For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿನ ವಿಶ್ವದ ದೊಡ್ಡ ಸ್ಟೇಡಿಯಂನಲ್ಲಿ ಏಷ್ಯಾ XI vs ವರ್ಲ್ಡ್ XI ಪಂದ್ಯ!

Asia XI Vs World XI a Possibility at Renovated Motera Stadium in March 2020 | Oneindia Kannada
BCCI plan Asia XI vs World XI match to inaugurate world’s largest cricket stadium

ನವದೆಹಲಿ, ಡಿಸೆಂಬರ್ 3: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾ XI vs ವರ್ಲ್ಡ್ XI ಉದ್ಘಾಟನಾ ಪಂದ್ಯ ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯೋಚಿಸಿದೆ. ಅಂದ್ಹಾಗೆ ವಿಶ್ವದ ಬೃಹತ್ ಸ್ಟೇಡಿಯಂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಿರ್ಮಾಣವಾಗುತ್ತಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಗುಜರಾತ್‌ನಲ್ಲಿ ರೂಪುಗೊಳ್ಳುತ್ತಿರುವ ಬೃಹತ್‌ ಸ್ಟೇಡಿಯಂನ ನಿರ್ಮಾಣ ಕಾರ್ಯ ಮುಂದಿನ ವರ್ಷದ ಆರಂಭದ ವೇಳೆಗೆ ಪೂರ್ಣಗೊಳ್ಳಲಿದೆ. ಹೀಗಾಗಿ ಮುಂದಿನ ಮಾರ್ಚ್‌ನಲ್ಲಿ ನಡೆಸಲುದ್ದೇಶಿಸಿರುವ ಏಷ್ಯಾ XI-ವರ್ಲ್ಡ್ XI ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಇದೇ ಸ್ಟೇಡಿಯಂನಲ್ಲಿ ನಡೆಸಲು ಬಿಸಿಸಿಐ ಯೋಚಿಸಿದೆ.

ಅಹ್ಮದಾಬಾದ್‌ನ ಈ ಸ್ಟೇಡಿಯಂನಲ್ಲಿ ಸುಮಾರು 1.10 ಲಕ್ಷ ಮಂದಿಗೆ ಆಸನ ವ್ಯವಸ್ಥೆಯಿರಲಿದೆ. ಏಷ್ಯಾ XI vs ವರ್ಲ್ಡ್ XI ಪ್ರದರ್ಶನವನ್ನು ಅಹ್ಮದಾಬಾದ್‌ನಲ್ಲಿ ನಡೆಸುವ ಬಿಸಿಸಿಐ ಕೋರಿಕೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

'ಇಲ್ಲಿ ಏಷ್ಯಾ XI vs ವಿಶ್ವ XI ಪಂದ್ಯ ನಡೆಯಲಿದೆ. ಆದರೆ ಇದಕ್ಕೆ ಐಸಿಸಿ ಅನುಮತಿ ದೊರೆಯಬೇಕಷ್ಟೆ,' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಸ್ಟೇಡಿಯಂ, ವಿಶ್ವದ ದೊಡ್ಡ ಸ್ಟೇಡಿಯಂ ಆಗಿ ಗುರುತಿಸಿಕೊಂಡಿದ್ದು, ಇಲ್ಲಿ 90,000 ಆಸನ ವ್ಯವಸ್ಥೆಯಿದೆ.

ಗುಜರಾತ್‌ನ ಮೊಟೆರಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಟೇಡಿಯಂ 1982ರಲ್ಲಿ ಉದ್ಘಾಟನೆಯಾದ ಬಳಿಕ ಒಟ್ಟು 12 ಟೆಸ್ಟ್ ಮತ್ತು 24 ಏಕದಿನ ಪಂದ್ಯಗಳು ನಡೆದಿದ್ದವು. ಆ ಬಳಿಕ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಹಳೆ ಸ್ಟೇಡಿಯಂ ಅನ್ನು ನವೀಕರಿಸಲು ಮುಂದಾಗಿತ್ತು. ನೂತನ ಸ್ಟೇಡಿಯಂ 63 ಎಕರೆ ವಿಸ್ತಾರದಲ್ಲಿ ನಿರ್ಮಾಣವಾಗುತ್ತಿದೆ.

Story first published: Tuesday, December 3, 2019, 17:52 [IST]
Other articles published on Dec 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+