ಡೆಂಗ್ಯೂನಿಂದ ಬಳಲುತ್ತಿರುವ ಶುಭ್ಮನ್ ಗಿಲ್‌ರನ್ನು ವಿಶ್ವಕಪ್‌ನಿಂದ ಹೊರಗಿಟ್ಟರೆ ಏನಾಗಲಿದೆ?; ಐಸಿಸಿ ನಿಯಮವೇನು?
ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಭಾರತ ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಅಕ್ಟೋಬರ್ 11ರಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧ ಭಾರತದ ವಿಶ್ವಕಪ್ ಪಂದ್ಯದ ಭಾಗವಾಗಿ ದೆಹಲಿಗೆ ಪ್ರಯಾಣಿಸಿಲ್ಲ. ವರದಿಗಳ ಪ್ರಕಾರ, ಶುಭ್ಮನ್ ಗಿಲ್ ಅವರ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕೆಲವು ದಿನಗಳಿಂದ ಕಡಿಮೆಯಾಗಿದೆ. ಅದಕ್ಕಾಗಿಯೇ, ವಿಮಾನ ಹತ್ತುವುದನ್ನು ತಪ್ಪಿಸಲು ಅವರಿಗೆ ಸಲಹೆ ನೀಡಲಾಗಿದೆ.
ಡೆಂಗ್ಯೂ ಜ್ವರದಿಂದಾಗಿ ಶುಭ್ಮನ್ ಗಿಲ್ ಅವರು ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡರು ಮತ್ತು ಇದೀಗ ನೇರವಾಗಿ ಭಾರತದ ಮೂರನೇ ಪಂದ್ಯದ ಭಾಗವಾಗುವ ಸಾಧ್ಯತೆ ಇದೆ.

ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಆರಂಭಿಕ ಆಟಗಾರನನ್ನು ಭಾರತ ತಂಡದೊಂದಿಗೆ ಪ್ರಯಾಣಿಸುತ್ತಿರುವ ಬಿಸಿಸಿಐ ವೈದ್ಯ ಡಾ.ರಿಜ್ವಾನ್ ಖಾನ್ ಹಾಜರುಪಡಿಸುತ್ತಿದ್ದಾರೆ.
"ಟೀಮ್ ಇಂಡಿಯಾ ಬ್ಯಾಟರ್ ಶುಭ್ಮನ್ ಗಿಲ್ ಅವರು ಅಕ್ಟೋಬರ್ 9ರಂದು ಭಾರತ ತಂಡದೊಂದಿಗೆ ದೆಹಲಿಗೆ ಪ್ರಯಾಣಿಸುವುದಿಲ್ಲ. 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಂಡದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡ ಅವರು, ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ತಂಡದ ಮುಂದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಸದ್ಯ ಚೆನ್ನೈನಲ್ಲಿಯೇ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ," ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶುಭ್ಮನ್ ಗಿಲ್ ಅವರನ್ನು ಪಂದ್ಯಾವಳಿಯಿಂದ ಹೊರಗಿಡುವುದು ಕಷ್ಟ. ಏಕೆಂದರೆ, ಭಾರತದ ಆರಂಭಿಕ 2023ರಲ್ಲಿ ಏಕದಿನ ಸ್ವರೂಪದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಹೊಂದಿದ್ದಾರೆ. ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಇವರು ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಉಗಳಂಗೂ ಇಲ್ಲ, ನುಂಗಂಗೂ ಇಲ್ಲ ಅನ್ನುವಂತಾಗಿದೆ.

ಶುಭ್ಮನ್ ಗಿಲ್ ಅವರ ಅನಾರೋಗ್ಯವು ಎರಡು ಪಂದ್ಯಗಳಿಗೆ ಅವರನ್ನು ಹೊರಗಿಡುವ ಮೊದಲು ವಿಶ್ವಕಪ್ ಪಂದ್ಯಗಳಿಗಾಗಿ ಭಾರತದ ಆಡುವ 11ರ ಬಳಗದಲ್ಲಿ ಖಚಿತ ಆಯ್ಕೆಯಾಗಿದ್ದರು.
ಶುಭ್ಮನ್ ಗಿಲ್ ಅನುಪಸ್ಥಿತಿಯಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್ ಅವರು ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್ ಇನ್ನಿಂಗ್ಸ್ ತೆರೆದರು.
ಅನಾರೋಗ್ಯದ ಕಾರಣ ಶುಭ್ಮನ್ ಗಿಲ್ ಅವರನ್ನು ವಿಶ್ವಕಪ್ ಪಂದ್ಯಾವಳಿಯಿಂದ ಹೊರಹಾಕಿದರೆ ಏನಾಗಲಿದೆ? ಇಲ್ಲಿದೆ ಉತ್ತರ.
1. ಶುಭ್ಮನ್ ಗಿಲ್ ವಿಶ್ವಕಪ್‌ನಿಂದ ಹೊರಗುಳಿದರೆ, ಬೇರೊಬ್ಬ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡುವ ಅವಕಾಶವಿರುತ್ತದೆ. ಆದರೆ, ತಂಡಕ್ಕೆ ಬರುವ ಇನ್ನೊಬ್ಬ ಆಟಗಾರ ಅವನಂತೆ ಆಡಬಹುದೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
2. ಅನಾರೋಗ್ಯದ ಕಾರಣ ಶುಭ್ಮನ್ ಗಿಲ್ ಅವರನ್ನು ಒಮ್ಮೆ ಹೊರಹಾಕಿದರೆ, ಐಸಿಸಿ ನಿಯಮಗಳ ಪ್ರಕಾರ, ಈ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅವರು ಮರಳಿ ಬರಲು ಸಾಧ್ಯವಿಲ್ಲ.
3. ಶುಭ್ಮನ್ ಗಿಲ್ ಅವರ ಅನುಪಸ್ಥಿತಿ ಮತ್ತು ಇಶಾನ್ ಕಿಶನ್ ಮಿಂಚಲು ವಿಫಲವಾಗಿರುವುದು ಏಕದಿನ ವಿಶ್ವಕಪ್‌ನ ಮುಂದಿನ ಪಂದ್ಯಗಳಲ್ಲಿ ಭಾರತ ತಂಡದ ಮೇಲೆ ಪ್ರಭಾವ ಬೀರಲಿದೆ.
4. ಎಲ್ಲದೂ ಬಿಸಿಸಿಐನ ನಿರ್ಧಾರ ಮೇಲೆ ಅವಲಂಬಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications