For Quick Alerts
ALLOW NOTIFICATIONS  
For Daily Alerts
 

BCCI Rules: ಕ್ರಿಕೆಟಿಗರ ಮೋಜಿಗೆ ಬಿಸಿಸಿಐ ಬ್ರೇಕ್; ಕಠಿಣ ರೂಲ್ಸ್ ಜಾರಿ

ಟೀಮ್ ಇಂಡಿಯಾ ಆಟಗಾರರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಸಿ ಮುಟ್ಟಿಸಲು ಮುಂದಾಗಿದೆ. ಟೀಮ್ ಇಂಡಿಯಾದಲ್ಲಿ ಶಿಸ್ತು ಪಾಲನೆ ಮಾಡುವ ಸಲುವಾಗಿ ಬಿಸಿಸಿಐ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಟೀಮ್ ಇಂಡಿಯಾ ಆಟಗಾರರು ಟೀಕೆಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಒಳಗಿನ ಸ್ಟಾರ್ ಗಿರಿ ಸಂಸ್ಕೃತಿಗೆ ಅಂತ್ಯ ಹಾಡಲು ಆಟಗಾರರಿಗೆ ಬಿಸಿಸಿಐ 10 ಹೊಸ ಕಠಿಣ ನಿಯಮಗಳನ್ನು ಮಾಡಿದೆ. ಇವುಗಳನ್ನು ಪಾಲಿಸದಿದ್ದರೆ ಆಟಗಾರರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತ ವಿಫಲವಾಗಿತ್ತು. ಈ ಎಲ್ಲವನ್ನೂ ಗಮನಿಸಿರುವ ಬಿಸಿಸಿಐ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅಂತಹ 10 ಹೊಸ ಕಠಿಣ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.

BCCI new 10 strict rules that Team India players must follow

ಹೊಸ 10 ಕಠಿಣ ನಿಯಮಗಳು

ವಿದೇಶಿ ಪ್ರವಾಸದ ವೇಳೆ ಆಟಗಾರರು ತಮ್ಮ ಕುಟುಂಬಸ್ಥರೊಂದಿಗೆ ಕೇವಲ 2 ವಾರಗಳ ಕಾಲ ಒಟ್ಟಿಗೆ ಇರುವುದು.

ಟೀಮ್ ಇಂಡಿಯಾ ಆಟಗಾರರು ಕಡ್ಡಾಯವಾಗಿ ದೇಶೀಯ ಕ್ರಿಕೆಟ್ ಆಡುವುದು.

ಸರಣಿಯ ಸಮಯದಲ್ಲಿ ಆಟಗಾರರು ವೈಯಕ್ತಿಕ ಜಾಹೀರಾತುಗಳನ್ನು ಶೂಟ್ ಮಾಡುವುದು ನಿಷೇಧ.

ಪ್ರವಾಸದ ಸಮಯದಲ್ಲಿ ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸುವಂತಿಲ್ಲ.

ಪ್ರವಾಸ ಅಥವಾ ಪಂದ್ಯ ಮುಗಿದ ಕೂಡಲೇ ಆಟಗಾರರು ಬೇಗನೆ ಮನೆಗೆ ಮರಳಲುವಂತಿಲ್ಲ. ಆಟಗಾರರು ತಂಡದೊಂದಿಗೆ ಹಿಂತಿರುಗುವಂತೆ ಸೂಚಿಸಲಾಗಿದೆ.

ಎರಡೂ ಪಂದ್ಯಗಳಲ್ಲಿ ಮತ್ತು ಅಭ್ಯಾಸ ಅವಧಿಗಳಲ್ಲಿ ಆಟಗಾರರು ತಂಡದೊಂದಿಗೆ ಬರುವುದು.

ಆಟಗಾರರು ವಿದೇಶಿ ಪ್ರವಾಸಗಳಲ್ಲಿ 150 ಕೆಜಿಗಿಂತ ಹೆಚ್ಚು ಲಗೇಜ್ ತೆಗೆದುಕೊಂಡರೆ, ಹೆಚ್ಚುವರಿ ಹಣವನ್ನು ಅವರೇ ಪಾವತಿಸುವುದು.

ವಿದೇಶಿ ಅಥವಾ ತವರಿನ ಸರಣಿಗಳಲ್ಲಿ ಆಟಗಾರರ ವೈಯಕ್ತಿಕ ಮ್ಯಾನೇಜರ್, ಅಡುಗೆಯವರು, ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಗೆ ನಿಷೇಧ.

ಯಾವುದೇ ರೀತಿಯ ಬಿಸಿಸಿಐ ಕಾರ್ಯಕ್ರಮಗಳಲ್ಲಿ ಆಟಗಾರರು ಕಡ್ಡಾಯವಾಗಿ ಪಾಲ್ಗೊಳ್ಳುವುದು.

ಉಪಕರಣಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಕಳುಹಿಸಲು ತಂಡದ ನಿರ್ವಹಣೆಯೊಂದಿಗೆ ಸಮನ್ವಯವನ್ನು ಮಾಡುವುದು.

ಬಿಸಿಸಿಐ ಶಿಕ್ಷೆ

ಈ ಎಲ್ಲಾ ನಿಯಮಗಳನ್ನು ಅನುಸರಿಸದಿದ್ದಲ್ಲಿ ಆಟಗಾರರ ಕೇಂದ್ರೀಯ ಒಪ್ಪಂದಗಳಿಂದ ರಿಟೈನರ್ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಆಡುವುದಕ್ಕೆ ನಿಷೇಧ ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಯಾವುದೇ ಆಟಗಾರನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಬಿಸಿಸಿಐ ಕಾಯ್ದಿರಿಸಿಕೊಂಡಿದೆ. ಇದರಲ್ಲಿ ಬಿಸಿಸಿಐ ಆಯೋಜಿಸುವ ಎಲ್ಲಾ ಟೂರ್ನಿಗಳಲ್ಲಿ ಭಾಗವಹಿಸದ ಆಟಗಾರನ ವಿರುದ್ಧ ನಿಷೇಧದ ಶಿಕ್ಷೆ ಕೂಡ ಒಳಗೊಂಡಿರುತ್ತದೆ. ಬಿಸಿಸಿಐ ಆಟಗಾರರ ಒಪ್ಪಂದದ ಅಡಿಯಲ್ಲಿ ಉಳಿಸಿಕೊಳ್ಳುವ ಆಟಗಾರರ ಹಣ ಅಥವಾ ಪಂದ್ಯ ಶುಲ್ಕವನ್ನು ಉಳಿಸಿಕೊಳ್ಳುವುದನ್ನು ಸಹ ಕಡಿತವಾಗಿ ಸೇರಿಸಲಾಗಿದೆ.

Story first published: Friday, January 17, 2025, 13:23 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+