Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಅಧ್ಯಕ್ಷ ದಾಲ್ಮಿಯಾ ಹೃದಯಕ್ಕೆ ಶಸ್ತ್ರಚಿಕಿತ್ಸೆ

ಕೊಲ್ಕತ್ತಾ, ಸೆ.18: ಬಿಸಿಸಿಐ ಅಧ್ಯಕ್ಷ, ಉದ್ಯಮಿ ಜಗಮೋಹನ್ ದಾಲ್ಮಿಯಾ ಅವರು ಶುಕ್ರವಾರ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ತೀವ್ರ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದ ದಾಲ್ಮಿಯಾರನ್ನು ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

75 ವರ್ಷ ವಯಸ್ಸಿನ ದಾಲ್ಮಿಯ ಅವರು ಕಳೆದ ಕೆಲವು ತಿಂಗಳಿಂದಲು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿತ್ತು, ಈ ಹಿನ್ನೆಲೆಯಲ್ಲಿ ಬಿಎಂ ಬಿರ್ಲಾ ಹೃದಯ ಸಂಸೋಧನಾ ಕೇಂದ್ರಕ್ಕೆ ದಾಖಲಿಸಲಾಯಿತು. ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

Jagmohan Dalmiya Undergoes Heart Surgery

ದಾಲ್ಮಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರ ಮಗ ಅಭಿಷೇಕ್ ಮತ್ತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆಗಿದ್ದರು. ಉತ್ತಮ ಆಡಳಿತಾಧಿಕಾರಿ ಎನಿಸಿಕೊಂಡಿರುವ ದಾಲ್ಮಿಯಾ ಅವರು ಇತ್ತೀಚೆಗೆ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಪಟ್ಟ ವಹಿಸಿಕೊಂಡಿದ್ದರು.

10 ವರ್ಷಗಳ ನಂತರ ಕ್ರಿಕೆಟ್ ಆಡಳಿತಕ್ಕೆ ಮರಳಿದ ದಾಲ್ಮಿಯಾ ಅವರು ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಅವರನ್ನು ಆಡಳಿತ ಹಾಗೂ ತಂಡದೊಡನೆ ಬೆಸುಗೆಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+