For Quick Alerts
ALLOW NOTIFICATIONS  
For Daily Alerts
 

ಸಾವಿನ ಮನೆ ಮುಂದೆ ನಿಂತ ಬಿಸಿಸಿಐಗೆ ಲಾಭದ ಚಿಂತೆ

By Mahesh

ಸಿಡ್ನಿ, ನ.28: ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ಸಾವಿನ ಸೂತಕದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಅದರೆ, ಬಿಸಿಸಿಐ ಮಾತ್ರ ಸಾವು ನೋವಿನ ಭಾವನೆಗಳಿಲ್ಲದಂತೆ ವರ್ತಿಸಿದೆ. ಒಬ್ಬ ಆಟಗಾರ ಇಲ್ಲವೆಂದರೆ ಪಂದ್ಯ ರದ್ದು ಮಾಡುವುದು ಎಷ್ಟು ಸರಿ ಎಂದು ಬಿಸಿಸಿಐ ವಕ್ತಾರರೊಬ್ಬರು ಹೇಳಿದ್ದಾರಂತೆ.ಸಾವಿನ ಮನೆ ಮುಂದೆ ನಿಂತು ಲಾಭದ ಚಿಂತೆ ಮಾಡುತ್ತಿರುವ ಬಿಸಿಸಿಐಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

ಬಿಸಿಸಿಐ ವಕ್ತಾರರ ಹೇಳಿಕೆಯನ್ನು ಖಂಡಿಸಿ ಡೈಲಿ ಮೇಲ್ ವಿಸ್ತೃತ ವರದಿ ಮಾಡಿದೆ. ಪ್ರವಾಸಿ ಭಾರತ ವಿರುದ್ಧ ಆಸ್ಟ್ರೇಲಿಯಾ ಅಧ್ಯಕ್ಷೀಯ ನಡುವೆ ಶುಕ್ರವಾರದಿಂದ ನಡೆಯಬೇಕಿದ್ದ ಎರಡು ದಿನಗಳ ಅಭ್ಯಾಸ ಪಂದ್ಯ ರದ್ದಾಗಿದೆ.

ಆದರೆ, ಪಂದ್ಯ ರದ್ದು ಮಾಡಲು ಬಿಸಿಸಿಐ ಒಪ್ಪದೆ, ಒಬ್ಬ ಆಟಗಾರ ಇಲ್ಲದಿದ್ದರೆ ಉಳಿದವರು ಆಡಲು ಸಾಧ್ಯವಿಲ್ಲವೇ, ಪಂದ್ಯ ರದ್ದು ಮಾಡಲು ಹೇಗೆ ಸಾಧ್ಯ ಎಂದು ವಾದಿಸಿತ್ತು ಎಂಬ ವಿಷಯ ಹೊರಬಿದ್ದಿದೆ. [ಫಿಲ್ ಹ್ಯೂಸ್ ದುರಂತ ಸಾವು]

BCCI official made 'insensitive remark' about Hughes death over cancelling match: Report

ಗುರುವಾರ ಫಿಲ್ ಹ್ಯೂಸ್ ಅಕಾಲಿಕ ಮರಣದ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ‍XI ಆಟಗಾರರು ಭಾರತ ವಿರುದ್ಧ ಅಭ್ಯಾಸ ಪಂದ್ಯ ಆಡಲು ಸಾಧ್ಯವಿಲ್ಲ ಎಂದು ಘೋಷಿಸಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಡಿ.4ರಿಂದ ಆರಂಭಗೊಳ್ಳಲಿದೆ.

ಮೊದಲ ಟೆಸ್ಟ್ ಅನುಮಾನ: ಆಸ್ಟ್ರೇಲಿಯಾದ ಬಹುತೇಕ ಆಟಗಾರರು ಹ್ಯೂಸ್ ನಿಧನದಿಂದ ಕಂಗಾಲಾಗಿದ್ದಾರೆ. ಅನೇಕರಿಗೆ ಹ್ಯೂಸ್ ಆಪ್ತರಾಗಿದ್ದರು. ಸೂತಕದ ಛಾಯೆ ಇನ್ನೂ ಕಳೆದಿಲ್ಲ ಹೀಗಾಗಿ ಆಟಗಾರರು ಮಾನಸಿಕವಾಗಿ ಸಂಪೂರ್ಣವಾಗಿ ಸಿದ್ದ ಎನ್ನುವ ತನಕ ನಾವು ಅವರನ್ನು ಕಣಕ್ಕಿಳಿಯುವಂತೆ ಸೂಚಿಸುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಸಿಇಒ ಜೇಮ್ಸ್ ಸದರ್ಲ್ಯಾಂಡ್ ಹೇಳಿದ್ದಾರೆ. [ಕಂಬಿನಿ ಮಿಡಿದ ಕ್ರಿಕೆಟ್ ಲೋಕ]

ಆಸ್ಟ್ರೇಲಿಯಾದ ಟೆಸ್ಟ್ ತಂಡ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್, ಬ್ರಾಡ್ ಹಡ್ಡಿನ್, ಶೇನ್ ವಾಟ್ಸನ್ ಹಾಗೂ ನಾಥನ್ ಲಿಯಾನ್ ಅವರು ಹ್ಯೂಸ್ ದುರಂತಕ್ಕೆ ಸಾಕ್ಷಿಯಾಗಿ ಮೈದಾನದಲ್ಲಿ ಜೊತೆಗಿದ್ದರು. ಆಸ್ಪತ್ರೆಗೆ ತೆರಳಿ ಕಣ್ಣೀರಿಟ್ಟು ಪ್ರಾರ್ಥಿಸಿದ್ದರು. ಅಲ್ಲದೆ ನಾಯಕ ಮೈಕಲ್ ಕ್ಲಾರ್ಕ್ ಕೂಡಾ ಕಂಬನಿಗೆರೆದು ಹ್ಯೂಸ್ ಸಾವಿನ ದುಃಖದಲ್ಲಿ ಪಾಲ್ಗೊಂಡಿದ್ದರು.[ಕುತ್ತಿಗೆಯನ್ನೇ ಸೀಳಿದ್ದ ಮಾರಕ ಬೌನ್ಸರ್ ]

ಪರಿಸ್ಥಿತಿ ಹೀಗಿರುವಾಗ ಬಿಸಿಸಿಐ ಅಧಿಕಾರಿಗಳು ನೀಡಿದ್ದಾರೆ ಎನ್ನಲಾದ ಹೇಳಿಕೆ ಖಂಡನಾರ್ಹವಾಗಿದೆ. ಈ ನಡುವೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯ ಶನಿವಾರ ನಿಗದಿಯಂತೆ ನಡೆಯಲಿದ್ದು, ಆಟಗಾರರು ಸಂತಾಪ ಸೂಚಿಸಿ ನಂತರ ಆಡಲಿದ್ದಾರೆ. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]

ಟೀಂ ಇಂಡಿಯಾದ ಅಟಗಾರರು ಕೂಡಾ ಶುಕ್ರವಾರ ನೆಟ್ ಅಭ್ಯಾಸದಲ್ಲಿ ಮಾತ್ರ ತೊಡಗಿದ್ದು, ಮೈದಾನಕ್ಕೆ ಇಳಿಯಲು ಮನಸ್ಸು ಮಾಡಿಲ್ಲ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಒಂದು ದಿನ ಮುಂದೂಡಲ್ಪಟ್ಟಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಅಂಧರ ಕ್ರಿಕೆಟ್ ಪಂದ್ಯ ರದ್ದಾಗಿದೆ.

ಭಾರತ ತನ್ನ ಪ್ರವಾಸದ ಮೊದಲ ಟೆಸ್ಟ್ ಪಂದ್ಯ ಡಿ.4ರಂದು ಬ್ರಿಸ್ಬೇನ್ ನಲ್ಲಿ ಎರಡನೇ ಪಂದ್ಯ ಅಡಿಲೇಡ್ ಒವಲ್ ನಲ್ಲಿ ಡಿ.12ರಂದು ಆಡಲಿದ್ದು,ಮ್ ಬಾಕ್ಸಿಂಗ್ ಡೇ ದಿನ ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಕಾಲಿಡಲಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+