Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖಜಾನೆ ತುಂಬಿಸಿಕೊಳ್ಳಲು ಬಿಸಿಸಿಐ ಮಾಸ್ಟರ್‌ ಪ್ಲ್ಯಾನ್‌: ಐಪಿಎಲ್‌ ಡಬಲ್‌ ಧಮಾಕಾ

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ನಡೆಯುತ್ತಿದೆ. ಇದರ ಜನಪ್ರೀಯತೆ ದಿನೇ ದಿನೇ ಹೆಚ್ಚುತ್ತಲೇ ಇದೆ. ವಿಶ್ವದ ಶ್ರೀಮಂತ ಲೀಗ್‌ ಎಂಬ ಹಣೆ ಪಟ್ಟಿಯನ್ನು ಹೊಂದಿರುವ ಐಪಿಎಲ್‌ನಲ್ಲಿ ದೊಡ್ಡ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಮುಂಬರುವ ದಿನಗಳಲ್ಲಿ ಐಪಿಎಲ್‌ ಪಂದ್ಯಗಳ ಸಂಖ್ಯೆ ಹೆಚ್ಚಾಗಲಿದ್ದು, ವಿಸ್ತರಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ, ಐಪಿಎಲ್ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಿ ಮೇ ವರೆಗೆ ನಡೆಯುತ್ತದೆ. ಐಪಿಎಲ್ ಅನ್ನು ಎರಡು ಹಂತಗಳಲ್ಲಿ ನಡೆಸಬಹುದು ಎಂಬ ವರದಿಗಳು ಹೊರಬರುತ್ತಿವೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಐಪಿಎಲ್‌ ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ನಡೆಸುವ ಸಾಧ್ಯತೆಯಿದೆ. ಆದಾಗ್ಯೂ, ಇದು ಇನ್ನೂ ಆರಂಭಿಕ ಹಂತವಾಗಿದೆ ಮತ್ತು ಅನುಷ್ಠಾನಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ.

BCCI

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿದೊಡ್ಡ ಲೀಗ್ ಆಗಿದೆ. ಐಸಿಸಿ ಸಹ ಈ ಲೀಗ್‌ಗೆ ಪ್ರಾಮುಖ್ಯತೆ ನೀಡಿದ್ದು, ಇದಕ್ಕಾಗಿ ಪ್ರತ್ಯೇಕ ವಿಂಡೋ ಸಹ ತೆರೆದಿಟ್ಟಿದೆ. ಈ ಸಮಯದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ವಿಶ್ವಾದ್ಯಂತ ಗಮನಾರ್ಹವಾಗಿ ಕಡಿಮೆ ಆಡಿಸಲಾಗುತ್ತದೆ. ಸದ್ಯ ಐಪಿಎಲ್‌ನಲ್ಲಿ 74 ಪಂದ್ಯಗಳು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ 94ಕ್ಕೆ ಏರುವ ಬಗ್ಗೆ ಮಾತುಕತೆ ನಡೆದಿದೆ.

ಐಪಿಎಲ್ ಅಧ್ಯಕ್ಷರು ಹೇಳಿದ್ದೇನು?

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲು ಹೆಚ್ಚಿರುತ್ತದೆ. ಇದು ಆಟಗಾರರಿಗೆ ಹಲವು ಸಮಸ್ಯೆಯನ್ನು ಎದುರು ಮಾಡುತ್ತದೆ. ಈ ಬಗ್ಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಕುಮಾರ್ ಧುಮಾಲ್, ಐಸಿಸಿಯ ಭವಿಷ್ಯದ ಪ್ರವಾಸ ಕಾರ್ಯಕ್ರಮ ಮತ್ತು ಪ್ರಸಾರಕರೊಂದಿಗೆ ಚರ್ಚೆಗಳು ಸರಿಯಾದ ದಿಕ್ಕಿನಲ್ಲಿ ಮುಂದುವರಿದರೆ, ಐಪಿಎಲ್ ಋತುವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು ಎಂದು ಹೇಳಿದ್ದಾರೆ. ಮೊದಲ ಹಂತವನ್ನು ಫೆಬ್ರವರಿ ಅಂತ್ಯದಿಂದ ಏಪ್ರಿಲ್ ವರೆಗೆ ನಡೆದರೆ, ಎರಡನೇ ಹಂತವನ್ನು ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ನಡೆಸಬಹುದು ಎಂದು ಸ್ಪೋರ್ಟ್ಸ್ ಸ್ಟಾರ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗಿನ ಅವಧಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಅವಧಿಯಲ್ಲಿ ಮಳೆ ತನ್ನ ಕಾರ್ಯವನ್ನು ಮುಗಿಸಿ ಚಳಿ ಆರಂಭವಾಗುತ್ತದೆ. ಈ ಸಮಯದಲ್ಲಿ ಭಾರತದಲ್ಲಿ ಹಬ್ಬಗಳು ಆರಂಭವಾಗುತ್ತವೆ. ಜಾಹೀರಾತುಗಳ ದೃಷ್ಟಿಯಿಂದಲೂ ಸಹ ಇದು ಪ್ರಾಮುಖ್ಯತೆ ಪಡೆದಿದೆ. ಇದು ಪ್ರಸಾರಕರು ಮತ್ತು ಐಪಿಎಲ್‌ಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿದು ಬಂದಿದೆ.

Story first published: Wednesday, May 27, 2026, 15:47 [IST]
Other articles published on May 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+