Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಲೀಗ್‌ ಪಂದ್ಯಗಳು ನಡೆಯುವ ತಾಣದ ಬಗ್ಗೆ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ

BCCI President Sourav Ganguly hints possible venues for IPL 2022 League matches

ದೇಶದಲ್ಲಿ ಕೊರೊನಾವೈರಸ್‌ನ ಮೂರನೇ ಅಲೆಯ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ ಆವೃತ್ತಿ ಆಯೋಜಿಸುವ ತಾಣದ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ಟೂರ್ನಿ ಭಾರತದಲ್ಲಿಯೇ ನಡೆಯಲಿದೆಯಾ ಅಥವಾ ವಿದೇಶದಲ್ಲಿ ಅಯೋಜನೆಯಾಗಲಿದೆಯಾ ಎಂಬ ಬಗ್ಗೆಯೂ ಗೊಂದಲಗಳು ಉಳಿದುಕೊಂಡಿದೆ. ಈ ಸಂದರ್ಬದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಆಯೋಜನೆಯಾಗಲಿರುವ ತಾಣದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಲೀಗ್ ಪಂದ್ಯ ಆಯೋಜನೆಯಾಗುವ ತಾಣದ ಬಗ್ಗೆ ಸಣ್ಣ ಸುಳಿವನ್ನು ಕೂಡ ಗಂಗೂಲಿ ಬಿಟ್ಟುಕೊಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿಚಾರವಾಗಿ ಮಾತನಾಡಿದ್ದು ಐಪಿಎಲ್ 2022ರ ಆವೃತ್ತಿ ಭಾರತದಲ್ಲಿಯೇ ಆಯೋಜನೆಯಾಗುವ ಸಂಭವವಿದೆ ಎಂದಿದ್ದಾರೆ. ಕೊರೊನಾವೈರಸ್‌ನ ಪರಿಸ್ಥಿತಿ ಕೈಮೀರದಿದ್ದರೆ ಭಾರತದಲ್ಲಿ ನಡೆಯುವುದು ಸ್ಪಷ್ಟ ಎಂದಿದ್ದಾರೆ ಗಂಗೂಲಿ. ಈ ಸಂದರ್ಭದಲ್ಲಿ ಅವರು ಐಪಿಎಲ್‌ನ ಲೀಗ್ ಪಂದ್ಯ ಆಯೋಜನೆಯಾಗಬಹುದಾದ ತಾಣಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಭಾರತ ಕ್ರಿಕೆಟ್ ತಮಡದ ಮಾಜಿ ನಾಯಕನೂ ಆಗಿರುವ ಸೌರವ್ ಗಂಗೂಲಿ ಐಪಿಎಲ್ 15ನೇ ಆವೃತ್ತಿಯ ಲೀಗ್ ಪಂದ್ಯಗಳು ಎರಡು ತಾಣಗಳಲ್ಲಿ ನಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಲೀಗ್ ಪಂದ್ಯಗಳು ಮುಂಬೈ ಹಾಗೂ ಪುಣೆಯಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆಯನ್ನು ರೂಪಿಸುತ್ತಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಆದರೆ ಈ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶವನ್ನು ನೀಡಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಗಂಗೂಲಿ ನೀಡಿಲ್ಲ.

"ಕೊರೊನಾವೈರಸ್ ಉತ್ತುಂಗವನ್ನು ತಲುಪದಿದ್ದರೆ ಈ ಬಾರಿ ಭಾರತದಲ್ಲಿಯೇ ಐಪಿಎಲ್ ಆಯೀಜನೆ ಮಾಡಲಾಗುತ್ತದೆ. ತಾಣಗಳ ಬಗ್ಗೆ ಇನ್ನೂ ಕೂಡ ಗೊಂದಲಗಳು ಉಳಿದುಕೊಂಡಿದೆ. ನಾವು ಮಹಾರಾಷ್ಟ್ರದಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲು ಎದುರು ನೋಡುತ್ತಿದ್ದೇವೆ. ಮುಂಬೈ ಹಾಗೂ ಪುಣೆ ಲೀಗ್ ಪಂದ್ಯಗಳ ತಾಣಗಳಾಗಬಹುದು. ನಾಕ್‌ಔಟ್ ಪಂದ್ಯಗಳ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಆಲೋಚನೆಯನ್ನು ಮಾಡಲಿದ್ದೇವೆ" ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.

ಬಿಸಿಸಿಐ ಇನ್ನು ಅಧಿಕೃತವಾಗಿ ಐಪಿಎಲ್ ಆರಂಭದ ದಿನಾಂಕಗಳನ್ನು ಘೋಷಣೆ ಮಾಡಿಲ್ಲ. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಮಾಹಿತಿ ನಿಡಿದ್ದು ಮಾರ್ಚ್ ಅಂತ್ಯದ ವೇಳೆಗೆ ಟೂರ್ನಿ ಆರಂಭವಾಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳು ಸ್ಪರ್ಧೆಗಿಳಿಯುತ್ತಿದ್ದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಅಹಮದಾಬಾದ್ ತಂಡಗಳು ಹೊಸದಾಗಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಈ ಮೂಲಕ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

Story first published: Friday, February 4, 2022, 18:17 [IST]
Other articles published on Feb 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+