For Quick Alerts
ALLOW NOTIFICATIONS  
For Daily Alerts
 

BCCI ದೊಡ್ಡ ನಿರ್ಧಾರ: ಪಾಕ್‌ಗೆ ಬಿಗ್ ಶಾಕ್‌

ಭಾರತೀಯ ಕ್ರಿಕೆಟ್‌ ಮಂಡಳಿ ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರ ನಿಜಕ್ಕೂ ಪಾಕ್‌ ಸೇರಿದಂತೆ ಏಷ್ಯಾ ಕಪ್‌ನಲ್ಲಿ ಭಾಹವಹಿಸುವ ರಾಷ್ಟ್ರಗಳಿಗೆ ನುಂಗಲಾರದ ತುತ್ತಾಗಿವೆ. ಈ ವರ್ಷದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ.ಬಿಸಿಸಿಐ ದಿಢೀರ ಈ ನಿರ್ಧಾರ ಕೈಗೊಂಡಿದ್ದರ ಹಿಂದಿನ ಕಾರಣ ಏನು ಎಂಬ ಬಗ್ಗೆ ಸ್ಪಷ್ಟತೆ ನೀಡಿಲ್ಲ.

ಬಿಸಿಸಿಐ ತನ್ನ ನಿರ್ಧಾರವನ್ನು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ತನ್ನ ಅಭಿಪ್ರಾಯವನ್ನು ತಿಳಿಸಿದೆ ಎಂದು ತಿಳಿದು ಬಂದಿದೆ. ಟೀಮ್ ಇಂಡಿಯಾ ಈ ಟೂರ್ನಿಯಿಂದ ಹಿಂದೆ ಸರಿದಿರುವುದು ಟೂರ್ನಿಗೆ ದೊಡ್ಡ ಪೆಟ್ಟು ಬಿಳುವುದು ಪಕ್ಕಾ ಆದಂತೆ ಆಗಿದೆ. ಅಲ್ಲದೆ ಟೂರ್ನಿಯ ಸಿದ್ಧತೆಗಳ ಮೇಲೂ ಪರಿಣಾಮ ಬೀರಲಿದೆ.

BCCI Pulls Out Team India from Asia Cup 2025 Shocking ACC and Participating Nations

ಟೀಮ್ ಇಂಡಿಯಾ ಪಾಕ್‌ ಆಯೋಜಿತ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಭಾಗವಹಿಸಿತ್ತು. ಆದರೆ ಈ ಬಾರಿ ಭಾರತ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಿತ್ತು. ಅಲ್ಲದೆ ಪಾಕ್ ಪ್ರವಾಸವನ್ನು ಸಹ ಬೆಳೆಸಿರಲಿಲ್ಲ. ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಅಲ್ಲದೆ ಭಾರತ ಈ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೂ ಏರಿತ್ತು. ಟೀಮ್ ಇಂಡಿಯಾದ ಈ ಪ್ರದರ್ಶನವನ್ನು ನೋಡಿದ ಬಳಿಕ ಟೀಮ್ ಇಂಡಿಯಾ, ಮತ್ತೊಂದು ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಿಸಿಸಿಐ ನಿರ್ಧಾರ ನಿಜಕ್ಕೂ ಬೇಸರ ತರಿಸಿದೆ.

ಬಿಸಿಸಿಐ ಹಿಂದೆ ಸರಿದ್ರೆ ಏನಾಗುತ್ತದೆ?

ಈ ಬಾರಿಯ ಏಷ್ಯಾಕಪ್‌ನ್ನು ಸೆಪ್ಟಂಬರ್‌ನಲ್ಲಿ ಆಯೋಜಿಸ ಬೇಕಿತ್ತು. ಬಿಸಿಸಿಐ ಈ ಕಠಿಣ ನಿರ್ಧಾರದ ಬಳಿಕ ಈ ಟೂರ್ನಿಯ ಭವಿಷ್ಯವೂ ಸಹ ತೂಗುಯ್ಯಾಲೆಯಲ್ಲಿದೆ. ಇನ್ನು ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕ್‌ ಪಂದ್ಯಕ್ಕಾಗಿ ಆಯೋಜಕರು ವಿಶೇಷ ಆಸಕ್ತಿಯನ್ನು ಎಂದಿನಂತೆ ಹೊಂದಿದ್ದರು ಎಂದು ತಿಳಿದು ಬಂದಿದೆ. ಭಾರತ ಭಾಗವಹಿಸದೇ ಏಷ್ಯಾ ಕಪ್‌ ಆಯೋಜಿಸದರೆ ನಿಶ್ಚಿತವಾಗಿ ಆಯೋಜಕರ ಜೇಬಿಗೆ ಕತ್ತರಿ ಬೀಳುತ್ತದೆ. ಬಿಸಿಸಿಐ ತೆಗೆದುಕೊಂಡಿರುವ ಆ ಒಂದು ನಿರ್ಧಾರ ಎಸಿಸಿ ನಿದ್ದೆ ಗೆಡಿಸಿರುವುದು ಸುಳ್ಳಲ್ಲ.

ಉದಯೋನ್ಮುಖ ಮಹಿಳಾ ಏಷ್ಯಾ

ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖ ಮಹಿಳಾ ಏಷ್ಯಾ ಕಪ್‌ನಿಂದಲೂ ಭಾರತ ಹಿಂದೆ ಸರಿದಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಬಿಸಿಸಿಐ ಪ್ರತಿಕ್ರಿಯೆ?

ಬಿಸಿಸಿಐ ಕಾರ್ಯದರ್ಶಿ ದೇಬ್ಜಿತ್ ಸೈಕಿಯಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆಯಿಂದ ಏಷ್ಯಾ ಕಪ್‌ ಹಾಗೂ ಮಹಿಳಾ ಉದಯೋನ್ಮುಖ ಏಷ್ಯಾ ಕಪ್‌ನಲ್ಲಿ ಭಾರತ ಭಾಗವಹಿಸುತ್ತಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇನ್ನು ಬಿಸಿಸಿಐ ತನ್ನ ಮುಂದಿನ ಟೂರ್ನಿಯ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ.

Story first published: Monday, May 19, 2025, 16:00 [IST]
Other articles published on May 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+