For Quick Alerts
ALLOW NOTIFICATIONS  
For Daily Alerts
 

ಗಂಗೂಲಿಯಲ್ಲಿ ಪತ್ತೆಯಾಗಿರುವುದು ಡೆಲ್ಟಾ ರೂಪಾಂತರಿ ಕೋವಿಡ್-19: ಸ್ಪಷ್ಟಪಡಿಸಿದ ಆಸ್ಪತ್ರೆ

BCCI President Sourav Ganguly had tested positive for delta plus variant of coronavirus: Hospital
Kohli ಅನ್ನು ಚೇಂಜ್ ಮಾಡಲು Dravid ಪ್ರಯತ್ನವನ್ನು ರಿವೀಲ್ ಮಾಡಿದ KL Rahul | Oneindia Kannada

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಕೊರೊನಾವೈರಸ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮನೆಯಲ್ಲಿಯೇ ಎರಡು ವಾರಗಳ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಈ ಸಂದರ್ಭದಲ್ಲಿ ಸೌರವ್ ಗಂಗೂಲಿಯಲ್ಲಿ ಪತ್ತೆಯಾಗಿರುವುದು ಇತ್ತೀಚಿನ ಒಮಿಕ್ರಾನ್ ರೂಪಾಂತರಿಯಾ ಎಂಬು ಪ್ರಶ್ನೆಗಳು ಎದ್ದಿತ್ತು. ಇದಕ್ಕೆ ಆಸ್ಪತ್ರೆಯಿಂದ ಈಗ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸೌರವ್ ಗಂಗೂಲಿಯಲ್ಲಿ ಪತ್ತೆಯಾಗಿರುವುದು ಒಮಿಕ್ರಾನ್ ರೂಪಾಂತರಿಯಲ್ಲ, ಡೆಲ್ಟಾ ಮಾದರಿಯ ವೈರಸ್ ಎಂಬುದು ಖಚಿತವಾಗಿದೆ.

ಇನ್ನು ಗಂಗೂಲಿ ವೈದ್ಯಾಧಿಕಾರಗಳು ನೀಡಿರುವ ಮಾಹಿತಿಯ ಪ್ರಕಾರ ಸೌರವ್ ಗಂಗೂಲಿ ತಮ್ಮ ನಿವಾಸದಲ್ಲಿ ವೈದ್ಯರ ನಿಗಾದಲ್ಲಿದ್ದು ಐಸೋಲೇಶನ್‌ಗೆ ಒಳಗಾಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ.

ಕಳೆದ ಸೋಮವಾರ ಕೊರೊನಾವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದರು. ನಂರ ಅವರ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಗಂಗೂಲಿ ಕೊಲ್ಕತ್ತಾದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ದೇಶಾದ್ಯಂತ ಕೊರೊನಾವೈರಸ್ ನಿಯಂತ್ರಣಕ್ಕೆ ಬಂದಿದ್ದರೂ ಮೂರನೇ ಅಲೆಯ ಭೀತಿ ಹೆಚ್ಚಾಗಿದೆ. ಅದರಲ್ಲೂ ಒಮೈಕ್ರಾನ್ ರೂಪಾಂತರಿಯ ಆತಂಕ ಈಗ ವಿಶ್ವದೆಲ್ಲೆಡೆಯಿದ್ದು ಭಾರತಲ್ಲಿಯೂ ಒಮಿಕ್ರಾನ್ ರೂಪಾಂತರಿ ವೈರಸ್ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಆತಂಕವಿದೆ. ಇದೇ ಸಂದರ್ಭದಲ್ಲಿ ದೇಶದ ಕೆಲ ಭಾಗಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಪತ್ತೆಯಾದ ಕೊರೊನಾವೈರಸ್‌ನ ಹೊಸ ರೂಪಾಂತರಿ ಒಮೈಕ್ರಾನ್ ಈಗ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಕೊರೊನಾವೈರಸ್‌ನ ಅತ್ಯಂತ ಅಪಾಯಕಾರಿ ರೂಪಾಂತರಿಯಾದ ಡೆಲ್ಟಾಗಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುವ ಒಮೈಕ್ರಾನ್ ಆಫ್ರಿಕಾ, ಅಮೇರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿ ಹೊಸ ಅಲೆಗೆ ಕಾರಣವಾಗಿದೆ. ಹೀಗಾಗಿ ಭಾರತದಲ್ಲಿಯೂ ಮೂರನೇ ಆಲೆಯ ಆತಂಕ ಮನೆಮಾಡಿದೆ.

ಇನ್ನು ಸೌರವ್ ಗಂಗೂಲಿ ಈ ವರ್ಷದಲ್ಲಿ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಜನವರಿಯಲ್ಲಿ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿ ಆಂಜಿಯೋ ಪ್ಲಾಸ್ಟಿಗೆ ಒಳಗಾಗಿದ್ದರು. 20 ದಿನಗಳ ನಂತರ ಗಂಗೂಲಿಗೆ ಮತ್ತೊಮ್ಮೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಜನವರಿ 28ರಂದು ಎರಡನೇ ಬಾರಿಗೆ ಸೌರವ್ ಗಂಗೂಳಿ ಆಂಜಿಯೋ ಪ್ಲಾಸ್ಟಿಗೆ ಒಳಗಾಗಿದ್ದರು. ಒಟ್ಟು ಎರಡು ಸ್ಟಂಟ್‌ಗಳನ್ನು ಸೌರವ್ ಗಂಗೂಲಿಗೆ ಅಳವಡಿಸಲಾಗಿತ್ತು. ಅದಾದ ಬಳಿಕ ಚೇತರಿಸಿಕೊಂಡ ಸೌರವ್ ಗಂಗೂಲಿ ಮಾರ್ಚ್ ತಿಂಗಳ ಬಳಿಕ ಮತ್ತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗತೊಡಗಿದ್ದಾರೆ. ಇನ್ನು ಸೌರವ್ ಗಂಗೂಲಿ ಕೊರೊನಾವೈರಸ್‌ನ ಎರಡು ಡೋಸ್ ವ್ಯಾಕ್ಸಿನ್ ಕೂಡ ಹಾಕಿಸಿಕೊಂಡಿದ್ದಾರೆ.

Story first published: Sunday, January 2, 2022, 9:35 [IST]
Other articles published on Jan 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+