Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಮಹಿಳಾ ತಂಡದ ಆಯ್ಕೆ: ಮೇಘ್ನಾ ಸಿಂಗ್, ರೇಣುಕಾ ಠಾಕೂರ್‌ಗೆ ಸ್ಥಾನ

BCCI names India womens squads for Australia tour

ಭಾರತ ಮಹಿಳೆಯರ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ಇಂದು ತಂಡವನ್ನು ಘೋಷಿಸಲಾಗಿದೆ. ಒಂದು ಪಂದ್ಯದ ಟೆಸ್ಟ್ ಸರಣಿ ಹಾಗೂ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಈ ಪ್ರವಾಸಕ್ಕೆ ಘೋಷಿಸಿರುವ ತಂಡದಲ್ಲಿ ಟೀಮ್ ಇಂಡಿಯಾ ಮಹಿಳೆಯರ ತಂಡಕ್ಕೆ ಮೇಘ್ನಾ ಸಿಂಗ್ ಹಾಗೂ ರೇಣುಕಾ ಸಿಂಗ್ ಠಾಕೂರ್ ಚೊಚ್ಚಲ ಬಾರಿಗೆ ತಂಡದ ಕರೆಯನ್ನು ಸ್ವೀಕರಿಸಿದ್ದಾರೆ.

ಭಾರತ ಮಹಿಳೆಯರ ತಂಡ ಆಗಸ್ಟ್ 29 ರಂದು ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ಈ ಸರಣಿಯಲ್ಲಿ ಭಾರತ ತಂಡ ಮೂರು ಏಕದಿನ ಪಂದ್ಯ, ಒಂದು ಅಹರ್ನಿಶಿ ಟೆಸ್ಟ್ ಪಂದ್ಯ ಹಾಗೂ ಮೂರು ಟಿ20 ಪೊಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.

ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ಮಹಿಳಾ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪ-ನಾಯಕಿ), ಸ್ಮೃತಿ ಮಂಧನ, ಶಫಾಲಿ ವರ್ಮಾ, ಪುನಮ್ ರಾವುತ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಯಾಸ್ತಿಕಾ ಭಾಟಿಯಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಿಚಾ ಘೋಷ್, ಏಕ್ತಾ ಬಿಶ್ತ್.

ವಿರಾಟ್ ಅಂದ್ರೆ ಮಲಾನ್ ಗೆ ತುಂಬಾ ಇಷ್ಟ! | Oneindia Kannada

ಭಾರತ ಮಹಿಳಾ ಟಿ 20 ತಂಡ: ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಸ್ಮೃತಿ ಮಂಧನಾ (ಉಪನಾಯಕ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಯಾಸ್ತಿಕಾ ಭಾಟಿಯಾ, ಶಿಖಾ ಪಾಂಡೆ, ಮೇಘನಾ ಸಿಂಗ್, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್, ರಿಚಾ ಘೋಷ್ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ಅರುಂಧತಿ ರೆಡ್ಡಿ, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್

Story first published: Wednesday, August 25, 2021, 10:14 [IST]
Other articles published on Aug 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+