ICC ಟಿ20 ವಿಶ್ವಕಪ್ ಆತಿಥ್ಯಕ್ಕೆ ಒಪ್ಪದ ಬಿಸಿಸಿಐ: ಇಲ್ಲಿದೆ ಕಾರಣ
ಬಾಂಗ್ಲಾದಲ್ಲಿ ಮೀಸಲಾತಿ ಹಿಂಸಾಚಾರ ದಿನ ಕಳೆದಂತೆ ಕಮ್ಮಿ ಏನು ಆಗುತ್ತಿಲ್ಲ. ಈ ಹಿಂಸಾಚಾರದ ಬಿಸಿ ಈಗ ಕ್ರೀಡಾಕೂಟಕ್ಕೂ ಬಡೆದಿದೆ. ಬಾಂಗ್ಲಾದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗಮನಿಸುತ್ತಿದೆ. ಏಕೆಂದರೆ ಈ ಬಾರಿ ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದಲ್ಲಿ ಅಕ್ಟೋಬರ್ 3-20 ರವರೆಗೆ ನಡೆಯಲಿದೆ.
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ (ಬಿಸಿಬಿ) ಸಹ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸುವಂತೆ ಮನವಿಯನ್ನು ಮಾಡಿತ್ತು. ಆದರೆ ಈ ಬೇಡಿಕೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿರಸ್ಕರಿಸಿದ್ದಾರೆ.

ಟಿ20 ವಿಶ್ವಕಪ್ ಮೇಲೆ ಕರಿ ನೆರಳು
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಐಸಿಸಿ ಸಹ ಗಮನಿಸುತ್ತುದೆ. ಇನ್ನು ಈ ದೇಶದಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ದೇಶದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ಐಸಿಸಿ ಸಹ ಟೂರ್ನಿಯನ್ನು ನಡೆಸುವ ಬಗ್ಗೆ ಯೋಚಿಸುತ್ತಿದೆ. ಬಾಂಗ್ಲಾದಲ್ಲಿ ಪರಿಸ್ಥಿತಿಗಳು ಹೀಗೆಯೆ ಮುಂದುವರೆದಲ್ಲಿ ಐಸಿಸಿ ತನ್ನ ತೀರ್ಮಾನವನ್ನು ಕೈಗೊಳ್ಳಬಹುದಾಗಿದೆ. ಈ ಪಂದ್ಯಾವಳಿಯು ಅಕ್ಟೋಬರ್ 3-20 ರವರೆಗೆ ಬಾಂಗ್ಲಾದ ಎರಡು ಮೈದಾನಗಳಲ್ಲಿ ನಡೆಯಲಿದೆ.
ಜಯ್ ಶಾ ಹೇಳಿದ್ದೇನು?
ಟೈಮ್ಸ್ ಆಫ್ ಇಂಡಿಯಾದ ಜೊತೆ ಈ ಬಗ್ಗೆ ಜಯ್ ಶಾ ಮಾತನಾಡಿದ್ದಾರೆ. ಬಿಸಿಸಿಐ ಮಹಿಳಾ ಟಿ 20 ವಿಶ್ವಕಪ್ ಅನ್ನು ಆಯೋಜಿಸಬಹುದೇ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಭಾರತದಲ್ಲಿ ಈ ಸಮಯದಲ್ಲಿ ದೇಶೀಯ ಟೂರ್ನಿಗಳು ನಡೆಯಲಿವೆ. ಅಲ್ಲದೆ ಮುಂದಿನ ವರ್ಷ ನಮ್ಮ ದೇಶದಲ್ಲಿ ಮತ್ತೊಂದು ಐಸಿಸಿ ಈವೆಂಟ್ ನಡೆಯಲಿದೆ. ಮಹಿಳೆಯ ಏಕದಿನ ವಿಶ್ವಕಪ್ ಆಯೋಜಿಸಲು ಸಿದ್ಧತೆಗಳು ನಡೆದಿವೆ. ಈ ಬೆನ್ನಲ್ಲೆ ಟಿ20 ವಿಶ್ವಕಪ್ ಆಯೋಜಿಸಲು ಆಗದು. ಬರೀ ಐಸಿಸಿ ಈವೆಂಟ್‌ಗಳನ್ನು ನಾವೇ ನಡೆಸುತ್ತೇವೆ ಎಂಬ ಸಂದೇಶವನ್ನು ಸಾರಲು ನಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಆಟಗಾರರ ಮನೆಗಳ ಮೇಲೂ ಕಿಡಿಗೆಡಿಗಳು ಹಿಂಸಾಚಾರ ನಡೆಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಿಸಿ ಕ್ರಿಕೆಟ್ ತಂಡದ ಮೇಲೂ ಆಗಿದೆ. ಅಲ್ಲದೆ ತಮ್ಮದೇ ದೇಶದಲ್ಲಿ ಅಭ್ಯಾಸ ಮಾಡಲು ಆಗದು ಎಂದು ಬಾಂಗ್ಲಾ ತಂಡ ಬೇರೆ ಕಡೆ ಮುಖ ಮಾಡಿದೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಬಾಂಗ್ಲಾ ಪ್ರಯಾಣ ಬೆಳೆಸಬೇಕಿತ್ತು. ಆದರೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಾಂಗ್ಲಾ ಪಾಕ್‌ಗೆ ಪ್ರಯಾಣ ಬೆಳೆಸಿದೆ. ಅಲ್ಲದೆ ಈ ವೇಳೆ ಅಲ್ಲಿ ಅಭ್ಯಾಸವನ್ನು ನಡೆಸಲಿದೆ. ಪ್ರತಿಭಟನೆಗಳು ಮತ್ತು ಇತರ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತಂಡವು ನಿಗದಿತ ದಿನಾಂಕಕ್ಕಿಂತ ಐದು ದಿನ ಮೊದಲೇ ಬಾಂಗ್ಲಾ ಪ್ರವಾಸ ಬೆಳೆಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications