For Quick Alerts
ALLOW NOTIFICATIONS  
For Daily Alerts
 

ವಿರಾಟ್-ರೋಹಿತ್ ಇಲ್ಲದೆ ತಂಡ ಕಟ್ಟಲು ಬಿಸಿಸಿಐ ಪ್ಲ್ಯಾನ್‌? ಇವರಿಬ್ಬರೂ ಇಲ್ಲದೆ ಭಾರತ ಗೆದ್ದ ಪಂದ್ಯಗಳೆಷ್ಟು ಗೊತ್ತಾ

By ನಾಗೇಶ್

ಟೀಮ್ ಇಂಡಿಯಾ ಹಿರಿಯ ಆಟಗಾರರು ಇಲ್ಲದೇ ಆಡಲು ತಯಾರಿ ನಡೆಸಿದೆ. ಈ ಮೂಲಕ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ತಂಡ ಬಲಿಷ್ಠಗೊಳಿಸುವ ಯೋಜನೆ ರೂಪಿಸಿದೆ. ಇದಕ್ಕೆ ಸ್ಪಷ್ಟ ಉದಾಹರಣೆ, ಇತ್ತೀಚಿಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಸರಣಿಯಲ್ಲಿ ಅನುಭವಿಗಳಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಸ್ಟಾರ್‌ ಆಟಗಾರರ ಅನುಪಸ್ಥಿತಿಯಲ್ಲೂ ಬಲಿಷ್ಠ ತಂಡ ಕಟ್ಟುವ ಯೋಜನೆ ತಂಡದ ಮ್ಯಾನೇಜ್‌ಮೆಂಟ್‌ನದ್ದಾಗಿದೆ. ಟೀಂ ಇಂಡಿಯಾ ನಿಜವಾಗಿಯೂ ರೋಹಿತ್ ಮತ್ತು ವಿರಾಟ್ ಇಲ್ಲದೆ ಆಡಲು ಸಿದ್ಧವಾಗಿದೆಯೇ? ಎಂಬ ಪ್ರಶ್ನೆ ಕಾಡುತ್ತದೆ.

 BCCI Plans to Form Team Excluding Virat Kohli and Rohit Sharma

2006ರಲ್ಲಿ ಟಿ20 ಕ್ರಿಕೆಟ್‌ ಆರಂಭವಾದಾಗಿನಿಂದ ಟೀಮ್ ಇಂಡಿಯಾ, ಸ್ಥಿರ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ ಸೆಪ್ಟೆಂಬರ್ 2007 ರಲ್ಲಿ ಮತ್ತು ವಿರಾಟ್ 2010 ರಲ್ಲಿ ಟಿ20 ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಟೀಮ್ ಇಂಡಿಯಾ ಇದುವರೆಗೆ 202 ಟಿ20 ಪಂದ್ಯಗಳನ್ನು ಆಡಿದ್ದು, 167 ಪಂದ್ಯಗಳಲ್ಲಿ ರೋಹಿತ್ ಅಥವಾ ವಿರಾಟ್‌ ಇಬ್ಬರಲ್ಲಿ ಒಬ್ಬರು ಮೈದಾನಕ್ಕೆ ಇಳಿದಿದ್ದಾರೆ. ಇದರಲ್ಲಿ ಭಾರತ 109 ಪಂದ್ಯಗಳನ್ನು ಗೆದ್ದಿದ್ದು, ಗೆಲುವಿನ ಸರಾಸರಿ 65.27 ಪ್ರತಿಶತ ಇದೆ.

ಇಬ್ಬರೂ ಆಡಿದಾಗ ಹೆಚ್ಚು ಗೆಲುವು

ಈ ಇಬ್ಬರೂ ಆಟಗಾರರು ಒಟ್ಟು 96 ಬಾರಿ ಮೈದಾನಕ್ಕೆ ಇಳಿದಿದ್ದಾರೆ. ಸ್ಟಾರ್‌ ಆಟಗಾರರು ಒಟ್ಟಿಗೆ ಆಡಿದರೂ ಸಹ ಟೀಮ್ ಇಂಡಿಯಾ 65 ಪ್ರತಿಶತ ಪಂದ್ಯಗಳಲ್ಲಿ ಜಯ ಗಳಿಸಿದೆ. 2012ರಿಂದ ಟೀಮ್ ಇಂಡಿಯಾ ಈ ಇಬ್ಬರೂ ಆಟಗಾರರನ್ನು ಒಳಗೊಂಡ ತಂಡ ಕಟ್ಟಲು ಆದ್ಯತೆ ನೀಡಿತ್ತು. ಆದರೆ ಈಗ ಈ ಸನ್ನಿವೇಶ ಬದಲಾಗಿದೆ. ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವಕಾಶವನ್ನು ಬಳಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಆಡದೇ ಇದ್ದಾಗ ಗೆಲುವಿನ ಶೇಕಡಾವಾರು ಕುಸಿದಿದೆ. ಇಬ್ಬರೂ ಆಟಗಾರರು ಇಲ್ಲದೆ 31 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 18 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇಬ್ಬರೂ ತಂಡದಲ್ಲಿ ಇಲ್ಲದ ಸಂದರ್ಭದಲ್ಲಿ ಗೆಲುವಿನ ಸರಾಸರಿ 58 ಪ್ರತಿಶತ ಆಗಿದೆ.

2011ರಿಂದ 2018ರವರೆಗೆ ತಂಡ ಇಬ್ಬರೂ ಇಲ್ಲದೆ ಕೇವಲ 6 ಟಿ20 ಪಂದ್ಯಗಳನ್ನಾಡಿದೆ. ಅದರಲ್ಲಿ 5 ಪಂದ್ಯಗಳು ಜಿಂಬಾಬ್ವೆ ವಿರುದ್ಧ ಮತ್ತು ಒಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಾಗಿವೆ. ಇದರಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಸೋತಿದೆ. ಈ ಅಂಕಿ ಅಂಶಗಳನ್ನು ನೋಡಿದರೆ ಈ ಇಬ್ಬರೂ ಆಟಗಾರರ ಮೇಲೆ ಟೀಮ್ ಇಂಡಿಯಾ ಎಷ್ಟು ಅವಲಂಬಿತವಾಗಿದೆ ಎಂದು ತಿಳಿಯುತ್ತದೆ.

ಏಕದಿನ ಮಾದರಿಯಲ್ಲೂ ಇಬ್ಬರ ಮೇಲೆ ಅವಲಂಬನೆ

ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಅನುಪಸ್ಥಿತಿ, ಬರೀ ಚುಟುಕು ಕ್ರಿಕೆಟ್‌ ನಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ. ಬದಲಾಗಿ ಏಕದಿನ ಕ್ರಿಕೆಟ್‌ನಲ್ಲೂ ಕಾಣಿಸಿಕೊಂಡಿದೆ. ಈ ಸ್ಟಾರ್‌ ಆಟಗಾರರು ಪದಾರ್ಪಣೆ ಮಾಡಿದಾಗಿನಿಂದಲೂ ಭಾರತ ಈ ವರೆಗೆ 384 ಏಕದಿನ ಪಂದ್ಯಗಳನ್ನು ಆಡಿದೆ, ಇದರಲ್ಲಿ 324 ಪಂದ್ಯದಲ್ಲಿ ಇಬ್ಬರಲ್ಲಿ ಒಬ್ಬರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಭಾರತ 196 ಪಂದ್ಯಗಳಲ್ಲಿ ಭಾರತ ಗೆದ್ದಿದ್ದು ಗೆಲುವಿನ ಸರಾಸರಿ 60 ಪ್ರತಿಶತ ಆಗಿದೆ.

195 ಏಕದಿನ ಪಂದ್ಯಗಳಲ್ಲಿ, ರೋಹಿತ್ ಮತ್ತು ವಿರಾಟ್ ಇಬ್ಬರೂ ಒಟ್ಟಿಗೆ ಆಡಿದ್ದಾರೆ. ಅದರಲ್ಲಿ 120 ಪಂದ್ಯಗಳನ್ನು ಗೆದ್ದಿದ್ದು, 68 ಪಂದ್ಯಗಳಲ್ಲಿ ಸೋತಿದೆ. ಗೆಲುವಿನ ಶೇಕಡಾವಾರು ಸುಮಾರು 61 ಆಗಿದ್ದು, ಇಬ್ಬರ ಮೇಲಿನ ಅವಲಂಬನೆಯನ್ನು ತೋರಿಸಿದೆ.

ಇಬ್ಬರೂ ಇಲ್ಲದೇ ಟೀಮ್ ಇಂಡಿಯಾ ಇತ್ತೀಚಿನ ವರ್ಷಗಳಲ್ಲಿ (ಇಬ್ಬರೂ ಪದಾರ್ಪಣೆ ಮಾಡಿದ ಬಳಿಕ) ಕೇವಲ 60 ಏಕದಿನ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 39 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ಅಗ್ರ ತಂಡಗಳ ವಿರುದ್ಧ ರೋಹಿತ್ ಮತ್ತು ವಿರಾಟ್ ಇಲ್ಲದೆ 22 ಏಕದಿನ ಪಂದ್ಯಗಳನ್ನು ಆಡಿದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ‌.

ಒಂದೇ ಬಾರಿಗೆ ಈ ಇಬ್ಬರೂ ಆಟಗಾರರನ್ನು ಕಡೆಗಣಿಸಲು ಸಾಧ್ಯವಿಲ್ಲ, ಇಬ್ಬರ ಅನುಭವ ತಂಡಕ್ಕೆ ಮುಖ್ಯವಾಗಿದೆ. ಆದರೆ ಭಾರತ ಏಕದಿನ ವಿಶ್ವಕಪ್ ನಂತರ ಯುವಕರಿಗೆ ಹೆಚ್ಚಿನ ಅವಕಾಶ ನೀಡಲಿದ್ದು, ಇಬ್ಬರೂ ಆಟಗಾರರನ್ನು ಪ್ರಮುಖ ಸರಣಿಗಳಲ್ಲಿ ಆಡಲು ಮಾತ್ರ ಕೇಳುವ ಸಾಧ್ಯತೆ ಇದೆ.

Story first published: Friday, August 11, 2023, 13:51 [IST]
Other articles published on Aug 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+