Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

BCCI receives request to reduce quarantine duration for IPL-bound Australian-England players

ನವದೆಹಲಿ: ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಆಕರ್ಷಣೀಯ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಕೆಲ ವಿದೇಶಿ ಆಟಗಾರರು ಮಿಸ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕೊರೊನಾವೈರಸ್ ಕಾರಣ ಐಪಿಎಲ್‌ ಆಟಗಾರರಿಗೆ ಕ್ವಾರಂಟೈನ್‌ ನಿಯಮವಿರುವುದರಿಂದ ಇಂಗ್ಲೆಂಡ್-ಆಸ್ಟ್ರೇಲಿಯಾ ಆಟಗಾರರಿಗೆ ಟೂರ್ನಿಯ ಆರಂಭದಲ್ಲಿ ಪಾಲ್ಗೊಳ್ಳಲು ತೊಂದರೆಯಾಗಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಸದ್ಯ ಆತಿಥೇಯರ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಿತ್ತು.

ಇಂಗ್ಲೆಂಡ್-ಆಸ್ಟ್ರೇಲಿಯಾ ಏಕದಿನ ಸರಣಿಯ ಎರಡು ಪಂದ್ಯಗಳು ಮುಗಿದಿವೆ. ಇತ್ತಂಡಗಳ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯ ಬುಧವಾರ (ಸೆಪ್ಟೆಂಬರ್ 16) ನಡೆಯಲಿದೆ.

ಕ್ವಾರಂಟೈನ್ ದಿನ ಕಡಿತಕ್ಕೆ ಪತ್ರ

ಕ್ವಾರಂಟೈನ್ ದಿನ ಕಡಿತಕ್ಕೆ ಪತ್ರ

ಇಂಗ್ಲೆಂಡ್-ಆಸ್ಟ್ರೇಲಿಯಾ ಪ್ರವಾಸ ಸರಣಿ ಕೊನೆಗೊಂಡ ಬಳಿಕವಷ್ಟೇ ಎರಡೂ ತಂಡದಲ್ಲಿರುವ ಐಪಿಎಲ್ ಆಟಗಾರರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಲಿದ್ದಾರೆ. ಯುಎಇ ತಲುಪಿದ ಬಳಿಕ 6 ದಿನಗಳ ಕ್ವಾರಂಟೈನ್ ಪಾಲಿಸಬೇಕು ಅನ್ನೋದು ಈಗಿನ ನಿಯಮ. ಆದರೆ ಕ್ವಾರಂಟೈನ್ ದಿನಗಳನ್ನು ಕಡಿತಗೊಳಿಸಬೇಕೆಂದು ಕೋರಿ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಬಿಸಿಸಿಗೆ ಪತ್ರ ಬಂದಿದೆ.

6ರಿಂದ 3 ದಿನಕ್ಕೆ ಇಳಿಸಲು ವಿನಂತಿ

6ರಿಂದ 3 ದಿನಕ್ಕೆ ಇಳಿಸಲು ವಿನಂತಿ

ಕ್ವಾರಂಟೈನ್‌ ನಿಯಮದಲ್ಲಿರುವ 6 ದಿನಗಳನ್ನು 3ಕ್ಕೆ ಇಳಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬಂದಿದೆ ಎಂದು ವರದಿಯೊಂದು ಹೇಳಿದೆ. ಇಂಗ್ಲೆಂಡ್‌ನಿಂದ ಯುಎಯಿಗೆ ಹೊರಡಲಿರುವ ಆಟಗಾರರರು ಕ್ವಾರಂಟೈನ್ ನಿಯಮ ಸಡಿಲಿಸುವಂತೆ ಬಿಸಿಸಿಐಯನ್ನು ವಿನಂತಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 23ರಿಂದ ಲಭ್ಯ

ಸೆಪ್ಟೆಂಬರ್ 23ರಿಂದ ಲಭ್ಯ

ಐಪಿಎಲ್‌ನಲ್ಲಿರುವ ಸುಮಾರು 21 ಆಟಗಾರರು ಇಂಗ್ಲೆಂಡ್ vs ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮ್ಯಾನ್ಚೆಸ್ಟರ್‌ನಿಂದ ಹೊರಡಲಿರುವ ಆಟಗಾರರ ವಿಮಾನ ಸೆಪ್ಟೆಂಬರ್ 17ರಂದು ಯುಎಇಗೆ ತಲುಪಲಿದೆ. ಅಲ್ಲಿಂದ 6 ದಿನಗಳ ಕ್ವಾರಂಟೈನ್ ಅಂದರೆ ಸೆಪ್ಟೆಂಬರ್ 23ರಿಂದಷ್ಟೇ ಆಟಗಾರರು ಐಪಿಎಲ್‌ಗೆ ಲಭ್ಯರಿರಲಿದ್ದಾರೆ. ಆದರೆ ಆಟಗಾರರಿಗೆ ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಬಿಸಿಸಿಐ ಮೊರೆ ಹೋಗಿದ್ದಾರೆ.

ಗಂಗೂಲಿಗೆ ಪತ್ರ ತಲುಪಿದೆ

ಗಂಗೂಲಿಗೆ ಪತ್ರ ತಲುಪಿದೆ

'ಹೌದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆಟಗಾರರು ಬರೆದಿರುವ ಪತ್ರ ತಲುಪಿದೆ. ಇದು ಒಬ್ಬನೇ ಆಟಗಾರ ಬರೆದಿದ್ದಲ್ಲ; ಇಂಗ್ಲೆಂಡ್‌ನಿಂದ ಯುಎಇಗೆ ಬರುತ್ತಿರುವ ಇಂಗ್ಲೆಂಡ್-ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಸೇರಿ ಬರೆದಿದ್ದಾರೆ ಎಂದು ನನಗನ್ನಿಸುತ್ತಿದೆ,' ಎಂದು ಐಪಿಎಲ್ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.

Story first published: Wednesday, September 16, 2020, 10:30 [IST]
Other articles published on Sep 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+