BCCI Naman Awards: ರಾಹುಲ್ ದ್ರಾವಿಡ್ ಸೇರಿ ಮೂವರನ್ನು ಗೌರವಿಸಲಿದೆ ಬಿಸಿಸಿಐ: ಕರ್ನಾಟಕದ ಆಟಗಾರರಿಗೂ ಪ್ರಶಸ್ತಿ
ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಆಟಗಾರರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಭಾನುವಾರ ಗೌರವಿಸಲಿದೆ. ಈ ಪ್ರಶಸ್ತಿ ಸಮಾರಂಭ ಮಾರ್ಚ್ 15 ರಂದು ನವದೆಹಲಿಯಲ್ಲಿ ನಡೆಯಲಿದೆ. ಬಿಸಿಸಿಐ ಈ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ಸಕ್ರಿಯ ಆಟಗಾರರು, ನಿವೃತ್ತ ಹೊಂದಿದ ಆಟಗಾರರಿಗೆ ಬಿಸಿಸಿಐ ಗೌರವ ಸೂಚಿಸಲಿದೆ.
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಟಿ20 ವಿಶ್ವಕಪ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್ ಸಿ.ಕೆ. ನಾಯುಡು 'ಜೀವಮಾನ ಸಾಧನೆ ಪ್ರಶಸ್ತಿ' ನೀಡಲಾಗುವುದು. ಇದು ಬಿಸಿಸಿಐ ನೀಡುವ ಅತ್ಯುನ್ನತ ಗೌರವ ಇದಾಗಿದೆ. ಇವರೊಂದಿಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರಿಗೂ ಇದೇ ಗೌರವ ನೀಡಲು ನಿರ್ಧರಿಸಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಮಹಿಳಾ ವಿಭಾಗದಲ್ಲಿ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತೀಯ ಟೆಸ್ಟ್ ಮತ್ತು ಏಕದಿನ ನಾಯಕ ಶುಭ್‌ಮನ್ ಗಿಲ್‌ಗೆ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಗಿಲ್ ಸತತ ಎರಡನೇ ಬಾರಿಗೆ ಪಡೆಯುತ್ತಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧಾನಾ ಅವರು ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಕರ್ನಾಟಕದ ಆಟಗಾರರಿಗೂ ಪ್ರಶಸ್ತಿ
ಕರ್ನಾಟಕದ ಇಬ್ಬರು ಆಟಗಾರರಿಗೆ ಗೌರವ ಸಂದಿದೆ. ಅದರಲ್ಲಿ ಒಬ್ಬರಾದ ಮ್ಯಾಕ್‌ನೀಲ್ ಎಚ್.ಎನ್ ಸಿ.ಕೆ. ನಾಯುಡು ಟ್ರೋಫಿ ಅತಿ ಹೆಚ್ಚು ರನ್ ಬಾರಿಸಿದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದ ಜೆ ಸುಚಿತ್ ಸದ್ಯ ನಾಗಾಲ್ಯಾಂಡ್ ಪರ ರಣಜಿ ಆಡುತ್ತಿದ್ದು ಇವರಿಗೂ ಮಾಧವರಾವ್ ಸಿಂಧಿಯಾ ಪ್ರಶಸ್ತಿ ಸಂದಿದೆ.
ಬಿಸಿಸಿಐ ಪ್ರಶಸ್ತಿ ಪಡೆದ ಆಟಗಾರರು
- ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ: ರಾಹುಲ್ ದ್ರಾವಿಡ್ ಮತ್ತು ರೋಜರ್ ಬಿನ್ನಿ
- ಮಹಿಳಾ ಕ್ರಿಕೆಟ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ: ಮಿಥಾಲಿ ರಾಜ್
- ಪಾಲಿ ಉಮ್ರಿಗರ್ ಪ್ರಶಸ್ತಿ (ಅತ್ಯುತ್ತಮ ಅಂತಾರಾಷ್ಟ್ರೀಯ ಪುರುಷ ಕ್ರಿಕೆಟಿಗ 2024-25): ಶುಭ್‌ಮನ್ ಗಿಲ್
- ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗ (2024-25): ಸ್ಮೃತಿ ಮಂಧಾನ
- ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ (2024-25): ಸ್ಮೃತಿ ಮಂಧಾನ
- ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ (2024-25): ದೀಪ್ತಿ ಶರ್ಮಾ
- ಅತ್ಯುತ್ತಮ ಮಹಿಳಾ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ ಆಟಗಾರ್ತಿ: ಎನ್. ಶ್ರೀ ಚರಣಿ
- ಅತ್ಯುತ್ತಮ ಪುರುಷರ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ ಆಟಗಾರ: ಹರ್ಷಿತ್ ರಾಣಾ
ದೇಶೀಯ ಕ್ರಿಕೆಟ್ ಪ್ರಶಸ್ತಿಗಳು (2024-25)
- ಅತ್ಯುತ್ತಮ ಅಂಪೈರ್: ಉಲ್ಲಾಸ್ ಗಂಧೆ
- ಅತ್ಯುತ್ತಮ ಪ್ರದರ್ಶನ ನೀಡಿದ ಅಸೋಸಿಯೇಷನ್: ಮುಂಬೈ ಕ್ರಿಕೆಟ್ ಅಸೋಸಿಯೇಷನ್
- ಲಾಲಾ ಅಮರನಾಥ್ ಸೀಮಿತ ಓವರ್‌ಗಳಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ: ಆಯುಷ್ ಮ್ಹಾತ್ರೆ (ಮುಂಬೈ)
- ಲಾಲಾ ಅಮರನಾಥ್ ರಣಜಿಯ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ: ಹರ್ಷ್ ದುಬೆ (ವಿದರ್ಭ)
ಮಾಧವರಾವ್ ಸಿಂಧಿಯಾ ಪ್ರಶಸ್ತಿ (ರಣಜಿ ಟ್ರೋಫಿ 2024-25)
- ಅತಿ ಹೆಚ್ಚು ರನ್ (ಎಲೈಟ್ ಗ್ರೂಪ್): ಯಶ್ ರಾಥೋಡ್ (ವಿದರ್ಭ)
- ಅತಿ ಹೆಚ್ಚು ರನ್ (ಪ್ಲೇಟ್ ಗ್ರೂಪ್): ಸ್ನೇಹಲ್ ಕೌತಂಕರ್ (ಗೋವಾ)
- ಅತಿ ಹೆಚ್ಚು ವಿಕೆಟ್ (ಎಲೈಟ್ ಗ್ರೂಪ್): ಹರ್ಷ್ ದುಬೆ (ವಿದರ್ಭ)
- ಅತಿ ಹೆಚ್ಚು ವಿಕೆಟ್ (ಪ್ಲೇಟ್ ಗ್ರೂಪ್): ಸುಚಿತ್ ಜೆ (ನಾಗಾಲ್ಯಾಂಡ್)
ಜಗಮೋಹನ್ ದಾಲ್ಮಿಯಾ ಟ್ರೋಫಿ
- ಅತ್ಯುತ್ತಮ ಮಹಿಳಾ ಕ್ರಿಕೆಟ್ ಆಟಗಾರ್ತಿ (ಜೂನಿಯರ್): ಇರಾ ಜಾಧವ್ (ಮುಂಬೈ)
- ಅತ್ಯುತ್ತಮ ಮಹಿಳಾ ಕ್ರಿಕೆಟ್ ಆಟಗಾರ್ತಿ (ಸೀನಿಯರ್, ಏಕದಿನ): ಶಫಾಲಿ ವರ್ಮಾ (ಹರಿಯಾಣ)
- ವಿಜಯ್ ಮರ್ಚೆಂಟ್ ಟ್ರೋಫಿ (ಅಂ 16) ಅತಿ ಹೆಚ್ಚು ರನ್: ಶಾಂತನು ಸಿಂಗ್ (ಎಲೈಟ್), ಪ್ರೀತಮ್ ರಾಜ್ (ಪ್ಲೇಟ್).
- ವಿಜಯ್ ಮರ್ಚೆಂಟ್ ಟ್ರೋಫಿ (ಅಂ 16) ಅತಿ ಹೆಚ್ಚು ವಿಕೆಟ್: ಯಶ್‌ವರ್ಧನ್ ಸಿಂಗ್ ಚೌಹಾಣ್ (ಎಲೈಟ್), ಕಿಶನ್ ಸರ್ಕಾರ್ (ಪ್ಲೇಟ್)
ಎಂ.ಎ. ಚಿದಂಬರಂ ಟ್ರೋಫಿ
- ಕೂಚ್ ಬೆಹಾರ್ ಟ್ರೋಫಿ (ಅಂ 19) ಅತಿ ಹೆಚ್ಚು ರನ್: ನಿತ್ಯ ಜೆ ಪಾಂಡ್ಯ (ಎಲೈಟ್), ರಾಘವನ್ ರಾಮಮೂರ್ತಿ (ಪ್ಲೇಟ್)
- ಕೂಚ್ ಬೆಹಾರ್ ಟ್ರೋಫಿ (ಅಂ 19) ಅತಿ ಹೆಚ್ಚು ವಿಕೆಟ್: ಹೇಮಚೂಡೇಶನ್ ಜೆ (ಎಲೈಟ್), ಅರ್ಕಾಜಿತ್ ರಾಯ್ (ಪ್ಲೇಟ್)
- ಸಿ.ಕೆ. ನಾಯುಡು ಟ್ರೋಫಿ (ಅಂ 23) ಅತಿ ಹೆಚ್ಚು ರನ್: ಮ್ಯಾಕ್‌ನೀಲ್ ಎಚ್.ಎನ್ (ಕರ್ನಾಟಕ), ಆರ್. ಜಶ್ವಂತ್ ಶ್ರೀರಾಮ್ (ಪ್ಲೇಟ್)
- ಸಿ.ಕೆ. ನಾಯುಡು ಟ್ರೋಫಿ (ಅಂ 23) ಅತಿ ಹೆಚ್ಚು ವಿಕೆಟ್: ವಿಕ್ಕಿ ಓಸ್ಟ್ವಾಲ್ (ಎಲೈಟ್), ದೀಪ್‌ಜ್ಯೋತಿ ಸೈಕಿಯಾ (ಪ್ಲೇಟ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications