IPL 2025 Mega Auction: ಯಾವಾಗ, ಎಲ್ಲಿ ನಡೆಯಲಿದೆ ಹರಾಜು? ಶೀಘ್ರದಲ್ಲಿ ಹೊರ ಬೀಳಲಿದೆ ರಿಟೇನ್ ಆಟಗಾರ ಬಗ್ಗೆ ಮಾಹಿತಿ
ಐಪಿಎಲ್ 2025ರ ಬಗ್ಗೆ ಈಗಿನಿಂದಲೇ ಅಭಿಮಾನಿಗಳ ಚಿತ್ತ ನೆಟ್ಟಿದ್ದಾರೆ. ಇದಕ್ಕೆ ಕಾರಣ ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿಗೆ ಎಲ್ಲ ತಂಡಗಳು ರೂಪು ರೇಷೆಗಳನ್ನು ಸಿದ್ಧ ಪಡಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಬಿಸಿಸಿಐ ಸಹ ಈ ಕುರಿತಾದ ಕೆಲಸಗಳನ್ನು ಶುರು ಮಾಡಿದೆ.
ಈ ಬಾರಿಯ ಮೆಗಾ ಹರಾಜು ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ಶೀಘ್ರದಲ್ಲಿ ಮಹತ್ವದ ಅಪ್‌ಡೇಟ್ ನೀಡುವ ಸಾಧ್ಯತೆ ಇದೆ. ಇನ್ನು ಮೆಗಾ ಹರಾಜಿಗೂ ಮುನ್ನವೇ ಹಲವು ವಿಷಯಗಳು ಇನ್ನು ಫೈನಲ್ ಆಗಬೇಕಿದೆ. ಈ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್ ಕಾರ್ಯಕಾರಿಣಿ ಸಭೆ ನಡೆಸಿದ ಬಳಿಕ, ಮಾಲೀಕರಿಗೆ ಮಹತ್ವದ ನಿರ್ಧಾರವನ್ನು ತಿಳಿಸಲಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಎಷ್ಟು ಜನ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದು ಎಂಬ ಪಟ್ಟಿಯನ್ನು BCCI ನೀಡುವ ಸಾಧ್ಯತೆ ಇದೆ. ಇನ್ನು ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಸಹ ಮಾಲೀಕರು ಐಪಿಎಲ್ ಮ್ಯಾನೇಜ್ಮೆಂಟ್‌ಗೆ ನೀಡಬೇಕಾಗುತ್ತದೆ. ಇದಕ್ಕೂ ಮುನ್ನ ಬಿಸಿಸಿಐ ಹೊಸ ರಿಟೆನ್ಷನ್ ನಿಯಮಗಳನ್ನು ಹೊರಡಿಸಲಿದೆ.
ಮೆಗಾ ಹರಾಜಿಗೆ ಸಿದ್ಧತೆ
ಐಎಎನ್‌ಎಸ್‌ನ ಪ್ರಕಾರ, ಬಿಸಿಸಿಐ ಮೆಗಾ ಹರಾಜಿಗೆ ತಯಾರಿಯನ್ನು ಭರದಿಂದ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಹರಾಜು ಪ್ರಕ್ರಿಯೆ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಹೊಸ ಅಪ್‌ಡೇಟ್ ಹೊರ ಬೀಳುವ ಸಾಧ್ಯತೆ ಇದೆ. ಕಳೆದ 10 ವರ್ಷಗಳಲ್ಲಿ ಐಪಿಎಲ್‌ನಲ್ಲಿ ಇದುವರೆಗೆ ಕೇವಲ ಎರಡು ಮೆಗಾ ಹರಾಜುಗಳು ನಡೆದಿವೆ. ಆದರೆ ಈಗ ಮತ್ತೊಮ್ಮೆ ಸಿದ್ಧತೆಗಳು ನಡೆಯುತ್ತಿವೆ.

ಹರಾಜು ಎಲ್ಲಿ ಆಯೋಜನೆ?
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಐಪಿಎಲ್ 2024 ರ ಹರಾಜು ದುಬೈನಲ್ಲಿ ನಡೆದಿತ್ತು. ಈ ಬಾರಿ ಮತ್ತೆ ಹರಾಜು ಪ್ರಕ್ರಿಯೆ ಈ ದೇಶದಲ್ಲಿ ನಡೆಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಕೋಲ್ಕತ್ತಾ, ಬೆಂಗಳೂರು ಅಥವಾ ದೆಹಲಿಯಲ್ಲಿ ಮೆಗಾ ಹರಾಜು ಆಯೋಜಿಸಬಹುದಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಬಗ್ಗೆ ಬಿಗ್ ಅಪ್‌ಡೇಟ್ ಹೊರ ಬೀಳಲಿದೆ. ಯಾವ ತಂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಕ್ಲೀಯರ್ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ. ಅನೇಕ ಖ್ಯಾತ ನಾಮರ ತಂಡಗಳು, ದೊಡ್ಡ ತಂಡಗಳ ಚಹರೆ ಬದಲಾಗುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಬಗ್ಗೆ ಹರಾಜಿಗೂ ಮುನ್ನವೇ ವದಂತಿಗಳು ಹಬ್ಬಿವೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟ ಕಟ್ಟಿತ್ತು. ಮುಂಬೈ ಮ್ಯಾನೇಜ್ಮೆಂಟ್ ನಿರ್ಧಾರದಿಂದ ರೋಹಿತ್ ಫ್ಯಾನ್ಸ್ ಫುಲ್ ಗರಂ ಆಗಿದ್ದರು. ಈಗ ರೋಹಿತ್ ಮುಂಬೈನಲ್ಲೇ ಇರುತ್ತಾರೋ ಅಥವಾ ಬೇರೆ ತಂಡ ಸೇರುತ್ತಾರೋ ಎಂಬ ದೊಡ್ಡ ಪ್ರಶ್ನೆ ಉದ್ಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications