ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗಿರುವ ಬಿಸಿಸಿಐ 2025ರಲ್ಲಿ ದೊಡ್ಡ ಮೊತ್ತವನ್ನು ತನ್ನ ಬೊಕ್ಕಸಕ್ಕೆ ಸೇರಿಸಿಕೊಂಡಿದೆ. 2024-25ರ ಹಣಕಾಸು ವರ್ಷದಲ್ಲಿ ಬಿಸಿಸಿಐ 3,358 ಕೋಟಿ ರೂಪಾಯಿಗಳ ಬೃಹತ್ ಲಾಭವನ್ನು ಮಾಡಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಬಿಸಿಸಿಐ ಹಣಗಳಿಕೆಯ ಭಾರೀ ಏರಿಕೆ ಕಂಡು ಬಂದಿದೆ.
ಬಿಸಿಸಿಐಗೆ ಆರಂಭದಲ್ಲಿ ಪೆಟ್ಟು ಬಿದ್ದರೂ ಸಹ ಪ್ರಸಕ್ತ ವರ್ಷ, ಎಲ್ಲ ಸವಾಲುಗಳನ್ನು ಸಹ ಮೆಟ್ಟಿನಿಲ್ಲುವಲ್ಲಿ ಸಫಲವಾಗಿದೆ. ಕೇಂದ್ರ ಸರ್ಕಾರ ಹೇರಿದ್ದ ಆನ್‌ಲೈನ್ ಗೇಮಿಂಗ್ ನಿಷೇಧದಿಂದ ಡ್ರಿಮ್ ಇಲೆವೆನ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು. ಆದರೂ ಸಹ ಬಿಸಿಸಿಐ ಹೊಸ ಪ್ರಾಯೋಜಕತ್ವವನ್ನು ಪಡೆದು ಲಾಭ ಗಳಿಕೆಯಲ್ಲಿ ಭಾರೀ ಲಾಭ ಗಳಿಸಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ಆಪ್‌ಗಳ ಮೇಲೆ ನಿಷೇಧ ಹೇರಿದ್ದರಿಂದ ಬಿಸಿಸಿಐ ಹಿನ್ನಡೆ ಅನುಭವಿಸಿತು. ಇದೇ ವೇಳೆ ಡ್ರೀಮ್ ಇಲೆವೆನ್ 358 ಕೋಟಿ ರೂ. ಪ್ರಾಯೋಜಕತ್ವ ಒಪ್ಪಂದದಿಂದ ಹಿಂದೆ ಸರಿಯಿತು. ಆದರೂ ಸಹ ಬಿಸಿಸಿಐ ಈ ಸವಾಲುನ್ನು ಮೆಟ್ಟಿನಿಲ್ಲುವಲ್ಲಿ ಸಫಲವಾಯಿತು. ಮಹತ್ವದ ಟೂರ್ನಿಯಲ್ಲಿ ಟೀಮ್ ಇಂಡಿಯಾ ಯಾವುದೇ ಪ್ರಾಯೋಜಕರು ಇಲ್ಲದೆ ಕಣಕ್ಕೆ ಇಳಿದರೂ ಸಹ ಬಳಿಕ ಜೆರ್ಸಿ ಪ್ರಾಯೋಜಕರನ್ನಾಗಿ ಆಡಿಡಾಸ್ ಹಾಗೂ ಪ್ರಾಯೋಜಕರನ್ನಾಗಿ ಅಪೋಲೋ ಟೈಯರ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿತು. ಈ ಮೂಲಕ ತನಗೆ ಆದ ನಷ್ಟವನ್ನು ಸರಿದೂಗಿಸಿಕೊಂಡಿತು.
ಬಿಸಿಸಸಿಐ ಈ ಹಣಕಾಸು ವರ್ಷದಲ್ಲಿ 3358 ಕೋಟಿ ರೂಪಾಯಿಗಳ ಬೃಹತ್ ಲಾಭವನ್ನು ಕಂಡಿದೆ. ಈ ಮೂಲಕ ಬಿಸಿಸಿಐ ನಿಧಿಯು 11346 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಇನ್ನು ಈ ಅಂಕಿ ಅಂಶಮುಂದಿನ ವರ್ಷದಲ್ಲಿ 6728 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇದೆ.