ಜೂನ್ ಅಂತ್ಯಕ್ಕೆ ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿ ಮುಕ್ತಾಯಗೊಳ್ಳುವ ಕಾರಣ, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಪಾತ್ರಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿಗಳನ್ನು ಅಹ್ವಾನಿಸುತ್ತಿದೆ.
ಇದೇ ಹಲವು ಹೆಸರುಗಳು ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳೆಂದು ಊಹಿಸಲಾಗಿದೆ. ಆದರೂ ಇದುವರೆಗೆ ಯಾವುದೇ ಹೆಸರುಗಳು ಫೈನಲ್ ಆಗಿಲ್ಲ.

ಭಾರತದ ಲೆಜೆಂಡರಿ ವಿಕೆಟ್‌ಕೀಪರ್-ಬ್ಯಾಟರ್ ಎಂಎಸ್ ಧೋನಿ, 2021ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಸಮಯದಲ್ಲಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಹೀಗಾಗಿ ಮುಖ್ಯ ಕೋಚ್ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಅಂಶವಾಗಲಿದ್ದಾರೆ.
ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ರಾಹುಲ್ ದ್ರಾವಿಡ್ ಬದಲಿಗೆ ಮುಖ್ಯ ಕೋಚ್ ಸ್ಥಾನಕ್ಕೆ ಬಿಸಿಸಿಐನ ಮೊದಲ ಆಯ್ಕೆಯಾಗಿದೆ.
ಆದಾಗ್ಯೂ, ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ವಿಶ್ವದಾದ್ಯಂತ ಅನೇಕ ಟಿ20 ಫ್ರಾಂಚೈಸಿಗಳೊಂದಿಗೆ ತೊಡಗಿಸಿಕೊಂಡಿರುವ ಕಾರಣ, 2027ರವರೆಗೆ ಭಾರತ ತಂಡದ ಹುದ್ದೆಗೆ ಬದ್ಧರಾಗಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ.

ಜಸ್ಟಿನ್ ಲ್ಯಾಂಗರ್, ಗೌತಮ್ ಗಂಭೀರ್ ಮತ್ತು ಮಹೇಲಾ ಜಯವರ್ಧನೆ ಅವರಂತಹ ಇತರ ಅಭ್ಯರ್ಥಿಗಳೊಂದಿಗೆ ಬಿಸಿಸಿಐ ಚರ್ಚೆಗಳನ್ನು ನಡೆಸುತ್ತಿದೆಯಾದರೂ, ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗನನ್ನು ಮನವೊಲಿಸಲು ಬಿಸಿಸಿಐ ಉತ್ಸುಕವಾಗಿದೆ.
"ಸ್ಟೀಫನ್ ಫ್ಲೆಮಿಂಗ್ ಇಲ್ಲ ಎಂದು ಹೇಳಿಲ್ಲ. ಒಪ್ಪಂದದ ಅವಧಿಯ ಬಗ್ಗೆ ಅವರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಅಸಾಮಾನ್ಯವೇನಲ್ಲ. ರಾಹುಲ್ ದ್ರಾವಿಡ್ ಕೂಡ ಆರಂಭದಲ್ಲಿ ಉತ್ಸುಕರಾಗಿರಲಿಲ್ಲ, ಧೋನಿ ಮನವೊಲಿಸಿದ್ದರು. ಸ್ಟೀಫನ್ ಫ್ಲೆಮಿಂಗ್‌ನ ವಿಷಯದಲ್ಲೂ ಅದೇ ಸಂಭವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ ಮತ್ತು ಈ ಕೆಲಸವನ್ನು ಮಾಡಲು ಎಂಎಸ್ ಧೋನಿಗಿಂತ ಯಾರು ಉತ್ತಮ?," ಎಂದು ಬಿಸಿಸಿಐ ಮೂಲವೊಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದೆ.
ಸ್ಟೀಫನ್ ಫ್ಲೆಮಿಂಗ್ 2008ರಿಂದ ಐಪಿಎಲ್‌ನ ಭಾಗವಾಗಿದ್ದಾರೆ ಮತ್ತು ಟ್ರೋಫಿಗಳನ್ನು ಹೇಗೆ ಗೆಲ್ಲಬೇಕು ಎಂದು ತಿಳಿದಿದ್ದಾರೆ, ಅದು ಭಾರತ ತಂಡಕ್ಕೆ ಮೌಲ್ಯಯುತವಾಗಿದೆ.
"ಐಪಿಎಲ್ ಸಮಯದಲ್ಲಿ ಎಂಎಸ್ ಧೋನಿ ಅವರೊಂದಿಗೆ ಮಾತುಕತೆ ನಡೆಸುವುದು ಸರಿಯಾದ ಕೆಲಸವಲ್ಲ. ಸಿಎಸ್‌ಕೆ ಸೋತು ಹೊರಬಿದ್ದಿರುವುದು ಇದೀಗ ಅದು ಮಾತುಕತೆಗೆ ಹೊಡೆತ ಬಿದ್ದಿದೆ," ಎಂದು ಬಿಸಿಸಿಐ ಮೂಲವು ಹೇಳಿದೆ.
ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಐದು ಐಪಿಎಲ್ ಟ್ರೋಫಿಗಳಿಗೆ ಸಿಎಸ್‌ಕೆ ಫ್ರಾಂಚೈಸಿಯನ್ನು ಮುನ್ನಡೆಸಿದ ಮಾಜಿ ನಾಯಕ ಎಂಎಸ್ ಧೋನಿ, ಡಿಸೆಂಬರ್ 2027ರವರೆಗೆ ಭಾರತ ತಂಡ ಮುಖ್ಯ ಕೋಚ್ ಸ್ಥಾನವನ್ನು ವಹಿಸಿಕೊಳ್ಳಲು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗನನ್ನು ಮನವೊಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.
ರಾಂಚಿ ಮೂಲಕ ಎಂಎಸ್ ಧೋನಿ ಭಾರತ ತಂಡವನ್ನು ಮೂರು ಐಸಿಸಿ ಪ್ರಶಸ್ತಿಗಳಿಗೆ ಮುನ್ನಡೆಸಿದ ಅಪಾರ ಅನುಭವವನ್ನು ಹೊಂದಿದ್ದಾರ. ತಂಡದ ಭವಿಷ್ಯದ ಬೆಳವಣಿಗೆ ಮತ್ತು ಯಶಸ್ಸಿಗೆ ಪ್ರಯೋಜನವಾಗುವ ಅವಶ್ಯಕತೆ ಮತ್ತು ಭಾರತ ಕ್ರಿಕೆಟ್‌ನ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ.
ಭಾರತ ಕ್ರಿಕೆಟ್‌ನ ಪರಿವರ್ತನೆಯ ಹಂತವನ್ನು ಮುನ್ನಡೆಸುವ ಸವಾಲನ್ನು ತೆಗೆದುಕೊಳ್ಳಲು ಸ್ಟೀಫನ್ ಫ್ಲೆಮಿಂಗ್ ಅವರ ಮನವೊಲಿಸುವಲ್ಲಿ 42 ವರ್ಷದ ಎಂಎಸ್ ಧೋನಿ ಪ್ರಭಾವವು ಪ್ರಮುಖವಾಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರು ತಮ್ಮ ವೃತ್ತಿಜೀವನದ ಅಂತ್ಯವನ್ನು ಸಮೀಪಿಸುತ್ತಿರುವಾಗ, ಸುಗಮ ಪರಿವರ್ತನೆಯು ಭಾರತ ತಂಡದ ಭವಿಷ್ಯಕ್ಕೆ ನಿರ್ಣಾಯಕವಾಗಿದೆ.