ಐಪಿಎಲ್ 2020 ಆಯೋಜಸಿದ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ಗೆ ಭರ್ಜರಿ ಮೊತ್ತ!

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಅವೃತ್ತಿ ಬಹಳ ತಡವಾಗಿ ಆಯೋಜನೆಯಾಯಿತು. ಭಾರತದಲ್ಲಿ ನಡೆಸುವುದು ಅಸಾಧ್ಯವಾದ ಕಾರಣ ಈ ಬಾರಿಯ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸುವುದು ಸೂಕ್ತ ಎಂಬ ನಿರ್ಧಾರವನ್ನು ತೆಗೆದುಕೊಂಡು ಯುಎಇನಲ್ಲಿ ಆಯೋಜಿಸಲಾಯಿತು. ಈ ಟೂರ್ನಿ ಭಾರೀ ಯಶಸ್ವಿಯೂ ಆಯಿತು.
ಯುಎಇನಲ್ಲಿ ಆಯೋಜನೆಯಾದ ಕಾರಣ ಅಲ್ಲಿನ ಕ್ರಿಕೆಟ್ ಮಂಡಳಿ ದೊಡ್ಡ ಮೊತ್ತದ ಲಾಭವನ್ನು ಪಡೆದುಕೊಂಡಿದೆ. ಭರ್ತಿ ಎರಡು ತಂಗಳು ನಡೆದ ಈ ಟೂರ್ನಿಯ ಆಯೋಜನೆಗಾಗಿ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಸುಮಾರು 14 ಮಿಲಿಯನ್ ಡಾಲರ್ ಅಂದರೆ ಸುಮಾರು 100 ಕೋಟಿ ರೂಪಾಯಿ ಜೇಬಿಗಿಳಿಸಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಜುಲೈ ತಿಂಗಳಲ್ಲಿ ಬಿಸಿಸಿಐ ಐಪಿಎಲ್ 2020 ಅವೃತ್ತಿಯನ್ನು ಯುಎಇನಲ್ಲಿ ಆಯೋಜಿಸುವುದುದಾಗಿ ಮೊದಲಿಗೆ ಅಧಿಕೃತವಾಗಿ ಘೋಷಣೆ ಮಾಡಿತು. ಆಗಸ್ಟ್ ಕೊನೆಯವಾರದಲ್ಲಿ ಯುಎಇಗೆ ಎಲ್ಲಾ ಫ್ರಾಂಚೈಸಿಗಳು ತಂಡದ ಆಟಗಾರರೊಂದಿಗೆ ಪ್ರಯಾಣ ಬೆಳೆಸಿದ್ದವು. ಹೀಗಾಗಿ ಆಯೋಜನಾ ಮೊತ್ತದ ಜೊತೆಗೆ ಕೆಲ ಇತರೆ ಮೊತ್ತಗಳನ್ನು ಯುಎಇ ಪಡೆದುಕೊಂಡಿದೆ.
ಯುಎಇ ಈ ಹಿಂದೆಯೂ ಐಪಿಎಲ್ ಟೂರ್ನಿಯನ್ನು ಆಯೋಜಿಸಿದ್ದ ಅನುಭವ ಹೊಂದಿತ್ತು. 2014ರಲ್ಲಿ ಲೋಕಸಭಾ ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಮೊದಲ ಸುತ್ತಿನ ಕೆಲ ಪಂದ್ಯಗಳು ಯುಎಇನಲ್ಲಿ ಅಯೋಜನೆಗೊಂಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ಭಾರತದಲ್ಲಿ ಆಯೋಜಿಸುವುದು ಅಸಾಧ್ಯ ಎನ್ನುತ್ತಿದ್ದಂತೆಯೇ ಯುಎಇ ಕ್ರಿಕೆಟ್ ಮಂಡಳಿ ತಮ್ಮಲ್ಲಿ ಆಯೋಜನೆ ಮಾಡಲು ಮನವಿ ಮಾಡಿಕೊಂಡಿತ್ತು. ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಕೂಡ ಇದಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ಅಂತಿಮವಾಗಿ ಬಿಸಿಸಿಐ ಯುಎಇಯನ್ನು ಆಯ್ಕೆ ಮಾಡಿಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications