For Quick Alerts
ALLOW NOTIFICATIONS  
For Daily Alerts
 

ಮೊದಲ ದಿನವೇ ನಾವು ಪಂದ್ಯವನ್ನು ಕಳೆದುಕೊಂಡೆವು: WTC ಸೋಲಿನ ಬಗ್ಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮಾತು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 210 ರನ್‌ಗಳ ಅಂತರದಿಂದ ಭಾರೀ ಸೋಲು ಅನುಭವಿಸಿದೆ. ನಿರ್ಣಾಯಕ ಪಂದ್ಯದಲ್ಲಿ 444 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 234 ರನ್‌ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು. ಈ ಸೋಲಿನ ಬಗ್ಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತ ಈ ಪಂದ್ಯವನ್ನು ಮೊದಲ ದಿನದಾಟದಲ್ಲಿಯೇ ಕಳೆದುಕೊಂಡಿತ್ತು ಎಂದು ಹೇಳಿಕೆ ನೀಡಿದ್ದಾರೆ.

ರೋಜರ್ ಬಿನ್ನಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ಅವರ ಅಮೋಘ ಜೊತೆಯಾಟವನ್ನು ಉಲ್ಲೇಕಿಸಿದ್ದು ಆ ಪ್ರದರ್ಶನವೇ ಎರಡು ತಂಡಗಳ ನಡುವೆ ದೊಡ್ಡ ವ್ಯತ್ಯಾಸಕ್ಕೆ ಕಾರಣವಾಯಿತು ಎಂದಿದ್ದಾರೆ. "ನಾವು ಮೊದಲ ದಿನವೇ ಪಂದ್ಯವನ್ನು ಕಳೆದುಕೊಂಡೆವು. ಆ ಬೃಹತ್ ಜೊತೆಯಾಟದಿಂದ ಆಸ್ಟ್ರೇಲಿಯಾ ಪಂದ್ಯದಲ್ಲಿ ಗೆಲುವಿಗೆ ಹತ್ತಿರವಾಗಿತ್ತು. ಆ ಒಂದು ಜೊತೆಯಾಟವನ್ನು ಹೊರತುಪಡಿಸಿದರೆ ಪಂದ್ಯ ಬಹಳ ಪೈಪೋಟಿಯಿಂದ ಇರುತ್ತಿತ್ತು" ಎಂದಿದ್ದಾರೆ ರೋಜರ್ ಬಿನ್ನಿ.

BCCI president Roger Binny Reaction: said Lost WTC Final on first day itself

"ಐದನೇ ದಿನದಲ್ಲಿ ಫಲಿತಾಂಶ ಬಂದಿದ್ದರೂ ನಾವು ಪಂದ್ಯವನ್ನು ಆರಂಭದಲ್ಲಿಯೇ ಕಳೆದುಕೊಂಡೆವು ಆದರೆ ನಾವು ಮೊದಲ ದಿನದಲ್ಲಿಯೇ ಪಂದ್ಯವನ್ನು ಸೋತಿದ್ದೇವೆ. ಆಸ್ಟ್ರೇಲಿಯಾದ 200 ರನ್‌ಗಳ ಜೊತೆಯಾಟ ಪಂದ್ಯವನ್ನು ಆಗಲೇ ಬದಲಾಯಿಸಿ ಬಿಟ್ಟಿತು. ಆ ಜೊತೆಯಾಟವನ್ನು ಹೊರತುಪಡಿಸಿದರೆ ಪಂದ್ಯ ಸಮಬಲದ ಹೋರಾಟವಾಗಿರುತ್ತಿತ್ತು" ಎಂದಿದ್ದಾರೆ ರೋಜರ್ ಬಿನ್ನಿ.

ಇನ್ನು ಇದೇ ಸಂದರ್ಔದಲ್ಲಿ ಅವರು ಏಕದಿನ ವಿಶ್ವಕಪ್‌ನ ಮೇಲೆ ಭರವಸೆಯಿಟ್ಟಿರುವುದಾಗಿ ಹೇಳಿದ್ದು ಅಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. "ಭವಿಷ್ಯದಲ್ಲಿ ಮತ್ತಷ್ಟು ದೊಡ್ಡ ಸವಾಲಿದೆ. ಆದ್ದರಿಂದ ನಾವು ನಮ್ಮ ಉತ್ಸಾಹವನ್ನು ಕಾಯ್ದಿಟ್ಟುಕೊಳ್ಳಬೇಕು. ವಿಶ್ವಕಪ್ ಟೂರ್ನಿ ತವರಿನಲ್ಲಿಯೇ ನಡೆಯಲಿದ್ದು ಅಲ್ಲಿ ನಾವು ಉತ್ತಮವಾಗಿ ಪ್ರದ್ಶನ ನೀಡುವ ವಿಶ್ವಾಸವಿದೆ" ಎಂದಿದ್ದಾರೆ ರೋಜರ್ ಬಿನ್ನಿ.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್

Story first published: Monday, June 12, 2023, 9:04 [IST]
Other articles published on Jun 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+