ಕ್ರಿಕೆಟ್‌ನಂತೆ ಬೇರೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ದಿಟ್ಟ ಕ್ರಮ
ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ ಗುರುವಾರ ಒಂದು ಘೋಷಣೆಯನ್ನು ಮಾಡಿದೆ. ಬಿಸಿಸಿಐ ಈ ನಿರ್ಧಾರಿಂದ ಕ್ರಿಕೆಟ್ ಆಟಗಾರರಂತೆ ಬೇರೆ ಕ್ರೀಡೆಗಳ ಕ್ರೀಡಾಪಟುಗಳ ಮುಖದಲ್ಲೂ ಮಂದಹಾಸ ಮೂಡಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಈ ಹೇಳಿಕೆ ಬೇರೆ ಕ್ರೀಡಾಟಪಟುಗಳಿಗೆ ಪ್ರೋತ್ಸಾಹ ನೀಡಲು ದಿಟ್ಟ ಕ್ರಮವನ್ನು ಬಿಸಿಸಿಐ ಕೈಗೊಂಡಿದೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇಷ್ಟು ದಿನ ಬರೀ ಕ್ರಿಕೆಟ್ ಆಟಗಾರರಿಗೆ ಮಾತ್ರ ಸೀಮಿತವಾಗಿ ಇರಿಸಲಾಗಿತ್ತು. ಈಗ ಇಲ್ಲಿ ಬೇರೆ ಕ್ರೀಡೆಗಳ ಕ್ರೀಡಾಪಟುಗಳಿಗೂ ಅಭ್ಯಾಸ ಮಾಡಲು ನೀಡಲಾಗುವುದು ಎಂದು ಬಿಸಿಸಿಐ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹತ್ವದ ಘೋಷಣೆ ಮಾಡಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮೂರು ಹೊಸ ಮೈದಾನಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, 100 ಪಿಚ್‌ಗಳು ಮತ್ತು 45 ಒಳಾಂಗಣ ಟರ್ಫ್‌ಗಳಿವೆ. ಆದಾಗ್ಯೂ, ಬಿಸಿಸಿಐನ ಈ ಹೆಜ್ಜೆಯ ನಂತರ, ಕ್ರಿಕೆಟಿಗರನ್ನು ಹೊರತುಪಡಿಸಿ, ಇತರ ಕ್ರೀಡಾಪಟುಗಳು ಸಹ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಲಾಭವನ್ನು ಪಡೆಯ ಬಹುದಾಗಿದೆ.
ಏನೆಲ್ಲಾ ಸೌಲಭ್ಯಗಳಿವೆ ಗೊತ್ತಾ?
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಡಾಮಿಯಲ್ಲಿ ಇದೆ. ಎನ್‌ಸಿಎನಲ್ಲಿ ಉತ್ತಮ ಸೌಲಭ್ಯ ಕಲ್ಪಿಸಿದೆ. ಈ ಅಂಗಳದಲ್ಲಿ ಕ್ರಿಕೆಟ್ ಆಟಗಾರರಿಗೆ ಸಕಲ ಸಿದ್ಧತೆ ನೀಡಲಾಗಿದೆ. ಹೀಗಾಗಿ ಇದರ ಗುಣಮಟ್ಟದ ಮೇಲೆ ಬಿಸಿಸಿಐ ನಿರಂತರವಾಗಿ ಶ್ರಮಿಸುತ್ತಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 100 ಪಿಚ್‌ಗಳು ಮತ್ತು 45 ಒಳಾಂಗಣ ಟರ್ಫ್‌ಗಳನ್ನು ಹೊಂದಿದೆ. ಅಲ್ಲದೆ, ಇತ್ತೀಚೆಗೆ 3 ಹೊಸ ಮೈದಾನಗಳನ್ನು ನಿರ್ಮಿಸಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದರ್ಶನ
ಇತ್ತೀಚಿಗೆ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 117 ಕ್ರೀಡಾ ಪಟುಗಳು ಭಾಗವಹಿಸಿದ್ದರು. ಈ ವೇಳೆ ಭಾರತದ ಅಥ್ಲೀಟ್‌ಗಳು ಒಂದು ಬೆಳ್ಳಿ, ಐದು ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದರು. ಇದೇ ವೇಳೆ ಕ್ರೀಡಾ ಪಟುಗಳಿಗೆ ತರಬೇತಿ ಮತ್ತು ಸೌಲಭ್ಯದ ಕೌರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು.
ಗುರುವಾರ ಬಿಸಿಸಿಐ ಎನ್‌ಸಿಎ ಬೇರೆ ಕ್ರೀಡಾಪಟುಗಳಿಗೆ ತೆರೆದಿರುತ್ತದೆ ಎಂದು ತಿಳಿಸುವ ಮೂಲಕ ಶ್ಲಾಘನೆಯ ಕೆಲಸ ಮಾಡಿದೆ. ಈ ಕ್ರಿಕೆಟ್ ಅಕಡಾಡಮಿಯಲ್ಲಿ ಸೌಲಭ್ಯಗಳನ್ನು ಬಳಸಿಕೊಂಡು ಕ್ರೀಡಾಪಟಗಳು, ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ದೊಡ್ಡ ಸಾಧನೆಯನ್ನು ಮಾಡಲಿ ಎಂಬುದೇ ಅಭಿಮಾನಿಗಳ ಆಶಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications