂದಿದ್ದರೂ ಆಡುವ ಬಳಗದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗದ ಬಗ್ಗೆ ಬೇಸರವನ್ನು ಹೊಂದಿದೆ. ಕೆಲ ಫ್ರಾಂಚೈಸಿಗಳಂತು ಗುಣಮಟ್ಟದ ಆಟಗಾರರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗದೆ ಸೋರಗಿತ್ತು. ಈ ಬದಲಾವಣೆಯನ್ನು ಫ್ರಾಂಚೈಸಿಗಳು ಸಂತಸದಿಂದ ಸ್ವಾಗತಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications