ಕೊರೊನಾವೈರಸ್: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾವೈರಸ್ ಪಾಸಿಟಿವ್ ಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಅವರು ಮುಂದಿನ ಎರಡು ವಾರಗಳ ಕಾಲ ಮನೆಯಲ್ಲಿಯೇ ಐಸೋಲೇಶನ್‌ಗೆ ಒಳಗಾಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೈದ್ಯಾಧಿಕಾರಗಳು ನಿಡಿರುವ ಮಾಹಿತಿಯ ಪ್ರಕಾರ ಸೌರವ್ ಗಂಗೂಲಿ ತಮ್ಮ ನಿವಾಸದಲ್ಲಿ ವೈದ್ಯರ ನಿಗಾದಲ್ಲಿದ್ದು ಐಸೋಲೇಶನ್‌ಗೆ ಒಳಗಾಗಲಿದ್ದಾರೆ ಎಂದು ತಳಿಸಿದ್ದಾರೆ.
"ನಾವು ಸೌರವ್ ಗಂಗೂಲಿಯವರನ್ನು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದೇವೆ. ಅವರು ಮುಂದಿನ ಎರಡು ವಾರಗಳ ಕಾಲ ವೈದ್ಯರ ನಿಗಾದೊಂದಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲಿದ್ದಾರೆ. ಅದಾದ ಬಳಿಕ ಅವರ ಮುಂದಿನ ಚಿಕಿತ್ಸೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸೌರವ್ ಗಂಗೂಲಿಯಲ್ಲಿ ಪತ್ತೆಯಾಗಿರುವುದು ಕೋವಿಡ್‌ನ ಹೊಸ ರೂಪಾಂತರಿಯಾದ ಒಮೈಕ್ರಾನ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಸೋಮವಾರ ಕೊರೊನಾವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದರು. ನಂರ ಅವರ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಗಂಗೂಲಿ ಕೊಲ್ಕತ್ತಾದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.
ದೇಶಾದ್ಯಂತ ಕೊರೊನಾವೈರಸ್ ನಿಯಂತ್ರಣಕ್ಕೆ ಬಂದಿದ್ದರೂ ಮೂರನೇ ಅಲೆಯ ಭೀತಿ ಹೆಚ್ಚಾಗಿದೆ. ಅದರಲ್ಲೂ ಒಮೈಕ್ರಾನ್ ರೂಪಾಂತರಿಯ ಆತಂಕ ಈಗ ವಿಶ್ವದೆಲ್ಲೆಡೆಯಿದ್ದು ಭಾರತಲ್ಲಿಯೂ ಒಮಿಕ್ರಾನ್ ರೂಪಾಂತರಿ ವೈರಸ್ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಅತಂಕವಿದೆ. ಇದೇ ಸಂದರ್ಭದಲ್ಲಿ ದೇಶದ ಕೆಲ ಭಾಗಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಪತ್ತೆಯಾದ ಕೊರೊನಾವೈರಸ್‌ನ ಹೊಸ ರೂಪಾಂತರಿ ಒಮೈಕ್ರಾನ್ ಈಗ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾವೈರಸ್‌ನ ಅತ್ಯಂತ ಅಪಾಯಕಾರಿ ರೂಪಾಂತರಿಯಾದ ಡೆಲ್ಟಾಗಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುವ ಒಮೈಕ್ರಾನ್ ಆಫ್ರಿಕಾ, ಅಮೇರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿ ಹೊಸ ಅಲೆಗೆ ಕಾರಣವಾಗಿದೆ. ಹೀಗಾಗಿ ಭಾರತದಲ್ಲಿಯೂ ಮೂರನೇ ಆಲೆಯ ಆತಂಕ ಮನೆಮಾಡಿದೆ.
ಇನ್ನು ಸೌರವ್ ಗಂಗೂಲಿ ಈ ವರ್ಷದಲ್ಲಿ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಜನವರಿಯಲ್ಲಿ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿ ಆಂಜಿಯೋ ಪ್ಲಾಸ್ಟಿಗೆ ಒಳಗಾಗಿದ್ದರು. 20 ದಿನಗಳ ನಂತರ ಗಂಗೂಲಿಗೆ ಮತ್ತೊಮ್ಮೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಜನವರಿ 28ರಂದು ಎರಡನೇ ಬಾರಿಗೆ ಸೌರವ್ ಗಂಗೂಳಿ ಆಂಜಿಯೋ ಪ್ಲಾಸ್ಟಿಗೆ ಒಳಗಾಗಿದ್ದರು. ಒಟ್ಟು ಎರಡು ಸ್ಟಂಟ್‌ಗಳನ್ನು ಸೌರವ್ ಗಂಗೂಲಿಗೆ ಅಳವಡಿಸಲಾಗಿತ್ತು. ಅದಾದ ಬಳಿಕ ಚೇತರಿಸಿಕೊಂಡ ಸೌರವ್ ಗಂಗೂಲಿ ಮಾರ್ಚ್ ತಿಂಗಳ ಬಳಿಕ ಮತ್ತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗತೊಡಗಿದ್ದಾರೆ. ಇನ್ನು ಸೌರವ್ ಗಂಗೂಲಿ ಕೊರೊನಾವೈರಸ್‌ನ ಎರಡು ಡೋಸ್ ವ್ಯಾಕ್ಸಿನ್ ಕೂಡ ಹಾಕಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications