Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 13ನೇ ಆವೃತ್ತಿಗೆ ಡ್ರೀಮ್11 ಟೈಟಲ್ ಸ್ಪಾನ್ಸರರ್, ಅಧಿಕೃತ ಘೋಷಣೆ

BCCI officially announces Dream11 as title sponsor for IPL 13

ಮುಂಬೈ, ಆಗಸ್ಟ್ 19: ಇಂಡಿಯನ್ ಪ್ರೀಮಿಯರ್ ಲೀಗ್‌ 2020ನೇ ಆವೃತ್ತಿಗೆ ಡ್ರೀಮ್11 ಟೈಟಲ್ ಸ್ಪಾನ್ಸರರ್ ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಗುರುವಾರ (ಆಗಸ್ಟ್ 19) ಅಧಿಕೃತ ಘೋಷಣೆ ಮಾಡಿದೆ. ಈ ಮೂಲಕ ಐಪಿಎಲ್ 13ನೇ ಆವೃತ್ತಿಯ ಟೈಟಲ್ ಪ್ರಾಯೋಜಕತ್ವದ ಹಕ್ಕುಗಳು ಡ್ರೀಮ್11 ಪಾಲಾಗಿವೆ.

ಈ ಮೊದಲು ಚೀನಾ ಮೊಬೈಲ್ ಉತ್ಪಾದಕ ಕಂಪನಿ ವಿವೋ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಹಕ್ಕುಗಳನ್ನು ಹೊಂದಿತ್ತು. ಆದರೆ ಲಡಾಕ್ ಸಂಘರ್ಷದಲ್ಲಿ ಭಾರತೀಯ 20 ಯೋಧರು ಮೃತರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಒತ್ತಡ ಬಿದ್ದಿದ್ದರಿಂದ ವಿವೋ ಮತ್ತು ಬಿಸಿಸಿಐ ನಡುವಿನ ಒಪ್ಪಂದ ಮುರಿದು ಬಿದ್ದಿತ್ತು.

ಡ್ರೀಮ್11 ಮತ್ತು ಬಿಸಿಸಿಐ ನಡುವಿನ ಒಪ್ಪಂದ 2020ರ ಡಿಸೆಂಬರ್ 31ರ ವರೆಗೆ ಇರಲಿದೆ. ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ನಲ್ಲಿ ಡ್ರೀಮ್11 222 ಕೋ.ರೂ.ಗಳ ಬಿಡ್ ಗೆದ್ದು ಹಕ್ಕುಗಳನ್ನು ಪಡೆದುಕೊಂಡಿದೆ.

ಬಲ್ಲ ಮಾಹಿತಿಯ ಪ್ರಕಾರ ಡ್ರೀಮ್11 2021 ಮತ್ತು 2022ಕ್ಕೂ ಪ್ರಾಯೋಜಕತ್ವದ ಆಸಕ್ತಿ ಹೊಂದಿತ್ತಾದರೂ ಬಿಸಿಸಿಐ ಇದಕ್ಕೆ ಅನುಮತಿಸಿಲ್ಲ ಎಂದು ತಿಳಿದು ಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಐಪಿಎಲ್ ನಡೆಯಲಿದೆ.

Story first published: Thursday, August 20, 2020, 10:04 [IST]
Other articles published on Aug 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+