Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗದಿ: ಮಾಹಿತಿ ನೀಡಿದ ಗಂಗೂಲಿ

Bcci President Sourav Ganguly On Ipl 2020 Time Table

ಕೊನೆಗೂ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಎಬಿಪಿ ಸುದ್ದಿವಾಹಿನಿಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ಅದು ವರದಿ ಮಾಡಿದ್ದು ಸೆಪ್ಟೆಂಬರ್ 4 ರಂದು ಅಂದರೆ ಶುಕ್ರವಾರ ಈ ಬಾರಿಯ ಐಪಿಎಲ್ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ಬಾರಿಯ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಹಲವ ಅಡ್ಡಿವುಂಟಾಗಿತ್ತು. ಹೀಗಾಗಿ ಐಪಿಎಲ್ ಆರಂಬಕ್ಕೆ ದಿನಗಣನೆ ಆರಂಭವಾಗಿದ್ದರೂ ಈವರೆಗೂ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿಲ್ಲ. ಹೀಗಾಗಿ ಫ್ರಾಂಚೈಸಿಗಳು ಈ ಬಗ್ಗೆ ಇನ್ನು ಕೂಡ ಗೊಂದಲದಲ್ಲೇ ಇದೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ದುಬೈ ಹಾಗೂ ಅಬುದಾಬಿ ನಡುವಿನ ಪ್ರಯಾಣ ನಿರ್ಬಂಧದ ಕಾರಣದಿಂದಾಗಿ ಮೊದಲಿಗೆ ವೇಳಾಪಟ್ಟಿಯನ್ನು ಅಂತಿಮಗೊಳಿಸುವುದು ಬಿಸಿಸಿಐಗೆ ಸವಾಲಾಗಿತ್ತು. ಅದಕ್ಕೆ ಪರಿಹಾರವನ್ನು ಕಂಡುಕೊಂಡ ಬಳಿಕ ಇನ್ನೇನು ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಂಕಷ್ಟ ಉಂಟಾಗಿತ್ತು.

ಹೌದು ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗುವ ಕೊನೆಯ ಕ್ಷಣದಲ್ಲಿ ಚಿಎಸ್‌ಕೆ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢವಾಗಿತ್ತು. ಹೀಗಾಗಿ ಮತ್ತೊಮ್ಮೆ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕಾದ ಪರಿಸ್ಥಿತಿ ಬಂದಿತ್ತು.

ಈಗ ಎಲ್ಲಾ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದು ವೇಳಾಪಟ್ಟಿ ಬಿಡುಗಡೆಗೆ ಸಿದ್ದವಾಗಿದೆ ಎನ್ನಲಾಗಿದೆ. ಚುಟುಕು ಕ್ರಿಕೆಟ್ ಸಮರ ನೋಡಲು ಕಾತರಿಸುತ್ತಿರುವ ಅಭಿಮಾನಿಗಳು ಹಾಗೂ ಆಟಗಾರರು ವೇಳಾಪಟ್ಟಿ ಬಿಡುಗಡೆಗಾಗಿ ತವಕಿಸುತ್ತಿದ್ದು ಈ ನಿರೀಕ್ಷೆ ನಾಳೆ ಸಾಕಾರಗೊಳ್ಳುವ ಸಾಧ್ಯತೆಯಿದೆ.

Story first published: Thursday, September 3, 2020, 15:38 [IST]
Other articles published on Sep 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+