ಬಿಸಿಸಿಐ ಹೊಸ ನಿರ್ಧಾರ: ಹೆಚ್ಚು ರೋಚಕವಾಗಲಿದೆ ಐಪಿಎಲ್ 2021
ಐಪಿಎಲ್ 2020 ಮುಕ್ತಾಯವಾಗಿದೆ. ಎಂಟು ತಂಡಗಳು, 53 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಕಾದಾಡಿದ ಬಳಿಕ, ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಎಂಟೂ ತಂಡಗಳು ಪ್ರತಿಭಾಶಾಲಿ ಆಟಗಾರರನ್ನು ಹೊಂದ್ದಿದ್ದು, ಐಪಿಎಲ್ ಅನ್ನು ವಿಶ್ವದ ಅತ್ಯುತ್ತಮ ಟಿ-20 ಟೂರ್ನಿಗಳಲ್ಲಿ ಒಂದನ್ನಾಗಿ ಮಾಡಿವೆ ಐಪಿಎಲ್‌ನ ಶಕ್ತಿಶಾಲಿ ತಂಡಗಳು.
ಈಗಾಗಲೇ ಭಾರಿ ಜಿದ್ದಾಜಿದ್ದಿನ ಐಪಿಎಲ್ ಟೂರ್ನಿಯನ್ನು ಇನ್ನಷ್ಟು ರೋಚಕಗೊಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈಗಿರುವ ಶಕ್ತಿಶಾಲಿ ಎಂಟು ತಂಡಗಳ ಜೊತೆಗೆ ಮತ್ತೊಂದು ತಂಡವನ್ನು ಸೇರಿಸುವ ಆಲೋಚನೆಯಲ್ಲಿದೆ ಬಿಸಿಸಿಐ.

ಹೆಚ್ಚು ರೋಚಕವಾಗಿರಲಿದೆ ಐಪಿಎಲ್ 2021
ಮುಂಬರುವ ಐಪಿಎಲ್ 2021 ಗೆ ಟೂರ್ನಿಗೆ ಒಂದು ತಂಡಗಳು ಐಪಿಎಲ್ ಟ್ರೋಫಿಗಾಗಿ ಬಡಿದಾಡುವ ದಟ್ಟ ಸಾಧ್ಯತೆ ಇದೆ. ಎಂಟು ತಂಡಗಳ ಟೂರ್ನಿ ಸಾಕಷ್ಟು ಜಿದ್ದಾ-ಜಿದ್ದಿನಿಂದ ಕೂಡಿರುತ್ತದೆ. ಒಂಬತ್ತು ತಂಡಗಳ ಟೂರ್ನಿಯಲ್ಲಿ ಇನ್ನೂ ಹೆಚ್ಚಿನ ಸ್ಪರ್ಧೆ ನಿರೀಕ್ಷಿಸಬಹುದಾಗಿದೆ.

ಏಪ್ರಿಲ್-ಮೇ ನಲ್ಲಿ ಐಪಿಎಲ್ 2021
ಐಪಿಎಲ್ 2021 ಏಪ್ರಿಲ್-ಮೇ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಹೇಳಿದ್ದಾರೆ. ಐಪಿಎಲ್ ಆಕ್ಷನ್ ಯಾವಾಗಲೂ ಡಿಸೆಂಬರ್ ನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಜನವರಿಯಲ್ಲಿ ನಡೆಯಲಿದೆ. ಈ ಬಾರಿಯ ಹರಾಜಿನಲ್ಲಿ ಹೊಸ ತಂಡವೊಂದು ಹಾಜರಾಗಲಿದೆ.

ಒಂಬತ್ತನೇ ತಂಡ ಯಾವ ರಾಜ್ಯದ್ದಾಗಿರುತ್ತದೆ?
ಆದರೆ ಆ ಒಂಬತ್ತನೇ ತಂಡ ಯಾವ ರಾಜ್ಯದ್ದಾಗಿರುತ್ತದೆ ಎಂಬುದು ಕುತೂಹಲ. ಈಗಾಗಲೇ ಕೊಚ್ಚಿ ಟಸ್ಕರ್ಸ್ ಕೇರಳ, ಗುಜರಾತ್ ಲಯನ್ಸ್, ಪುಣೆ ವಾರಿಯರ್ಸ್ ತಂಡಗಳು ಐಪಿಎಲ್‌ನಲ್ಲಿ ಆಡಿವೆ. ಈ ಮೂರು ತಂಡಗಳಲ್ಲಿ ಒಂದಕ್ಕೆ ಅವಕಾಶ ದೊರಕುವ ಸಾಧ್ಯತೆ ಇದೆ.

ತಂಡಗಳು ಆಡಿದ ವರ್ಷ
ಕೊಚ್ಚಿ ಟಸ್ಕರ್ಸ್ ತಂಡ 2011 ರ ಒಂದು ಐಪಿಎಲ್ ಸರಣಿಯಲ್ಲಿ ಮಾತ್ರವೇ ಆಡಿತು. ಪುಣೆ ವಾರಿಯರ್ಸ್ ತಂಡ 2011 ರಿಂದ 2013 , ರೈಸಿಂಗ್ ಪುಣೆ ಊಪರ್ ಜೈಂಟ್ ತಂಡವು 2016 ರಿಂದ 2018, ಗುಜರಾತ್ ಲಯನ್ಸ್ 2016 ರಿಂದ 2018 ರ ವರೆಗೆ ಆಡಿತ್ತು. ಡೆಕ್ಕನ್ ಚಾರ್ಜರ್ಸ್ ತಂಡವು ನಂತರ ಸನ್‌ರೈಸರ್ಸ್ ಹೈದರಾಬಾದ್ ಆಗಿ ಬದಲಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications